ಅಣ್ಣಯ್ಯ ಧಾರಾವಾಹಿಯಲ್ಲಿ ರೌಡಿ ಬೇಬಿ ಪಾರು ಮುಂದೆ ಅಪ್ಪನ ಕರಾಳ ಮುಖದ ಅನಾವರಣ ಮತ್ತೆ ಆಗಿದೆ. ಅಮ್ಮನವರೇ ಪಾರುಗೆ ರಾಣಿ ಮದುವೆ ರಹಸ್ಯ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪಾರು ಇದೀಗ ಅಪ್ಪನ ನಾಟಕವನ್ನು ಕೊನೆಗೊಳಿಸಲು ಶಾಕ್ ಟ್ರೀಟ್ಮೆಂಟ್ ನೀಡೊದಕ್ಕೆ ರೆಡಿಯಾಗಿದ್ದಾಳೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಆ ಕಾರಣದಿಂದಲೇ ಈ ಧಾರಾವಾಹಿ ಯಾವಾಗಲೂ ಟಾಪ್ ಸ್ಥಾನದಲ್ಲಿರುತ್ತೆ. ಇದೀಗ ಪಾರು ಮುಂದೆ ಅಪ್ಪ ವೀರಭದ್ರನ ನಿಜ ಬಣ್ಣ ಬಯಲಾಗಿದ್ದು ರೌಡಿ ಬೇಬಿ ಸುಮ್ಮನೆ ಬಿಡುವ ಮಾತೆ ಇಲ್ಲ.
27
ವೀರಭದ್ರನ ಕುತಂತ್ರ ಪಾರು ಮುಂದೆ ಬಯಲಾಯ್ತು
ಈಗಾಗಲೇ ಪಾರುಗೆ ಅಪ್ಪನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. ಆತ ತನ್ನ ತಾಯಂದಿರಿಗೆ ಹಾಗೂ ಶಿವುಗೆ ಏನೆಲ್ಲಾ ದ್ರೋಹ ಮಾಡಿದ್ದಾನೆ ಅನ್ನೋದೆಲ್ಲಾ ತಿಳಿದಿದೆ. ಇದೀಗ ಲಕ್ವಾ ಹೊಡೆದಂತೆ ಮಲಗಿರುವ ಅಪ್ಪನ ಮತ್ತೊಂದು ಕ್ರೂರ ಮುಖ ಬಯಲಾಗಿದೆ.
37
ಅಮ್ಮ ಬಾಯಿಬಿಟ್ಟರು ಸತ್ಯ
ಪಾರುವಿಗೆ ಕರೆ ಮಾಡುವ ಅಮ್ಮ ರಾಣಿ ಮದುವೆಯಾಗಿರುವ ಹುಡುಗ ದಡ್ಡ, ಆ ಮದುವೆಯನ್ನು ಗೊತ್ತಿದ್ದು, ಮಾಡಿಸಿದ್ದು ನಿಮ್ಮ ಅಪ್ಪ ಎನ್ನುತ್ತಾರೆ. ಇದರಿಂದ ಪಾರು ಶಾಕ್ ಆಗುತ್ತಾಳೆ. ಅಮ್ಮನಿಗೆ ಬುದ್ದಿ ಕಲಿಸೋಕೆ ತೀರ್ಮಾನಿಸಿಯೇ ಮನೆಗೆ ಬರುತ್ತಾಳೆ.
ಇದೀಗ ಮನೆಗೆ ಬಂದಿರುವ ಪಾರು ಅಪ್ಪನ ಮುಂದೆ ನಿಂತು ಆತನಿಗೆ ಅಪಹಾಸ್ಯ ಮಾಡುತ್ತಾ, ನಿನ್ನಂತ ನೀಚ ಇಲ್ಲ ಎನ್ನುತ್ತಾಳೆ. ನೀನು ಮೊದಲನೇ ದಿನ ಮಲಗಿದಾಗಲೇ ನೀನು ನಾಟಕ ಮಾಡೋದು ಗೊತ್ತಾಗಿದೆ. ಶಾಕ್ ಟ್ರೀಟ್ಮೆಂಟ್ ಕೊಟ್ರೆ ಎಲ್ಲಾ ಸರಿಯಾಗುತ್ತೆ ಎನ್ನುತ್ತಾಳೆ ಪಾರು.
57
ಅಪ್ಪನಿಗೆ ಶಾಕ್ ಹೊಡೆಸ್ತಾಳ ಪಾರು
ವೈರ್ ನ್ನು ಅಪ್ಪನ್ನ ಕೈಗೆ ಕಟ್ಟಿ, ಅದನ್ನು ಪ್ಲಗ್ ಮಾಡಿ, ಇನ್ನೇನು ಸ್ವಿಚ್ ಆನ್ ಮಾಡುತ್ತಾ, ಈ ಶಾಕ್ ಟ್ರೀಟ್ಮೆಂಟ್ ಕೊಟ್ರೆ ನೀನು ಜಿಂಕೆ ಮರಿಯಂತೆ ಎದ್ದು ನಡೆಯುವೆ ಎನ್ನುತ್ತಾಳೆ. ಈಗ ನಿಜವಾಗಿಯೂ ಪಾರು ಶಾಕ್ ಟ್ರೀಟ್ಮೆಂಟ್ ಕೊಡ್ತಾಳ, ಅಥವಾ ಅಪ್ಪ ಎದ್ದು ಕುಳಿತುಕೊಳ್ಳುತ್ತಾನ ಕಾದು ನೋಡಬೇಕು.
67
ಪಾರು ಅಂದ್ರೆ ಸುಮ್ನೇನಾ
ಇದೀಗ ಪ್ರೊಮೋ ನೋಡಿರುವ ವೀಕ್ಷಕರು ಇಷ್ಟಪಟ್ಟಿದ್ದು, ಸೂಪರ್ ಪಾರು, ಪಾರು ಅಂದ್ರೆ ಸುಮ್ನೇನಾ, ಬೆಂಕಿ ನಮ್ ಪಾರು, ಆ ಬಾಂಡ್ಲಿ ಮಾವನಿಗೆ ಹಾಗೆಯೇ ಆಗಬೇಕು. ಪಾರು ವೀರಭದ್ರನ ಗ್ರಹಚಾರ ಬಿಡಿಸೋದನ್ನು ನೋಡೊದಕ್ಕೆ ಕಾಯ್ತಿದ್ದೇವೆ ಎಂದಿದ್ದಾರೆ.
77
ವೀರಭದ್ರ ನಾಟಕ ಮಾಡ್ತಿರೋದು ಯಾಕೆ?
ಅಮ್ಮನನ್ನು ರೌಡಿಗಳಿಂದ ಉಳಿಸೋದಕ್ಕೆ ಸ್ವತಃ ಶಿವುಗೆ ಬಂದು ಬಿಡಿಸಿಕೊಂಡು ಹೋಗಿರೋದು ಗೊತ್ತಾದ ತಕ್ಷಣ, ಇನ್ನು ಶಿವು ಕೈಯಿಂದ ನನಗೆ ಉಳಿಗಾಲವಿಲ್ಲ ಎನ್ನುತ್ತಾ ಲಕ್ವಾ ಹೊಡೆದ ನಾಟಕ ಶುರು ಮಾಡಿದ್ದನ್ನು ವೀರಭದ್ರ. ಇದೀಗ ಪಾರು ಕೈಗೆ ಸಿಕ್ಕಿ ಬಿದ್ದಿದ್ದು, ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.