BBK 12: ರಕ್ಷಿತಾ ಯಾಕೆ ಟಾರ್ಗೆಟ್? ಮನೆಮಂದಿಗೆ ಸತ್ಯ ದರ್ಶನ ಮಾಡಿಸಿದ ಅಶ್ವಿನಿ ಗೌಡ! ಇದು ಟಿವಿಯಲ್ಲಿ ಬರಲೇ ಇಲ್ಲ!

Published : Jan 03, 2026, 10:27 AM IST

Bigg Boss Kannada 12: ಕಳಪೆ ಪಟ್ಟ ನೀಡುವಾಗ ಅಶ್ವಿನಿ ಗೌಡ, ಕ್ಯಾಪ್ಟನ್ ಗಿಲ್ಲಿಯ ಪಕ್ಷಪಾತವನ್ನು ಪ್ರಶ್ನಿಸಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಕಾವ್ಯಾ ಉಳಿಸಲು ಗಿಲ್ಲಿ ಪ್ರಯತ್ನಿಸಿದ್ದು, ಈ ಬಗ್ಗೆ ರಕ್ಷಿತಾಳನ್ನು ಟಾರ್ಗೆಟ್ ಮಾಡಿದ್ದೇಕೆ ಎಂದು ಅಶ್ವಿನಿ ಮನೆಮಂದಿಯನ್ನು ಕೇಳಿದ್ದಾರೆ

PREV
15
ಘನಘೋರ ಮಾತಿನ ಯುದ್ಧ

ಶುಕ್ರವಾರ ಕಳಪೆ ಮತ್ತು ಉತ್ತಮ ಪಟ್ಟ ನೀಡುವ ಸಂದರ್ಭದಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ಘನಘೋರ ಮಾತಿನ ಯುದ್ಧವೇ ನಡೆದಿತ್ತು. ಗಿಲ್ಲಿ ಅವರಿಗೆ ಕಳಪೆ ನೀಡಿದ ಅಶ್ವಿನಿ ಗೌಡ, ಇಡೀ ವಾರ ಕ್ಯಾಪ್ಟನ್‌ನಿಂದ ಏನೆಲ್ಲಾ ಆಯ್ತು ಎಂಬುದನ್ನು ವಿವರಿಸಿದರು. ಸಮಯದ ಅಭಾವದಿಂದ ಟಿವಿಯಲ್ಲಿ ಎಲ್ಲವನ್ನು ತೋರಿಸಲು ಸಾಧ್ಯವಿಲ್ಲ. ನೇರ ಪ್ರಸಾರದಲ್ಲಿ ಅಶ್ವಿನಿ ಗೌಡ ನೀಡಿದ ಕೆಲವು ಕಾರಣಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

25
ಅಶ್ವಿನಿ ಗೌಡ ಹೇಳಿದ್ದೇನು?

ನಾಮಿನೇಷನ್ ಪ್ರಕ್ರಿಯೆಯಲ್ಲಿ ಕಾವ್ಯಾ ಅವರನ್ನು ಉಳಿಸಿಕೊಳ್ಳಲು ಗಿಲ್ಲಿ ನಟ ಪ್ರಯತ್ನ ಮಾಡಿರೋದನ್ನು ಎಲ್ಲರೂ ಗಮನಿಸಿದ್ದಾರೆ. ಇದೇ ವಿಷಯವನ್ನು ಕಳಪೆ ಪಟ್ಟ ನೀಡುವಾಗ ಅಶ್ವಿನಿ ಗೌಡ ನೀಡುತ್ತಾರೆ. ಯಾಕೆ ನೀವು ರಕ್ಷಿತಾಳನ್ನು ಟಾರ್ಗೆಟ್ ಮಾಡ್ತೀರಿ? ಫೇವರಿಸಂ ಮಾಡಿದ ಗಿಲ್ಲಿಯನ್ನು ಪ್ರಶ್ನೆ ಯಾಕೆ ಮಾಡಲ್ಲ ಎಂದು ಕೇಳುತ್ತಾರೆ. ಹಾಗೆ ನಾಮಿನೇಷನ್ ಪ್ರಕ್ರಿಯೆ ಹೇಗೆ ನಡೆಯಿತು ಎಂದು ಅಶ್ವಿನಿ ಗೌಡ ವಿವರಿಸುತ್ತಾರೆ.

