ಬಿಗ್‌ಬಾಸ್ 14ನೇ ವಾರದ ಕ್ಯಾಪ್ಟನ್ ಗಿಲ್ಲಿ ನಟರ ಪಕ್ಷಪಾತ ಧೋರಣೆ ಮನೆಯಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ತಮ್ಮನ್ನು ವ್ಯಂಗ್ಯವಾಡಿದ ಗಿಲ್ಲಿ ನಟನಿಗೆ ಧ್ರುವಂತ್ ಮತ್ತು ಅಶ್ವಿನಿ ಗೌಡ ತೀವ್ರವಾಗಿ ಎದುರೇಟು ನೀಡಿದ್ದು, ಅಶ್ವಿನಿ ಅಖಾಡಕ್ಕೆ ಬರುವಂತೆ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.
ಬಿಗ್‌ಬಾಸ್ 14ನೇ ವಾರದ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಆಟದಲ್ಲಿ ಪಕ್ಷಪಾತ ಮಾಡುತ್ತಿರೋದು ವೀಕ್ಷಕರಿಗೂ ಮತ್ತು ಮನೆಯಲ್ಲಿರುವ ಸ್ಪರ್ಧಿಗಳಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಕ್ಯಾಪ್ಟನ್ ಗಿಲ್ಲಿ ನಟ ಆಟದ ವೈಖರಿ ಮತ್ತು ವರ್ತನೆ ಬಗ್ಗೆ ಧ್ರುವಂತ್ ಮತ್ತು ಅಶ್ವಿನಿ ಗೌಡ ಸುದೀರ್ಘವಾಗಿ ವಿಶ್ಲೇಷಣೆ ಮಾಡುತ್ತಾ ಚರ್ಚೆ ನಡೆಸುತ್ತಿದ್ದಾರೆ. ಈ ವಾರ ಇವರಿಬ್ಬರು ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ.
25
ಗಿಲ್ಲಿ ವ್ಯಂಗ್ಯ
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ ಜೊತೆಯಾಗಿ ಗಿಲ್ಲಿ ನಟನ ವಿರುದ್ಧ ಮುಗಿಬಿದ್ದಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಧ್ರುವಂತ್ ಮತ್ತು ಅಶ್ವಿನಿ ಗೌಡ ಮಾತನಾಡುತ್ತಿರುತ್ತಾರೆ. ದೂರದಲ್ಲಿ ಕುಳಿತಿದ್ದ ಗಿಲ್ಲಿ ನಟ ಇಬ್ಬರನ್ನು ವ್ಯಂಗ್ಯ ಮಾಡುತ್ತಾರೆ. ಇದರಿಂದ ಇಬ್ಬರು ಕೋಪಗೊಳ್ಳುತ್ತಾರೆ.
35
ಸೊಂಟ ಇಲ್ಲದವನು ಗಿಲ್ಲಿ
ಈ ವೇಳೆ ಕೋಪಗೊಂಡ ಧ್ರುವಂತ್, ನಿನ್ನ ಸೊಂಟದಲ್ಲಿ ನಿಂತ್ಕೊಂಡು ಸ್ನಾನ, ಹಲ್ಲುಜ್ಜುಕೊಂಡು ಬಾ ನೀನು ಎಂದು ಗಿಲ್ಲಿಗೆ ಸವಾಲು ಹಾಕುತ್ತಾರೆ. ನಿನ್ನಿಂದ ಇಷ್ಟೇ ಮಾಡಲು ಸಾಧ್ಯ. ಮಿಸ್ಟರ್ ನಟರಾಜ್ ಅರ್ಧ ಅರ್ಧ ಗಂಟೆಗೆ ಕೊಡುತ್ತಿರುತ್ತೇನೆ ಕೇಳಿಸಿಕೊಳ್ಳಿ ಎಂದು ಸವಾಲು ಹಾಕುತ್ತಾರೆ.
ತಮ್ಮನ್ನು ಕೆಣಕಿದ್ದಕ್ಕೆ ಕೆರಳಿ ಕೆಂಡವಾದ ಅಶ್ವಿನಿ ಗೌಡ, ಏಯ್ ಬೆನ್ನುಮೂಳೆ ಇಲ್ಲದವನೇ ಅಂತ ಹೇಳುತ್ತಲೇ ವಾಗ್ದಾಳಿ ಮಾಡಲು ಆರಂಭಿಸುತ್ತಾರೆ. ನನ್ನನ್ನು ಕೆಣಕಬೇಡ ಅಂತ ಸಾವಿರ ಸಲ ಹೇಳಿದ್ದೇನೆ. ನಿನ್ನ ಟೈಮ್ ಸ್ಟಾರ್ಟ್ ಆಗಿದೆ ಎಂದು ಚಿಟಿಕೆ ಹೊಡೆದು ಗಿಲ್ಲಿಗೆ ಹೇಳುತ್ತಾರೆ. ಇದೇ ವೇಳೆ ಬಾರೋ ಅಖಾಡಕ್ಕೆ ಎಂದು ತೊಡೆ ತಟ್ಟಿ ಅಶ್ವಿನಿ ಗೌಡ ಸವಾಲು ಹಾಕಿ ಗುಡುಗುತ್ತಾರೆ.
ಗಿಲ್ಲಿ ಕ್ಯಾಪ್ಟನ್ ಆಗುತ್ತಿದ್ದಂತೆ ಅಡುಗೆಮನೆ ಕೆಲಸದ ವಿಚಾರವಾಗಿ ಅಶ್ವಿನಿ ಗೌಡ ಜೊತೆ ಜಗಳ ಮಾಡಿಕೊಂಡಿರುತ್ತಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿಯೂ ಸ್ನೇಹಿತೆ ಕಾವ್ಯಾ ಅವರನ್ನು ಉಳಿಸಿಕೊಳ್ಳಲು ಗಿಲ್ಲಿ ನಟ ಪ್ರಯತ್ನ ಮಾಡಿ ಸಕ್ಸಸ್ ಆಗುತ್ತಾರೆ. ಇದು ಮನೆಯ ಸದಸ್ಯರು ಮತ್ತು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.