BBK 12: ಕೊನೆಯ ಕ್ಯಾಪ್ಟನ್ಸಿ ಆಯ್ಕೆ ವಿವಾದ: ರಾಶಿಕಾ-ಸ್ಪಂದನಾ ಜೊತೆ ಕುಳಿತು ಧನುಷ್ ದೃಢ ನಿರ್ಧಾರ!

Published : Jan 03, 2026, 08:51 AM IST

ಬಿಗ್‌ಬಾಸ್ ಕನ್ನಡ ಸೀಸನ್ 12ರ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘನೆಯಾದ ಕಾರಣ, ಸದಸ್ಯರ ಮತದಾನದ ಮೂಲಕ ಈ ಆಯ್ಕೆ ನಡೆಯಿತು. ಈ ನಿರ್ಧಾರದಿಂದ ಅಶ್ವಿನಿ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಇಬ್ಬರೂ ಭಾವುಕರಾದರು.

PREV
15
ಧನುಷ್ ಕ್ಯಾಪ್ಟನ್

ಬಿಗ್‌ಬಾಸ್ ಕನ್ನಡ ಸೀಸನ್ 12ರ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಆಟದಲ್ಲಿ ಮೂಲ ನಿಯಮ ಉಲ್ಲಂಘನೆಯಾಗಿದ್ದರಿಂದ ಸದಸ್ಯರ ಮತಗಳ ಆಧಾರದ ಮೇಲೆ ಧನುಷ್ ಆಯ್ಕೆ ನಡೆಯಿತು. ಅಶ್ವಿನಿ ಪರವಾಗಿ ಧ್ರುವಂತ್, ರಕ್ಷಿತಾ ಮತ್ತು ರಘು ಮತ ಚಲಾಯಿಸಿದರು. ಧನುಷ್ ಪರವಾಗಿ ಕಾವ್ಯಾ, ಸ್ಪಂದನಾ, ರಾಶಿಕಾ ಮತ್ತು ಗಿಲ್ಲಿ ಮತ ಹಾಕಿದರು.

25
ಭಾವುಕರಾದ ಅಶ್ವಿನಿ ಗೌಡ ಮತ್ತು ಧನುಷ್

ಆಟ ರದ್ದು, ನಿಯಮದ ಉಲ್ಲಂಘಣೆಯಾಗಿದ್ರಿಂದ ಕ್ಯಾಪ್ಟನ್ ಪದವಿ ತಮಗೆ ಸಿಗಬೇಕೆಂದು ಅಶ್ವಿನಿ ಗೌಡ ತಮ್ಮ ನಿಲುವು ವ್ಯಕ್ತಪಡಿಸಿದ್ದರು. ಇತ್ತ ಧನುಷ್ ನನ್ನಿಂದ ತಪ್ಪು ಆಗಿದ್ದು ನಿಜ ಮತ್ತು ನಾನು ಒಪ್ಪಿಕೊಂಡಿದ್ದೇನೆ. ಸ್ಪರ್ಧಿಗಳ ಮನವೊಲಿಸಿದ್ದರಿಂದ ನಾನು ಕ್ಯಾಪ್ಟನ್ ಆಗಿದ್ದೇನೆ ಎಂದು ಹೇಳಿದ್ದಾರೆ. ಅಂತಿಮವಾಗಿ ಇಬ್ಬರು ಭಾವನಾತ್ಮಕವಾಗಿ ಭಾವುಕರಾಗಿರೋದು ಕಂಡು ಬಂತು.

