ಸೀಕ್ರೆಟ್ ರೂಮ್‌ನಿಂದ ಮರಳಿದ ರಕ್ಷಿತಾ ಶೆಟ್ಟಿ, ತಾನಿಲ್ಲದೆ ಮನೆಗೆ ಸ್ಪಾರ್ಕ್ ಇರಲಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ, 'ಭ್ರಮೆಯಲ್ಲಿರುವ ಸ್ಪರ್ಧಿ' ಟಾಸ್ಕ್‌ನಲ್ಲಿ ಬಹುತೇಕ ಸದಸ್ಯರು ರಕ್ಷಿತಾ ಅವರ ಬಲೂನ್ ಒಡೆದು, ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ಸೀಕ್ರೆಟ್ ರೂಮ್‌ನಿಂದ ಬಂದ ರಕ್ಷಿತಾ ಶೆಟ್ಟಿ ಶನಿವಾರದ ಸಂಚಿಕೆಯಲ್ಲಿ ಮನೆ ಸದಸ್ಯರ ನಿರ್ಧಾರ ತಪ್ಪು, ತಾನಿಲ್ಲದೇ ಒಂದು ಸ್ಪಾರ್ಕ್ ಇರಲಿಲ್ಲ. ಕಾವ್ಯಾ ಅದೃಷ್ಟದಿಂದ ಕ್ಯಾಪ್ಟನ್ ಆಗಿದ್ದಾರೆ. ನಾಮಿನೇಷನ್ ಭಯದಿಂದ ಮನೆಯ ಸದಸ್ಯರು ಕಾವ್ಯಾ ಪರವಾಗಿದ್ದಾರೆ. ಹೀಗೆ ಹಲವು ಹೇಳಿಕೆಗಳನ್ನು ನೀಡಿದ್ದರು. ಇದೀಗ ಮನೆಯ ಸದಸ್ಯರು ರಕ್ಷಿತಾ ಶೆಟ್ಟಿ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
25
ಕಾರಣ ಹೇಳಿ ಬಲೂನ್ ಒಡೆಯಿರಿ
ಇಂದಿನ ಸಂಚಿಕೆಯಲ್ಲಿ ಸುದೀಪ್ ಮನೆಯ ಸದಸ್ಯರಿಗೆ ವಿಶೇಷವಾದ ಟಾಸ್ಕ್ ನೀಡುತ್ತಾರೆ. ಸ್ಪರ್ಧಿಗಳು ತಲೆಗಳಿಗೆ ಬಲೂನ್ ಕಟ್ಟಿಕೊಂಡಿರುತ್ತಾರೆ. ಇನ್ನು ಭ್ರಮೆಯಲ್ಲಿ ಬದುಕುತ್ತಿರುವ ಸ್ಪರ್ಧಿ ಯಾರು ಎಂಬ ಹೆಸರು ಹೇಳಿ ಅವರ ಬಲೂನ್ ಒಡೆಯಬೇಕು. ನಂತರ ಇದಕ್ಕೆ ಕಾರಣವನ್ನು ಸಹ ನೀಡಬೇಕು. ಈ ವೇಳೆ ಯಾರು ಯಾರ ಬಲೂನ್ ಒಡೆದಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
35
ಯಾರ ಬಲೂನ್‌ಗೆ ಪಿನ್
ಫ್ರೆಂಡ್‌ಶಿಪ್ ಅನ್ನೋ ಹೆಸರಿನಲ್ಲಿ ನಾನು ಅವರನ್ನು ಅವಮಾನ ಮಾಡಿ ನೋವುಂಟು ಮಾಡ್ತಿದ್ದೇನೆ ಎಂಬ ಭ್ರಮೆಯಲ್ಲಿ ರಘು ಇದ್ದಾರೆ ಎಂದು ಗಿಲ್ಲಿ ನಟ ಹೇಳುತ್ತಾರೆ. ಇನ್ನುಳಿದಂತೆ ಬಹುತೇಕ ಸದಸ್ಯರು ರಕ್ಷಿತಾ ಶೆಟ್ಟಿ ಬಲೂನ್ ಒಡಡೆದಿದ್ದಾರೆ. ರಜತ್ ಬಲೂನ್ ಅಶ್ವಿನಿ ಒಡೆದರೆ, ಅಶ್ವಿನಿ ಬಲೂನ್‌ಗೆ ರಕ್ಷಿತಾ ಪಿನ್ ಚುಚ್ಚಿದ್ದಾರೆ. ಧ್ರುವಂತ್ ಬಲೂನ್‌ಗೆ ರಘು ಪಿನ್ ಚುಚ್ಚಿರೋದನ್ನು ಇಂದಿನ ಪ್ರೋಮೋದಲ್ಲಿ ಕಾಣಬಹುದು.
ಧ್ರುವಂತ್, ಧನುಷ್, ರಾಶಿಕಾ ಮತ್ತು ಕಾವ್ಯಾ ಶೈವ್ ನಾಲ್ವರು ರಕ್ಷಿತಾ ಹೆಸರು ಹೇಳಿ, ತಮ್ಮ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಕ್ಷಿತಾ ತಲೆಯಲ್ಲಿ ಅವಳು ಪರ್ಫೆಕ್ಟ್ ಅಂತಿದೆ ಎಂದು ರಾಶಿಕಾ ಹೇಳುತ್ತಾರೆ. ಅವಳು ಹೇಳಿದ್ದೇ ಕರೆಕ್ಟ್, ಅವಳನ್ನು ಬಿಟ್ರೆ ಬೇರೆ ಯಾರು ಇಲ್ಲ ಎಂಬ ಭ್ರಮೆಯಲ್ಲಿ ರಕ್ಷಿತಾ ಇದ್ದಾರೆ ಎಂದು ಧ್ರುವಂತ್ ತಮ್ಮ ಕಾರಣವನ್ನು ನೀಡಿದ್ದಾರೆ.
ಶನಿವಾರದ ಸಂಚಿಕೆಯಲ್ಲಿ ತಮ್ಮ ವಿರುದ್ದ ಹಲವು ಹೇಳಿಕೆಗಳನ್ನು ನೀಡಿದ್ದ ರಕ್ಷಿತಾ ಬಲೂನ್ ಒಡೆದ ಕಾವ್ಯಾ, ನಾನಿಲ್ಲದೇ ಈ ಮನೆಯಲ್ಲಿ ಸ್ಪಾರ್ಟ್ ಇಲ್ಲ ಅನ್ನೋದು ತಪ್ಪು. ವಿಶ್ವಾಸದಲ್ಲಿರಬೇಕು ಆದ್ರೆ ಅತಿಯಾದ ವಿಶ್ವಾಸದಲ್ಲಿರಬಾರದು ಎಂದು ಸಲಹೆ ನೀಡಿದ್ದಾರೆ. ಈ ಪ್ರೋಮೋ ನೋಡಿದ ನೆಟ್ಟಿಗರು, ಈ ಬಾರಿ ರಕ್ಷಿತಾ ಶೆಟ್ಟಿ ನಾಮಿನೇಟ್ ಆಗೋದು ಫಿಕ್ಸ್ ಎಂದು ಭವಿಷ್ಯ ನುಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.