35
ಕಾವ್ಯಾ ಪರವಾಗಿ ಗಿಲ್ಲಿ ತೀರ್ಮಾನ

ಮೂರು ಬಾರಿಯೂ ಫ್ಲ್ಯಾಗ್ ತೆಗೆದುಕೊಂಡ ರಕ್ಷಿತಾ ಮೂರು ಬಾರಿಯೂ ಕಾವ್ಯಾ ಅವರನ್ನು ನಾಮಿನೇಟ್ ಮಾಡುತ್ತಾರೆ. ಮೊದಲು ಸ್ಪಂದನಾ ಜೊತೆ ಎರಡನೇ ಬಾರಿಗೆ ರಾಶಿಕಾ ಎದುರಾಗಿ ಕಾವ್ಯಾ ಅವರನ್ನು ನಿಲ್ಲಿಸುತ್ತಾರೆ. ಮೂರನೇ ಧನುಷ್ ಎದುರು ಕಾವ್ಯಾರನ್ನು ನಾಮಿನೇಟ್ ಮಾಡಿದಾಗಲೂ ಅವರು ಸೇವ್ ಆಗುತ್ತಾರೆ. ಈ ಸಂದರ್ಭದಲ್ಲಿ ಕ್ಯಾಪ್ಟನ್ ಗಿಲ್ಲ ನಟ ಪಕ್ಷಪಾತ (ಫೇವರಿಸಂ) ಮಾಡಿದ್ರು ಅಂತ ಅನ್ನಿಸ್ತು ಎಂದು ಅಶ್ವಿನಿ ಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

45
ಗಿಲ್ಲಿಯನ್ನು ಯಾಕೆ ಪ್ರಶ್ನೆ ಮಾಡಲಿಲ್ಲ

ತಮ್ಮ ಮಾತು ಮುಂದುವರಿಸಿದ ಅಶ್ವಿನಿ ಗೌಡ, ನಾಮಿನೇಷನ್ ಪ್ರಕ್ರಿಯೆ ಬಳಿಕ ಎಲ್ಲರೂ ಬಂದು ರಕ್ಷಿತಾಳನ್ನು ಪ್ರಶ್ನೆ ಮಾಡುತ್ತೀರಿ. ಯಾಕೆ ನೀವು ಗಿಲ್ಲಿಯನ್ನು ಪ್ರಶ್ನೆ ಮಾಡಲಿಲ್ಲ. ರಕ್ಷಿತಾಳನ್ನು ಟಾರ್ಗೆಟ್ ಮಾಡಿದ್ದೇಕೆ ಎಂದು ಮನೆಮಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ಈ ಹೇಳಿಕೆ ಕ್ಲಿಪ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: BBK 12: ಕೊನೆಯ ಕ್ಯಾಪ್ಟನ್ಸಿ ಆಯ್ಕೆ ವಿವಾದ: ರಾಶಿಕಾ-ಸ್ಪಂದನಾ ಜೊತೆ ಕುಳಿತು ಧನುಷ್ ದೃಢ ನಿರ್ಧಾರ!

55
ಗಿಲ್ಲಿ ಮುಖವಾಡ ಕಳಚಿದ ರಕ್ಷಿತಾ ಶೆಟ್ಟಿ

ಈ ವಿಡಿಯೋಯವನ್ನು rajeshgowdathairolli ಹೆಸರಿನ ಥ್ರೆಡ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಅಶ್ವಿನಿ ಅವರು ಹೇಳಿದ್ದು ನೂರಕ್ಕೆ ನೂರಕ್ಕೆ ಸತ್ಯ ಇದೆ. ರಕ್ಷಿತಾ ನೀಟಾಗಿ ಕರ್ನಾಟದ ಜನತೆಗೆ ಗಿಲ್ಲಿ ಕಾವ್ಯ ಪರ ಫೇವರಿಸಂ ಮಾಡಿದ್ದು ತೋರಿಸಿಕೊಟ್ಟಿದ್ದಾಳೆ. ಈ ವಾರ ಗಿಲ್ಲಿ ಮುಖವಾಡ ರಕ್ಷಿತಾ ಶೆಟ್ಟಿ ಕಳಚಿ ಇಟ್ಟಿದ್ದಾಳೆ. ನಂಗೂ ಗಿಲ್ಲಿ ಗೆಲ್ಲಬೇಕು ಆದರೆ ಇಂತ ಆಟ ಆಡಿ ಗೆಲ್ಲೋಕೆ ಸಾಧ್ಯವೇ ಇಲ್ಲ. ನಂಗೆ ಅದು ಇಷ್ಟು ಸಹ ಇಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: BBK 12: ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ: ಧ್ರುವಂತ್‌ಗೆ ಗಿಲ್ಲಿ ವಾರ್ನಿಂಗ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories