Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಗೆಲ್ಲಲೇಬಾರದು ಎಂದು ಪ್ಲ್ಯಾನ್ ಮಾಡಿದ್ರಿ. ನೀವು ಮನೆಯೊಳಗಡೆ ಬಂದಾಗ, ಅವರು ಕ್ಯಾಪ್ಟನ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆ ಬಗ್ಗೆ ಚರ್ಚೆ ನಡೆದಿದೆ. ರಕ್ಷಿತಾ ಮಾತನ್ನು ಉಳಿದವರು ವಿರೋಧ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜೋಡಿಗಳನ್ನು ಮಾಡಿ ಕ್ಯಾಪ್ಟನ್ಸಿ ಟಾಸ್ಕ್ ಆಡಿಸಲಾಗಿತ್ತು. ಆ ವೇಳೆ ಸೂರಜ್ ಹಾಗೂ ಕಾವ್ಯ ಶೈವ ಅವರು ಗೆದ್ದರು. ಇವರಲ್ಲಿ ಒಬ್ಬರು ಕ್ಯಾಪ್ಟನ್ ಆಗಬೇಕಿತ್ತು. ಈ ನಿರ್ಧಾರವನ್ನು ಬಿಗ್ ಬಾಸ್ ಮನೆಯವರಿಗೆ ನೀಡಿದರು. ಕಾವ್ಯ ಅವರು ಕ್ಯಾಪ್ಟನ್ ಆಗಬೇಕು ಎಂದು ಬಹುಮತ ಸಿಕ್ಕಿತು. ಇದನ್ನು ರಕ್ಷಿತಾ ಅವರು ವಿರೋಧ ಮಾಡಿದ್ದಾರೆ.
28
ಕಾವ್ಯ ಕ್ಯಾಪ್ಟನ್ ಆಗಿದ್ದು ರಕ್ಷಿತಾಗೆ ಇಷ್ಟವೇ ಇಲ್ಲ
“ಕಾವ್ಯ ಅವರಿಗೆ ಸೇಫ್ ಮಾಡುವಾಗ ಬೇಜಾರು ಆಯ್ತು. ಕಾವ್ಯ ಸೇಫ್ ಆಗಲು ಲಾಯಕ್ಕಿಲ್ಲ. ಆಗ ಬಿಗ್ ಬಾಸ್ ಅಧಿಕಾರ ಕೊಟ್ಟಾಗ, ನಾನು ಸ್ಟ್ರಾಂಗ್, ವೀಕ್ ಎಂದು ಗುಂಪು ಮಾಡ್ತೀನಿ. ಅಲ್ಲಿ ಕಾವ್ಯ ಶೈವ ಅವರು ಅದೃಷ್ಟದಿಂದ ಗೆದ್ದರು. ಕ್ಯಾಪ್ಟನ್ ಎಂದು ಕಾವ್ಯ ಫೈಯರ್ ಬರಲಿಲ್ಲ. ಇಡೀ ಮನೆಯವರು ಬೆಂಬಲದಿಂದ ಗೆಲ್ಲಿಸಿದ್ದಾರೆ, ಆದರೆ ಕಾವ್ಯ ಕ್ಯಾಪ್ಟನ್ ಆಗಲು ಅರ್ಹತೆಯಿಲ್ಲ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
38
ರಕ್ಷಿತಾ ಅಭಿಪ್ರಾಯ ಬದಲಾಗಬಹುದಾ?
ಈ ವಿಚಾರವನ್ನು ಕಿಚ್ಚ ಸುದೀಪ್ ಅವರು ಮತ್ತೆ ಚರ್ಚೆ ಮಾಡಿದ್ದಾರೆ. ಆಗ ರಕ್ಷಿತಾ ಅವರ ಮನಸ್ಸಿನಲ್ಲಿ “ಕಾವ್ಯ ಅವರ ಬಗ್ಗೆ ನನ್ನ ಅಭಿಪ್ರಾಯ ಸರಿ ಇದೆ, ಉಳಿದವರ ಅಭಿಪ್ರಾಯ ಕರೆಕ್ಟ್ ಇಲ್ಲ ಎಂದು ಇರೋದು ಬಯಲಾಗಿದೆ. ಬೇರೆಯವರ ಅಭಿಪ್ರಾಯ ಬದಲಾದರೆ ತಪ್ಪು, ರಕ್ಷಿತಾಗೆ ಅಭಿಪ್ರಾಯ ಬದಲಾಗಬಹುದಂತೆ. ಒಟ್ಟಿನಲ್ಲಿ ಎಪಿಸೋಡ್‌ನಲ್ಲಿ ಈ ಮಾತು ಎದ್ದು ಕಂಡಿದೆ.
