BBK 12 Epsiode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಡಾಗ್ ಬ್ರೀಡರ್ ಸತೀಶ್ ಅವರು ಗಿಲ್ಲಿ ನಟನ ಅಭಿಮಾನಿಗಳು ಸ್ಲಮ್ ಎಂದು ಕರೆದಿದ್ದಾರೆ. ಇದರ ವಿರುದ್ಧ ಸಾಫ್ಟ್‌ವೇರ್ ಕಂಪೆನಿಯ HR ಸಂಕೇತ್ ರಾಮಕೃಷ್ಣಮೂರ್ತಿ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.
ಡಾಗ್ ಸತೀಶ್ ಅವರ ‘ಗಿಲ್ಲಿ ಫ್ಯಾನ್ಸ್ ಎಲ್ಲರೂ ಸ್ಲಮ್’ ಎಂಬ ಹೇಳಿಕೆಯು ನಾಚಿಕೆಗೇಡಿತನ ಮತ್ತು ಸಮಾಜಕ್ಕೆ ಅವಮಾನ, ಸ್ಲಮ್ ಅನ್ನೋದು ಅವಮಾನ ಅಲ್ಲ, ಅವಮಾನ ಮಾಡೋ ಮನಸ್ಸೇ ಸಮಸ್ಯೆ. ಈ ಬಗ್ಗೆ ಖಾಸಗಿ ಕಂಪೆನಿ HR ಆಗಿರುವ ಸಂಕೇತ್ ರಾಮಕೃಷ್ಣಮೂರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
27
ಗಿಲ್ಲಿ ನನ್ನ ಫೇವರಿಟ್
ಗಿಲ್ಲಿ ನನ್ನ ಫೇವರಿಟ್ — BB12 ಮಾತ್ರ ಅಲ್ಲ, ರಿಯಾಲಿಟಿ ಶೋ ದಿನಗಳಿಂದಲೇ. ಅವರು ರಿಯಾಲಿಟಿ ಶೋ ದಿನಗಳಿಂದಲೇ ಅವರ ಸ್ಪಾಂಟಿನಿಟಿ (ಸಹಜತೆ), ಮೆಮೊರಿ, ಮತ್ತು ತ್ವರಿತ ಪ್ರತಿಕ್ರಿಯೆ ನನಗೆ ತುಂಬಾ ಇಷ್ಟ.ನಾನು ಕೆಲಸ ಮಾಡುವುದು ಮತ್ತು ವಾಸಿಸುವುದು ಹೈದರಾಬಾದ್‌ನಲ್ಲಿ ಆದರೂ, ಅವರ ಪರ್ಸನಾಲಿಟಿ ಮತ್ತು ಪ್ರೆಸೆನ್ಸ್ ನಿಂದಾಗಿ ಅವರ ಬಹುತೇಕ ರಿಯಾಲಿಟಿ ಶೋಗಳನ್ನು ನೋಡಿದ್ದೇನೆ.
37
ಗಿಲ್ಲಿಗೋಸ್ಕರ ಬಿಗ್ ಬಾಸ್ ನೋಡ್ತೀನಿ
ನಿಜ ಹೇಳಬೇಕೆಂದರೆ, BB12 ಅಧಿಕೃತವಾಗಿ ಘೋಷಣೆ ಆಗುವ ಮೊದಲೇ ಅವರು ಅದರಲ್ಲಿ ಬರುತ್ತಾರೆ ಎಂಬುದನ್ನು ಊಹಿಸಿದ್ದವರಲ್ಲಿ ನಾನು ಕೂಡ ಒಬ್ಬ. ಆ ಕಾರಣಕ್ಕೆ ನಾನು Bigg Boss ನೋಡುತ್ತಿರುವುದು ಮುಖ್ಯವಾಗಿ ಗಿಲ್ಲಿಗಾಗಿ, ಮತ್ತು ವೀಕೆಂಡ್‌ಗಳಲ್ಲಿ ಸುದೀಪ್ ಸರ್ ಅವರಿಗಾಗಿ.
ಕೆಲಸದ ಬ್ಯುಸಿ ಸಮಯದಲ್ಲಿ ಎಲ್ಲ ಎಪಿಸೋಡ್‌ಗಳನ್ನು ನೋಡಲು ಆಗದೇ ಇರಬಹುದು, ಆದರೆ ನಾನು ವೀಕೆಂಡ್ ಎಪಿಸೋಡ್‌ಗಳನ್ನು ಎಂದಿಗೂ ಮಿಸ್ ಮಾಡೋದಿಲ್ಲ. ನನ್ನ ಅಮ್ಮ ಮತ್ತು ಫ್ಯಾಮಿಲಿಯ ಜೊತೆಗೆ ಕೂತು ನೋಡುವುದು ಈಗ ನಮ್ಮ ಮನೆಯ ಒಂದು ಸಂಪ್ರದಾಯದಂತಾಗಿದೆ. ಆದರೆ ಇತ್ತೀಚೆಗೆ ಒಂದು ವಿಷಯ ನನ್ನನ್ನು ತುಂಬಾ ನೋಯಿಸಿತು.
