ಈ ವಾರದ ಬಿಗ್‌ಬಾಸ್ ಸಂಚಿಕೆಯಲ್ಲಿ ನಿರ್ದೇಶಕ ಪ್ರೇಮ್ ಮತ್ತು 'ಕೆಡಿ' ಚಿತ್ರತಂಡ ಭೇಟಿ ನೀಡಿದೆ. ಈ ವೇಳೆ ಮನೆಯಲ್ಲಿ ಡಬಲ್ ಎಲಿಮಿನೇಷನ್ ಘೋಷಣೆಯಾಗಿದ್ದು, ಸ್ಪರ್ಧಿಗಳು ಆಘಾತಗೊಂಡಿದ್ದಾರೆ. ಅಂತಿಮವಾಗಿ ಸ್ಪಂದನಾ, ಧ್ರುವಂತ್, ಸೂರಜ್ ಮತ್ತು ರಾಶಿಕಾ ನಾಮಿನೇಷನ್ ತೂಗುಗತ್ತಿಯಲ್ಲಿದ್ದಾರೆ.
ಈ ಬಾರಿಯ ವೀಕೆಂಡ್ ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಗೆ ನಿರ್ದೇಶಕ ಪ್ರೇಮ್ ತಮ್ಮ 'ಕೆಡಿ: ದಿ ಡೆವಿಲ್' ಚಿತ್ರತಂಡ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ತಂಡ ಆಗಮಿಸಿದೆ. ಗಾರ್ಡನ್ ಏರಿಯಾದಲ್ಲಿನ ಬೋರ್ಡ್ ನೋಡುತ್ತಿದ್ದಂತೆ ಮನೆಯ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ.
25
ಡಬಲ್ ನಾಮಿನೇಟ್
ನಿರ್ದೇಶಕ ಪ್ರೇಮ್ ಮತ್ತು ಕೆಡಿ ಸಿನಿಮಾದ ನಟಿ ರೀಷ್ಮಾ ನಾಣಯ್ಯ ಹಾಗೂ ಭಾಗ್ಯಲಕ್ಷ್ಮೀ ಸೀರಿಯಲ್‌ನ ತಾಂಡವ್ ಜೊತೆ ಭಾಗ್ಯ ಬಿಗ್‌ಬಾಸ್ ಮನೆಯೊಳಗೆ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ಈ ವಾರ ಮನೆಯಿಂದ ಒಬ್ಬರಲ್ಲ ಇಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ.
ಡಬಲ್ ಎಲಿಮುನೇಟ್ ಅಂತ ವಿಷಯ ತಿಳಿಯುತ್ತಲೇ ಸ್ಪರ್ಧಿಗಳು ಆಘಾತಗೊಂಡಿದ್ದಾರೆ. ಈ ವಾರ ಕಾವ್ಯಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ.
35
ಮನೆಯೊಳಗೆ ಬರಲ್ಲ ಎಂದ ಪ್ರೇಮ್
ನಿರ್ದೇಶಕ ಪ್ರೇಮ್ ಮತ್ತು ರೀಷ್ಮಾ ಆಗಮಿಸುತ್ತಿದ್ದಂತೆ ಈ ವಾರಿ ನಾನೇ ಮನೆಯ ಕ್ಯಾಪ್ಟನ್ ಎಂದು ಗಿಲ್ಲಿ ನಟ ಹೇಳಿಕೊಳ್ಳುತ್ತಾರೆ. ಗಿಲ್ಲಿ ನಟ ನಾನೇ ಕ್ಯಾಪ್ಟನ್ ಅಂತ ಹೇಳ್ತಿದ್ದಂತೆ ಪ್ರೇಮ್, ಹಾಗಾದ್ರೆ ನಾನು ಮನೆಯೊಳಗೆ ಬರಲ್ಲ ಎಂದು ತಮಾಷೆ ಮಾಡುತ್ತಾರೆ.
ಇದೇ ಪ್ರೋಮೋದಲ್ಲಿ ನಾಮಿನೇಷನ್ ಪ್ರಕ್ರಿಯೆಯ ತುಣುಕನ್ನು ಸಹ ತೋರಿಸಲಾಗಿದೆ. ಸೀಸನ್ 10ರ ಫಿನಾಲೆಯಲ್ಲಿ ಈ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಿ ವಿನಯ್ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರಲಾಗಿತ್ತು.
ಈ ವಾರ ನಾಮಿನೇಷನ್ ತೂಗುಗತ್ತಿಯಲ್ಲಿ ಅಂತಿಮವಾಗಿ ಸ್ಪಂದನಾ ಸೋಮಣ್ಣ, ಧ್ರುವಂತ್, ಸೂರಜ್ ಮತ್ತು ರಾಶಿಕಾ ನಿಂತಿದ್ದಾರೆ. ಈ ನಾಲ್ವರಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ. ಈ ನಾಲ್ವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಪರ್ಧಿಗಳು ಸದ್ಯಕ್ಕೆ ಸೇಫ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.