35
ಧನುಷ್ ದೃಢ ನಿರ್ಧಾರ

ಅಶ್ವಿನಿ ಗೌಡ ಜೊತೆಗಿನ ಸುದೀರ್ಘ ಚರ್ಚೆ ಬಳಿಕ ಧನುಷ್ ನಿರ್ಧಾರವೊಂದಕ್ಕೆ ಬಂದಿದ್ದಾರೆ. ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಸರ್ ಬಂದು ಹೇಳುವರೆಗೂ ತಾವು ಕ್ಯಾಪ್ಟನ್ ರೂಮ್ ಬಳಸಲ್ಲ ಎಂದು ನಿರ್ಧರಿಸಿದ್ದಾರೆ. ಇದಕ್ಕೆ ರಾಶಿಕಾ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದ್ರೆ ಅದು ಧನುಷ್ ವೈಯಕ್ತಿಕ ನಿರ್ಧಾರ ಎಂದು ಸ್ಪಂದನಾ ಸೋಮಣ್ಣ ಹೇಳಿದ್ದಾರೆ.

45
ರಘು ಹೇಳಿದ ಕಾರಣ ಏನು?

ಅಶ್ವಿನಿ ಗೌಡ ಪರ ಮತ ಹಾಕಿದ ರಘು, ತಾವೊಬ್ಬರು ಆಟಗಾರ ಮತ್ತು ತೀರ್ಪುಗಾರನಾಗಿ ಕೆಲಸ ಮಾಡಿದ ಅನುಭವದ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತಿಳಿದೋ ಅಥವಾ ತಿಳಿಯದೋ ರೂಲ್ಸ್ ಬ್ರೇಕ್ ಆಗಿದೆ. ರೂಲ್ಸ್ ಬ್ರೇಕ್ ಮಾಡಿ ಕ್ಯಾಪ್ಟನ್ ಆದೆ ಎಂಬ ಅಪವಾದ ಧನುಷ್ ಮೇಲೆ ಬರೋದು ಬೇಡ ಎಂದು ಹೇಳಿದರು.

ಇದನ್ನೂ ಓದಿ: BBK 12: ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ: ಧ್ರುವಂತ್‌ಗೆ ಗಿಲ್ಲಿ ವಾರ್ನಿಂಗ್

55
ರಕ್ಷಿತಾ ಮತ್ತು ಧ್ರುವಂತ್ ಹೇಳಿದ್ದೇನು?

ಅಶ್ವಿನಿ ಗೌಡ ನಮಗಿಂತ ಹಿರಿಯರು. ರಾಶಿಕಾ ವಯಸ್ಸಿಗಿಂತ ಅರ್ಧದಷ್ಟು ಅಶ್ವಿನಿ ಅವರು ದೊಡ್ಡವರು. ಆದ್ರೂ ದೈಹಿಕ ಚಟುವಟಿಕೆ ಅಂತ ಬಂದಾಗೆಲ್ಲಾ ಕಠಿಣ ಸ್ಪರ್ಧೆ ನೀಡುತ್ತಾರೆ. ಮನೆಯಲ್ಲಿಯೂ ಅವರ ಭಾಗವಹಿಸುವಿಕೆ ಗಮನಿಸಿದ್ದೇನೆ. ಹಾಗಾಗಿ ಮನೆಯ ಕೊನೆ ಕ್ಯಾಪ್ಟನ್ ಆಗಿ ಅಶ್ವಿನಿ ಗೌಡ ಅವರನ್ನು ನೋಡಲು ಇಷ್ಟಪಡುವೆ ಎಂದು ರಕ್ಷಿತಾ ಹೇಳಿದ್ದಾರೆ. ಇತ್ತ ಧನುಷ್ ಈ ಹಿಂದಿನ ಟಾಸ್ಕ್‌ ಬುಕ್‌ನಲ್ಲಿದ್ದ ನಿಯಮ ಹೇಳಿ ಅಶ್ವಿನಿ ಗೌಡ ಕ್ಯಾಪ್ಟನ್ ಆಗಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: BBK 12: ಯಾಕಿಂಗೆ ಆದೆ ಗಿಲ್ಲಿ? ಅಭಿಮಾನಿಗಳಿಂದಲೇ ಬೇಸರ; ಇತ್ತ ಗಿಲ್ಲಿಯಾಗಿ ಬದಲಾದ್ರಂತೆ ರಘು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories