ಕಿರುತೆರೆಯಲ್ಲಿ ಕಿರಿಕ್ ಮಾಡಿಕೊಂಡು ಬ್ಯಾನ್ ಆದ ಕನ್ನಡ ನಟ -ನಟಿಯರು

Published : Dec 30, 2025, 05:14 PM IST

Actors Who Banned From Small screen: ಮನರಂಜನಾ ಜಗತ್ತು ಮಾಯೆ ಇದ್ದಂತೆ, ಅಲ್ಲಿ ಯಾವಾಗ ಏನಾಗುತ್ತದೆ ಗೊತ್ತಾಗುವುದಿಲ್ಲ. ಅದರಲ್ಲೂ ವಿವಾದಗಳಿಗಂತೂ ಲೆಕ್ಕವೇ ಇಲ್ಲ. ಕಿರುತೆರೆಯಿಂದ ಹಲವು ನಟ-ನಟಿಯರು ಕಿರಿಕ್ ಮಾಡಿಕೊಂಡು ಬ್ಯಾನ್ ಆಗಿದ್ದಾರೆ. ಕನ್ನಡ, ತೆಲುಗು ಕಿರುತೆರೆಯಲ್ಲಿ ಬ್ಯಾನ್ ಆದ ನಟರಿವರು.

PREV
15
ಬ್ಯಾನ್ ಆದ ಕನ್ನಡದ ನಟರು

ಚಿತ್ರರಂಗವೇ ಇರಲಿ ಅಥವಾ ಕಿರುತೆರೆಯೇ ಇರಲಿ ವಿವಾದಗಳು ಸಾಮಾನ್ಯ. ಕನ್ನಡ ನಟ, ನಟಿಯರ ಅದೆಷ್ಟೋ ವಿವಾದಗಳ ಬಗ್ಗೆ ನೀವು ತಿಳಿದುಕೊಂಡಿರಬಹುದು ಅಲ್ವಾ? ಇಲ್ಲಿ ಯಾವ ನಟ-ನಟಿಯರು ಕಿರುತೆರೆಯಲ್ಲಿ ವಿವಾದ ಮಾಡಿಕೊಂಡು ಬ್ಯಾನ್ ಆದರು ಎನ್ನುವ ಬಗ್ಗೆ ಮಾಹಿತಿ ಇದೆ. ಇವರೇ ನೋಡಿ ಕಿರುತೆರೆಯಲ್ಲಿ ಕಿರಿಕ್ ಮಾಡಿ ಬ್ಯಾನ್ ಆದ ನಟರು.

25
ಚಂದನ್ ಕುಮಾರ್

ಕನ್ನಡ ಕಿರುತೆರೆ ಮತ್ತು ಚಂದನವನದಲ್ಲಿ ಗುರುತಿಸಿಕೊಂಡಿರುವ ನಟ ಚಂದನ್ ಕುಮಾರ್ ಅವರನ್ನು ತೆಲುಗು ಕಿರುತೆರೆಯಿಂದ ಬ್ಯಾನ್ ಮಾಡಲಾಗಿತ್ತು. ಚಂದನ್ ‘ಶ್ರೀಮತಿ ಶ್ರೀಮಾನ್’ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಆ ಧಾರಾವಾಹಿಯ ಸೆಟ್ ನಲ್ಲಿ ಡೈರೆಕ್ಷನ್ ಡಿಪಾರ್ಟ್’ಮೆಂಟ್ ಯುವಕನೊಬ್ಬ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ, ತಮಗೆ ಡೈರೆಕ್ಷನ್ ತಂಡ ಕ್ಷಮೆ ಕೇಳಬೇಕು ಎಂದು ನಟ ಪ್ರೆಸ್ ಮೀಟ್ ಮಾಡಿದ್ದರು. ಅದಾದ ಬಳಿಕ ತೆಲುಗು ಟೆಲಿವಿಷನ್ ನಿರ್ಮಾಪಕರ ಮಂಡಳಿಗೆ ತೆಲುಗು ಟೆಲಿವಿಷನ್ ಟೆಕ್ನೀಷಿಯನ್ಸ್ ಮತ್ತು ವರ್ಕರ್ಸ್ ಫೆಡರೇಷನ್ ಪತ್ರ ಬರೆದು ‘’ತೆಲುಗು ಕಿರುತೆರೆ ಮತ್ತು ಓಟಿಟಿಯಲ್ಲಿ ಚಂದನ್ ಕುಮಾರ್ ಅವರ ಮೇಲೆ ನಿಷೇಧ ಹೇರಬೇಕು’’ ಎಂದು ಒತ್ತಾಯಿಸಿದ್ದರು.

