ಬಿಗ್ ಬಾಸ್ ಸೀಸನ್ 12ರಲ್ಲಿ ನಟಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರಿಗೆ ಇವಳು ‘ಎಸ್ ಕೆಟಗರಿ’ಗೆ ಸೇರಿದವಳು ಎಂದು ಹೇಳಿದ್ದರು. ಈ ಆಕ್ಷೇಪಾರ್ಹ ಪದಬಳಕೆ ವಿರುದ್ಧ ಹೈಕೋರ್ಟ್ ವಕೀಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಅಶ್ವಿನಿ ಗೌಡ ಜೈಲು ಸೇರಿದ್ದಾರೆ.
ಬಿಗ್ ಬಾಸ್ ಸೀಸನ್ 12ರಲ್ಲಿ ಮೊದಲ ಬಾರಿಗೆ ಇದೀಗ ಕ್ಯಾಪ್ಟನ್ಸಿ ಟಾಕ್ಸ್ ಅನ್ನು ನಡೆಸಲಾಗುತ್ತಿದೆ. ಇದರ ಬೆನ್ನಲ್ಲಿಯೇ ಕಳಪೆಯನ್ನು ಕೂಡ ಆಯ್ಕೆ ಮಾಡಲಾಗಿದೆ. ಕಳಪೆ ಆಯ್ಕೆಯನ್ನು ಮಾಡುವಾಗ ಅಶ್ವಿನಿ ಗೌಡ ಅವರಿಗೆ ಹೆಚ್ಚಿನ ಜನರು ಕಳಪೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ವಿನಿ ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಜೈಲು ಸೇರಿದ್ದಾರೆ.
210
ಕಳಪೆ ಘೋಷಣೆ
ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಮ್ಯೂಟಂಟ್ ರಘು ಅವರು, ಕಳಪೆ ಅಂತಾ ಬಂದಾಗ ನಾನು ಅಶ್ವಿನಿ ಮೇಡಂ ಅವರಿಗೆ ಕಳಪೆ ಕೊಡುವುದಾಗಿ ಘೋಷಣೆ ಮಾಡುತ್ತಾರೆ.
310
ಗುರಾಯಿಸಿದ ಅಶ್ವಿನಿ
ಇದಕ್ಕೆ ಚಪ್ಪಾಳೆ ತಟ್ಟಿ ಸಿಟ್ಟಿನಿಂದಲೇ ಗುರಾಯಿಸಿ ನೋಡಿದ ಅಶ್ವಿನಿ ಗೌಡ ಅವರು ಥ್ಯಾಂಕ್ಯೂ ಎಂದು ಎದ್ದು ಹೊಡುತ್ತಾರೆ. ಇದಾದ ನಂತರ, ಕಳಪೆ ಎಂಬ ಪಟ್ಟಿ ಇರುವ ಜೈಲಿನ ಕೈದಿಯ ಉಡುಪುಗಳನ್ನು ಧರಿಸಿಕೊಂಡು ಜೈಲಿನತ್ತ ಬರುತ್ತಾರೆ.
ಅಶ್ವಿನಿ ಗೌಡ ಅವರು ಜೈಲಿನ ಒಳಗೆ ಹೋಗುವಾಗ ನಾನು ಹೊರಗಡೆ ಇದ್ದರೂ ಹುಲಿನೇ, ಬೋನಿನಲ್ಲಿ ಇದ್ದರೂ ಹುಲಿನೇ ಎಂದು ಅವಾಜ್ ಹಾಕುತ್ತಾ ಒಳಗೆ ಕಾಲಿಡುತ್ತಾರೆ.
510
ಜೈಲಿನೊಳಗೆ ಕಳಿಸಿ ಬೀಗ ಹಾಕಿದ ರಘು
ಆಗ ರಘು ಅವರು ಜೈಲಿನ ಬೀಗವನ್ನು ತೆರೆದು ಅಶ್ವಿನಿ ಗೌಡ ಅವರನ್ನು ಜೈಲಿನೊಳಗೆ ಕೂಡಿಹಾಕಿ ಬೀಗ ಹಾಕುತ್ತಾರೆ. ಅಶ್ವಿನಿ ಅವರ ಹಿಂದೆ ಗಿಲ್ಲಿ ನಟ ಕೂಡ ಜೈಲಿಗೆ ಕಳಿಸುವುದಕ್ಕೆ ಹೋಗುತ್ತಾನೆ.
