ಬಿಗ್‌ಬಾಸ್ ಮನೆಯ ಹೊಸ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆಯಾಗಿದ್ದು, ಸ್ಪರ್ಧಿಗಳಿಗೆ ವಿಚಿತ್ರ ಕೆಲಸಗಳನ್ನು ಹಂಚಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ, ಕ್ಯಾಪ್ಟನ್ ಆದ ಆರಂಭದಲ್ಲೇ ಮೈಕ್ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಬಿಗ್‌ಬಾಸ್‌ನಿಂದ ಎಚ್ಚರಿಕೆ ಪಡೆದಿದ್ದಾರೆ.
ಗಿಲ್ಲಿ ನಟ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದು, ಎಲ್ಲಾ ಸ್ಪರ್ಧಿಗಳಿಗೆ ಹೇಗೆ ಕೆಲಸ ಹಂಚಿಕೆ ಮಾಡ್ತಾರೆ ಎಂಬುದರ ಕುತೂಹಲಕ್ಕೆ ತೆರೆ ಬಿದ್ದಿದೆ. ಮನೆಯ ನಾಯಕನಾಗಿರುವ ಗಿಲ್ಲಿ ತಮ್ಮದೇ ಹೊಸ ನಿಯಮಗಳನ್ನು ಮಾಡಿಕೊಂಡಿದ್ದಾರೆ.
25
ನು ಉಪ-ನಾಯಕ
ಪ್ರತಿ ಬಾರಿಯೂ ಕ್ಯಾಪ್ಟನ್ ಆಗುವ ಸ್ಪರ್ಧಿ ಹಿಂದೆ ಹೋಗ್ತಿದ್ದ ಗಿಲ್ಲಿ ನಟ, ನಾನು ಉಪ-ನಾಯಕ ಎಂದು ಹೇಳುತ್ತಿದ್ದರು. ಇದೀಗ ಸ್ವತಃ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ, ತಮ್ಮ ಸಹಾಯಕರನ್ನಾಗಿ ರಘು ಅವರನ್ನು ನೇಮಿಸಿಕೊಂಡಿದ್ದಾರೆ. ಧ್ರುವಂತ್ ಮತ್ತು ಸ್ಪಂದನಾ ಅವರನ್ನು ಅಡುಗೆಮನೆ ಕೆಲಸಕ್ಕೆ ನೇಮಿಸಲಾಗಿದೆ.
35
ಸೂರಜ್ ಮತ್ತು ಧನುಷ್ ಇಬ್ಬರು ಟಾಪ್‌ಲೆಸ್ ಡ್ಯಾನ್ಸರ್
ಸದಾ ಶಿಸ್ತಿನಿಂದಿರುವ ಧ್ರುವಂತ್‌ಗೆ ಮನೆಯನ್ನು ಗಲೀಜು ಆಗಿ ಇಟ್ಕೊಳ್ಳುವಂತೆ ಸೂಚಿಸಲಾಗಿದೆ. ರಘು ಮತ್ತು ಕಾವ್ಯಾ ಮನೆಯನ್ನು ಕ್ಲೀನ್ ಆಗಿಟ್ಟುಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿದೆ. ಸೂರಜ್ ಮತ್ತು ಧನುಷ್ ಇಬ್ಬರು ಟಾಪ್‌ಲೆಸ್ ಡ್ಯಾನ್ಸರ್ ಆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನುಳಿದ ಸದಸ್ಯರು ಇವರಿಬ್ಬರನ್ನು ರೋಸ್ಟ್ ಮಾಡಬೇಕು. ಈ ಪ್ರಕ್ರಿಯೆ ಪ್ರತಿ 2 ಗಂಟೆಗೊಮ್ಮೆ ಬದಲಾಗುತ್ತಿರುತ್ತದೆ ಎಂದು ಗಿಲ್ಲಿ ನಟ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಇನ್ನು ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಮತ್ತು ಅಶ್ವಿನಿ ಗೌಡ ಅವರಿಗೆ ಯಾವ ಕೆಲಸಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಮನೆಗೆ ಆಗಮಿಸಿದ ಕುಟುಂಬಸ್ಥರ ಆಯ್ಕೆಯನುಸಾರ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಕ್ಯಾಪ್ಟನ್ ಓಟಕ್ಕೆ ಆಯ್ಕೆಯಾಗಿದ್ದರು. ಬಿಗ್‌ಬಾಸ್ ನೀಡಿದ ಟಾಸ್ಕ್ ಗೆಲ್ಲುವ ಮೂಲಕ ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದಾರೆ.
ಕ್ಯಾಪ್ಟನ್ ಆಗುತ್ತಿದ್ದಂತೆ ತಮ್ಮ ಲುಕ್ ಬದಲಿಸಿಕೊಂಡ ಗಿಲ್ಲಿ ನಟ ಆರಂಭದಲ್ಲಿಯೇ ಎಡವಟ್ಟು ಮಾಡಿಕೊಂಡಿದ್ದರು. ಕ್ಯಾಪ್ಟನ್ ರೂಮ್‌ಗೆ ಜೋಶ್‌ನಲ್ಲಿ ಎಂಟ್ರಿ ನೀಡುತ್ತಿರುವ ವೇಳೆ ಗಿಲ್ಲಿ ನಟ ಮೈಕ್ ಸರಿಯಾದ ಕ್ರಮದಲ್ಲಿ ಧರಿಸಿಕೊಂಡಿರಲಿಲ್ಲ. ಈ ಸಮಯದಲ್ಲಿ ಮೈಕ್ ಸರಿಯಾಗಿ ಹಾಕಿಕೊಳ್ಳುವಂತೆ ಬಿಗ್‌ಬಾಸ್ ಸೂಚನೆ ನೀಡುತ್ತಾರೆ. ಆರಂಭದಲ್ಲಿಯೇ ಎಡವಟ್ಟು ಮಾಡಿಕೊಂಡ ಗಿಲ್ಲಿ ನಟ, ಇಡೀ ವಾರ ಮನೆಯನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂಬುದರ ಬಗ್ಗೆ ಚರ್ಚಗಳು ಶುರುವವಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.