ಇಡೀ ಮನೆಯಲ್ಲಿ ಕಾವ್ಯ ಶೈವ ಅವರು ಕ್ಯಾಪ್ಟನ್ ಆಗಿರೋದು ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರಿಗೆ ಮಾತ್ರ ಇಷ್ಟ ಇರಲಿಲ್ಲ. ಈ ಬಗ್ಗೆ ಮಾತನಾಡಿದ ರಕ್ಷಿತಾ ಶೆಟ್ಟಿ ಅವರು, “ಗುಡ್ ಬುಕ್ಸ್‌ನಲ್ಲಿ ಇರಬೇಕು ಎಂದು ಕಾವ್ಯ ಶೈವ ಅವರು ಕ್ಯಾಪ್ಟನ್ ಆಗಿರೋದು ಖುಷಿಯಿದೆ ಎಂದಿದ್ದಾರೆ. ನಾಮಿನೇಶನ್‌ನಲ್ಲಿ ಬಚಾವ್ ಆಗಿ ಇಲ್ಲಿಯೇ ಉಳಿದುಕೊಳ್ತಾರೆ ಎಂದು ಹೇಳಿದ್ದಾರೆ. ಸೂರಜ್ ಅವರು ಕ್ಯಾಪ್ಟನ್ ಆಗೋದು ಬೇಡ ಎಂದು ಹೊಟ್ಟೆಕಿಚ್ಚಿನಲ್ಲಿ ಕಾವ್ಯ ಹೆಸರು ಹೇಳಿದ್ದಾರೆ. ಅಂದಹಾಗೆ ಟಾಸ್ಕ್, ಡಿಸಿಶನ್ ಮೇಕಿಂಗ್ ಸೇರಿದಂತೆ ಉಳಿದ ವಿಚಾರದಲ್ಲಿ, ಕಾವ್ಯಗಿಂತ ಸೂರಜ್ ಬೆಸ್ಟ್” ಎಂದು ಹೇಳಿದ್ದಾರೆ.
58
ಸೂರಜ್‌ಗಿಂತ ಕಾವ್ಯ ಶೈವ ಬೆಸ್ಟ್: ರಜತ್
ರಜತ್ ಅವರು, “ಕಾವ್ಯ ಶೈವ ಬಗ್ಗೆ ಯಾರು ಯಾರು ಏನು ಮಾತನಾಡಿದ್ದಾರೆ ಎಂದು ರಕ್ಷಿತಾ ಸ್ಪಷ್ಟವಾಗಿ ಹೇಳಬೇಕು. ಮಾಳು ಹಾಗೂ ಸೂರಜ್ ನಡುವೆ ರಕ್ಷಿತಾ ಅವರು ಮಾಳುಗೆ ಮತ ಹಾಕುತ್ತಾರೆ. ಹಾಗೆ ನಾವು ಕಾವ್ಯ ಶೈವಗೆ ಮತ ಹಾಕಿದೆವು. ನಾವು ಕೂಡ ಚೆನ್ನಾಗಿ ಯೋಚನೆ ಮಾಡಿ ಕಾವ್ಯ ಅವರನ್ನು ಆಯ್ಕೆ ಮಾಡಿದೆವು. ನಮಗೂ ಕೂಡ ಸಾವಿರಾರು ವಿಚಾರಗಳಿವೆ, ಅದನ್ನೆಲ್ಲ ಯೋಚನೆ ಮಾಡಿ ಕ್ಯಾಪ್ಟನ್ ಪಟ್ಟಕ್ಕೆ ಮತ ಹಾಕಿದೆವು. ನನ್ನ ಕಣ್ಣು ಮುಂದೆ ಕಾವ್ಯ ಚೆನ್ನಾಗಿ ಆಡಿದ್ದಕ್ಕೆ ಉತ್ತಮ ಕೊಟ್ಟೆವು” ಎಂದು ಹೇಳಿದ್ದಾರೆ.