35
ಪಲ್ಲವಿ ಗೌಡ

ಕನ್ನಡ ಕಿರುತೆರೆ ನಟಿ ಪಲ್ಲವಿ ಗೌಡ ಅವರು ತೆಲುಗು ಕಿರುತೆರೆಯಲ್ಲಿ ಒಪ್ಪಂದ ಉಲ್ಲಂಘನೆ ಕಾರಣದಿಂದ ಸುಮಾರು 6 ತಿಂಗಳು ಬ್ಯಾನ್ ಆಗಿದ್ದರು. ಅಲ್ಲಿನ ಒಂದು ಸೀರಿಯಲ್‌ಗೆ ಸಹಿ ಹಾಕಿ ಮತ್ತೊಂದರಲ್ಲಿ ನಟಿಸಿದ್ದರಿಂದ ಅವರನ್ನು ಬ್ಯಾನ್ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಈಗ ಅವರು ಮತ್ತೆ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ.

45
ಅನಿರುದ್ಧ್ ಜಟ್ಕರ್

‘ಜೊತೆ ಜೊತೆಯಲಿ’ ಸೀರಿಯಲ್ ತಂಡದ ನಿರ್ಮಾಪಕ ಮತ್ತು ನಿರ್ದೇಶಕರ ಜೊತೆಗಿನ ವೈಮನಸ್ಸಿನಿಂದಾಗಿ ಅನಿರುದ್ಧ್ ಸೀರಿಯಲ್ ನಿಂದ ಹೊರ ಬಂದಿದ್ದರು. ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ್ ಅವರನ್ನು ಎರಡು ವರ್ಷ ಬ್ಯಾನ್ ಮಾಡಬೇಕೆಂದು ತಿಳಿಸಿತ್ತು, ಆದರೆ ನಂತರ ಫಿಲ್ಮ್ ಚೇಂಬರ್ ಮತ್ತು ಸಂಘದ ಸಭೆಗಳ ನಂತರ ಈ ವಿವಾದ ಸುಖಾಂತ್ಯ ಕಂಡಿತು, ಮತ್ತು ಅನಿರುದ್ಧ್ 'ಸೂರ್ಯವಂಶ' ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ಮರಳಿದರು.

55
ನಯನಾ ನಾಗರಾಜ್

ನಟಿ ನಯನಾ ನಾಗರಾಜ್, "ಪಾಪ ಪಾಂಡು", "ಗಿಣಿರಾಮ" ಧಾರಾವಾಹಿಗಳಲ್ಲಿ ನಟಿಸಿದ್ದರು, ಸೆಟ್‌ನಲ್ಲಿ ಅವಮಾನ, ಕಿರುಕುಳ ಅನುಭವಿಸಿದ್ದರಿಂದ ಗಿಣಿರಾಮ ಧಾರಾವಾಹಿ ತೊರೆದಿದ್ದರು. ಚಾನೆಲ್‌ಗೆ ದೂರು ನೀಡಿದರೂ ಪರಿಹಾರ ಸಿಗದೇ, ಕಿರುಕುಳ ಮುಂದುವರೆದ ಕಾರಣ ಧಾರಾವಾಹಿಯಿಂದ ಹೊರ ಬಂದಿದ್ದ, ನಯನಾ ವಿರುದ್ಧ ನಷ್ಟದ ಆರೋಪದ ಮೇಲೆ ನಿಷೇಧ ಹೇರಲಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories