ಬಿಗ್ ಬಾಸ್ ಸೀಸನ್ 12ರ ಮನೆಯಲ್ಲಿ ಸ್ಪರ್ಧಿಗಳ ಪ್ರವೇಶದ ಬೆನ್ನಲ್ಲಿಯೇ ರಾಜಮಾತೆ ಎಂಬ ಬಿರುದು ಪಡೆದು ಮನೆಯ ಸದಸ್ಯರ ಮೇಲೆ ಅಧಿಕಾರ ಮಾಡಿದ ಅಶ್ವಿನಿ ಗೌಡ ಅವರು ಅದೇಕೋ ಅತಿರೇಕದಿಂದ ವರ್ತನೆ ತೋರುತ್ತಿದ್ದಾರೆ.
ಇಷ್ಟು ದಿನ ರಕ್ಷಿತಾ ಶೆಟ್ಟಿಗೆ ಕಾಡುತ್ತಿದ್ದ ಅಶ್ವಿನಿ ಗೌಡ, ಇದೀಗ ಮನೆಯ ಜವಾಬ್ದಾರಿ ವಿಚಾರದಲ್ಲಿ ಗಿಲ್ಲಿಯೊಂದಿಗೆ ಮಾತನಾಡುತ್ತಾ ನಟಿ ಕಾವ್ಯಾ ಶೈವ ಜೊತೆಗೆ ಫೈಟಿಂಗ್ ಮಾಡುತ್ತಿದ್ದಾರೆ. ಇನ್ನೇನು ಕೈ-ಕೈ ಮಿಲಾಯಿಸುವ ಹಂತಕ್ಕೆ ಇವರ ಜಗಳ ಅತಿರೇಕವಾಗಿದ್ದು, ಸ್ಪಂದನಾ ಇರದಿದ್ದರೆ ಕಾವ್ಯಾಗೆ ಹೊಡೆದೇ ಬಿಡುತ್ತಿದ್ದರು ಎಂಬುದಂತೂ ಸ್ಪಷ್ಟವಾಗುತ್ತಿದೆ.