68
ಕಾವ್ಯಳನ್ನು ಕಂಡ್ರೆ ರಕ್ಷಿತಾಗೆ ಹೊಟ್ಟೆಕಿಚ್ಚಿದೆ
ಧನುಷ್ ಅವರು, “ಸೂರಜ್ ಬಂದರೆ ನಮಗೆ ಹೊಟ್ಟೆಕಿಚ್ಚು ಇರಬೇಕು ಎಂದು ರಕ್ಷಿತಾ ಹೇಳಿದರು. ಕಾವ್ಯ ಅವರನ್ನು ನೋಡಿದರೆ ರಕ್ಷಿತಾಗೆ ಹೊಟ್ಟೆಕಿಚ್ಚು ಇರಬಹುದು. ಹೀಗಾಗಿ ರಕ್ಷಿತಾ ತುಂಬ ಪ್ರಯತ್ನ ಮಾಡಬಹುದು. ರಕ್ಷಿತಾ ಹೇಳಿದ್ದನ್ನು ನಾವು ಒಪ್ಪಬೇಕು, ನಾವು ಹೇಳಿದ್ದನ್ನು ಅವರು ಒಪ್ಪೋದಿಲ್ಲ” ಎಂದು ಹೇಳಿದ್ದಾರೆ.
78
ಗಿಲ್ಲಿ ಬಾಯಿ ಮುಚ್ಚಿಸಿದ ರಕ್ಷಿತಾ
ಗಿಲ್ಲಿ ನಟ ಅವರು, “ರಘು ಅಣ್ಣ ಅವರನ್ನು ನಾಮಿನೇಟ್ ಮಾಡಿ ಜನರು ಗೆಲ್ಲಿಸ್ತಾರೆ ಎಂದು ಹೇಳಿದರು. ಆರಂಭದಲ್ಲಿ ಅಶ್ವಿನಿ ಗೌಡ ಅವರು ಮನೆಯಿಂದ ಹೊರಗಡೆ ಹೋಗಬೇಕು ಎನ್ನುತ್ತಿದ್ದ ರಕ್ಷಿತಾ, ಈಗ ಅವರು ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಹೇಳ್ತಾರೆ, ಇದು ಸರಿಯೇ?” ಎಂದು ಹೇಳಿದ್ದಾರೆ. ಗಿಲ್ಲಿ ನಟನಿಗೆ ರಕ್ಷಿತಾ ಅವರು ಮಾತನಾಡಲು ಬಿಟ್ಟಿಲ್ಲ. “ನೀವು ಎಲ್ಲೆಲ್ಲಿಗೋ ಹೋಗ್ತಿದ್ದೀರಿ, ಸುಮ್ನಿರಿ” ಎಂದು ಹೇಳಿದ್ದಾರೆ. ಅಲ್ಲಿಗೆ ಗಿಲ್ಲಿ ಸುಮ್ಮನಾಗಿದ್ದಾರೆ.
88
ಕ್ಷಮೆ ಕೇಳಲಿಲ್ಲ
ಅದಾದ ಬಳಿಕ ಕಿಚ್ಚ ಸುದೀಪ್ ಅವರು, “ಬೇರೆಯವರು ಅಭಿಪ್ರಾಯ ಬದಲಾದರೆ ತಪ್ಪು, ನಿಮ್ಮ ಅಭಿಪ್ರಾಯ ಬದಲಾದರೆ ಓಕೆನಾ?” ಎಂದು ಪ್ರಶ್ನೆ ಮಾಡಿದ್ದಾರೆ. ಆದರೂ ಕೂಡ ರಕ್ಷಿತಾ ತನ್ನಿಂದ ತಪ್ಪಾಗಿದೆ ಎಂದು ಹೇಳೇ ಇಲ್ಲ.
ಎಲ್ಲ ಸ್ಪರ್ಧಿಗಳು ರಕ್ಷಿತಾ ವಿರುದ್ಧ ಮಾತನಾಡಿದ್ದು, ತನ್ನನ್ನು ಸಮರ್ಥಿಸಿಕೊಂಡಿದ್ದು ನೋಡಿ ಕಾವ್ಯ ಶೈವ ಅವರಿಗೆ ಖುಷಿಯಾಗಿ ನಕ್ಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.