610
ಜೈಲಿನ ಸರಳುಗಳಿಂದ ಹೊರಬರಲು ಯತ್ನ
ಇದರ ಬೆನ್ನಲ್ಲಿಯೇ ಅಶ್ವಿನಿ ಗೌಡ ಅವರು ಮ್ಯೂಟಂಟ್ ರಘುಗೆ ನಾನು ರೆಸ್ಟ್ ರೂಮಿಗೆ ಹೋಗಬೇಕು ಬಾಗಿಲು ತೆಗೆಯಿರಿ ಎಂದು ಹೇಳುತ್ತಾರೆ. ಇದಕ್ಕೆ ವಿಳಂಬ ಮಾಡಿದಾಗ, ಅಶ್ವಿನಿ ಗೌಡ ಅವರು ಜೈಲಿನ ಸರಳುಗಳಿಂದಲೇ ತೂರಿಕೊಂಡು ಹೊರಬರುತ್ತಾರೆ.
710
ಡೋಂಟ್ ಟಚ್ ಮಿ...
ಜೈಲಿನ ಹತ್ತಿರ ಬಂದ ರಘು ಅವರು, ನೀವು ಒಳಗೆ ಹೋಗಿ ಎಂದು ವಾಪಸ್ ಜೈಲಿನೊಳಗೆ ತಳ್ಳಲು ಮುಂದಾಗುತ್ತಾರೆ. ಆಗ ಅಶ್ವಿನಿ ಗೌಡ ಅವರು ಡೋಂಟ್ ಟಚ್ ಮಿ ಎಂದು ಅವಾಜ್ ಹಾಕುತ್ತಾರೆ.
810
ತರಕಾರಿ ಕತ್ತರಿಸುವ ಟಾಸ್ಕ್
ಇನ್ನು ಜೈಲಿನ ಕೈದಿಯಿಂದ ತರಕಾರಿ ಕತ್ತರಿಸುವ ಟಾಸ್ಕ್ ಮಾಡಿಸಬೇಕು. ಅಶ್ವಿನಿ ಗೌಡ ಅವರು ತರಕಾರಿಗಳನ್ನು ಕತ್ತರಿಸದೇ ನೀವು ತರಕಾರಿಗಳನ್ನು ಕೊಡಿ, ನಾನು ಯಾವಾಗ ಆಗುತ್ತೋ ಅವಾಗ ಕತ್ತರಿಸಿ ಕೊಡುತ್ತೇನೆ ಎಂದು ಆಟವಾಡುತ್ತಾ ಕುಳಿತುಕೊಳ್ಳುತ್ತಾರೆ.
910
ಈಗಲೇ ಕಟ್ ಮಾಡಲು ಯಾರು ಹೇಳಿದ್ದಾರೆ?
ಆಗ ರಕ್ಷಿತಾ ಶೆಟ್ಟಿ ಈಗಲೇ ತರಕಾರಿ ಕತ್ತರಿಸಿ ಕೊಡಿ ಎಂದು ಕೇಳಿದರೆ, ಅವರು ತರಕಾರಿ ಕಟ್ ಮಾಡಿ ಕೊಡಲು ಹೇಳಿದ್ದಾರೆ. ಇವಾಗಲೇ ಕಟ್ ಮಾಡಿ ಕೊಡು ಅಂತಾ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡುತ್ತಾರೆ.
1010
ನಮ್ ಬಾರ್ಡರ್ ಒಳಗೆ ನಮ್ದೇ ಆಟ
ಇದಕ್ಕೆ ಮಧ್ಯದಲ್ಲಿ ಬಾಯಿ ಹಾಕಿದ ಕಾಕ್ರೋಚ್ ಸುಧಿ, ನೀವು ಕೊಯ್ದು ಕೊಟ್ರು, ನಾವು ಅಡುಗೆ ಮಾಡಿಕೊಂಡು ತಿಂದ್ರಿ, ಅದು ಆಯ್ತು. ಆಗ ಅಶ್ವಿನಿ ಗೌಡ ಹಾಸಿಗೆ ಮೇಲೆ ಆರಾಮಾಗಿ ಮಲಗಿಕೊಂಡು ನಮ್ಮ ಬಾರ್ಡರ್ ಒಳಗೆ ಬಂದರೆ ನಾವು ಆಡಿದ್ದೇ ಆಟವೆಂದು ಹೇಳುತ್ತಾರೆ.