57
ಸ್ಲಮ್‌ನಲ್ಲಿ ಬದುಕುವವರು ಮನುಷ್ಯರಲ್ಲವೇ?
ಸತೀಶ್ (ಡಾಗ್ ಸತೀಶ್) ಅವರು “ಗಿಲ್ಲಿ ಫ್ಯಾನ್‌ಗಳೆಲ್ಲ ಸ್ಲಮ್ ಜನ” ಎಂದು ಹೇಳಿದ್ದಾಗಿ ನಾನು ಕೇಳಿದೆ. ಒಂದು ಕ್ಷಣ ಯೋಚಿಸೋಣ, ಅದರರ್ಥ ಏನು? ಸ್ಲಮ್‌ನಲ್ಲಿ ಬದುಕುವವರು ಮನುಷ್ಯರಲ್ಲವೇ? ಅವರು ಸಮಾಜದ ಭಾಗವಲ್ಲವೇ? ನಾವು ಯಾವ ಸೌಲಭ್ಯಗಳಿಂದ ಬದುಕುತ್ತಿದ್ದೇವೋ, ಅವನ್ನು ಕಟ್ಟುವವರು, ನಗರಗಳನ್ನು ನಿರ್ಮಿಸುವವರು, ಬೀದಿಗಳನ್ನು ಸ್ವಚ್ಛ ಮಾಡುವವರು, ನಮ್ಮ ಜೀವನ ಸಾಗಿಸುವಲ್ಲಿ ಬೆನ್ನೆಲುಬಾಗಿರುವವರು ಅವರು ಅಲ್ಲವೇ?
67
Global Head – HR
ಇಂತಹ ಹೇಳಿಕೆಗಳು ಕೇವಲ ಒಂದು ಫ್ಯಾನ್‌ಬೇಸ್‌ಗೆ ಅವಮಾನವಲ್ಲ. ಅವು ಒಟ್ಟು ಸಮುದಾಯವನ್ನೇ ಅವಮಾನಿಸುವ ಮಾತುಗಳು. ಇದೀಗ ನನ್ನ ವಿಷಯವನ್ನು ಸ್ಪಷ್ಟವಾಗಿ ಹೇಳುತ್ತೇನೆ. ನಾನು ಗಿಲ್ಲಿಗೆ ವೋಟ್ ಮಾಡ್ತೇನೆ. ನಾನು ಒಂದು ಸಾಫ್ಟ್‌ವೇರ್ MNCನಲ್ಲಿ Global Head – HR ಆಗಿ ಕೆಲಸ ಮಾಡ್ತಿದ್ದೇನೆ. ನಾನು ಚೆನ್ನಾಗಿ ಸಂಪಾದಿಸುತ್ತೇನೆ. ನನಗೆ ಡಬಲ್ ಪೋಸ್ಟ್-ಗ್ರಾಜುವೇಶನ್ ಅರ್ಹತೆಗಳಿವೆ. ಆದರೂ ಗಿಲ್ಲಿಗೆ ಬೆಂಬಲಿಸುವುದರಿಂದ ನಾನು “ಸ್ಲಮ್” ಎಂದರೆ…
77
ವರ್ಗ (Class) ಹಣದಿಂದ ಬರೋದಲ್ಲ
ಹೌದು, ನಾನು ಕೂಡ ಗಿಲ್ಲಿಗೆ ವೋಟ್ ಮಾಡುವ “ಸ್ಲಮ್”. ಯಾಕೆಂದರೆ ಮನುಷ್ಯನ ಮೌಲ್ಯವನ್ನು ಹಣದಿಂದ ನಿರ್ಧರಿಸಲು ಆಗದು. ವ್ಯಕ್ತಿಯ ಗೌರವವನ್ನು ವಿಳಾಸದಿಂದ ಅಳೆಯಲು ಆಗದು. ಒಂದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳೋಣ: ಹಣದಿಂದ ಸೌಕರ್ಯ ಸಿಗಬಹುದು… ಆದರೆ ವರ್ಗ (Class) ಹಣದಿಂದ ಬರೋದಲ್ಲ. ಗೌರವ ಕೊಡುವುದು ಆಯ್ಕೆಯಲ್ಲ. ಅದು ನಮ್ಮ ಮೂಲಭೂತ ಜವಾಬ್ದಾರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.