ಬಿಗ್‌ಬಾಸ್ ಮನೆಯಲ್ಲಿ ತನ್ನ ಹಾಸ್ಯದಿಂದಲೇ ಜನಪ್ರಿಯರಾಗಿರುವ ಗಿಲ್ಲಿ ನಟ, ಇದೀಗ ಹೊಸ ತಮಾಷೆಯ ಮೂಲಕ ಗಮನ ಸೆಳೆದಿದ್ದಾರೆ. ಮ್ಯೂಟಂಟ್ ರಘು ಜೊತೆ ಗಂಡ-ಹೆಂಡತಿಯಾಗಿ ಶಾಪಿಂಗ್‌ಗೆ ಹೋದಾಗ, ರಜತ್ ಅವರಿಂದಾದ ಕಿರಿಕ್ ಮತ್ತು ಅದಕ್ಕೆ ಗಿಲ್ಲಿ ನಟ ನೀಡಿದ ಪ್ರತಿಕ್ರಿಯೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿದೆ.
ಬಿಗ್‌ಬಾಸ್ (Bigg Boss) ನಲ್ಲಿ ಗಿಲ್ಲಿ ನಟನ ಹವಾ ಜೋರಾಗಿಯೇ ನಡೆಯುತ್ತಿದೆ. ಗಿಲ್ಲಿ ನಟ ಇದ್ದಲ್ಲಿ ಹಾಸ್ಯ ಇದದ್ದೇ. ಕೆಲವೊಮ್ಮೆ ಗಿಲ್ಲಿ ನಟನ ಹಾಸ್ಯಗಳು ಕೆಲವರಿಗೆ ಬೇಸರ ತರಿಸಿದ್ದೂ ಇದೆ. ಈ ಬಗ್ಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದೂ ಆಗಿದೆ.
27
ಗಿಲ್ಲಿ ಸದ್ದು
ಅದೇನೇ ಇದ್ದರೂ ಗಿಲ್ಲಿಯೇ ಗೆಲ್ಲುತ್ತಾರೆ ಎನ್ನುವ ಬಗ್ಗೆ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಅವರ ಹೆಸರು ಸದ್ದು ಮಾಡುತ್ತಿದೆ, ಮಾತ್ರವಲ್ಲದೇ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಬಂದಿರುವ ಬಹುತೇಕ ಎಲ್ಲರೂ ಇಷ್ಟ ಇರಲಿ ಬಿಡಲಿ ಗಿಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
37
ಗಿಲ್ಲಿ ನಟನ ತಮಾಷೆ
ಇದೀಗ ಅಂಥದ್ದೇ ಒಂದು ತಮಾಷೆ ಮಾಡಿದ್ದಾರೆ ಗಿಲ್ಲಿ ನಟ. ಅದೇನೆಂದರೆ, ಗಿಲ್ಲಿ ನಟ ಮತ್ತು ಮ್ಯೂಟಂಟ್ ರಘು ಗಂಡ- ಹೆಂಡತಿಯಾಗಿ ಶಾಪಿಂಗ್‌ಗೆ ಹೋಗಿದ್ದಾರೆ. ಅಲ್ಲಿ ಬಂದಿರೋ ರಜತ್ ಹೆಂಡ್ತಿಯಾಗಿರೋ ಗಿಲ್ಲಿ ನಟನಿಗೆ ಚುಡಾಯಿಸಿದ್ದಾರೆ.
ಅವರು ಚುಡಾಯಿಸಿದ್ದನ್ನು ನೋಡಿ, ಗಿಲ್ಲಿ ನಟ ರಘು ಬಳಿ ನೋಡ್ರಿ ತುಂಬಾ ತೊಂದರೆ ಕೊಡ್ತಾ ಇದ್ದಾನೆ ಎಂದಾಗ ರಘು ನಕ್ಕಿದ್ದಾರೆ. ನಿನಗೂ ಅವನಿಗೂ ಏನು ಸಂಬಂಧ, ಮೊದಲೇ ಪರಿಚಯವಿತ್ತಾ ಎಂದೆಲ್ಲಾ ಕೇಳಿದ್ದಾರೆ.
57
ಅವಳು ಮೊದಲೇ ಗೊತ್ತು
ಅದಕ್ಕೆ ಗಿಲ್ಲಿ ನಟ ಇಲ್ಲ, ಇವತ್ತೇ ನೋಡಿದ್ದು ಎಂದಾಗ, ರಜತ್ ಇಲ್ಲ ಅವಳು ನನಗೆ ಮೊದಲೇ ಗೊತ್ತು ಎಂದು ಗಿಲ್ಲಿಗೆ ಚುಚ್ಚಿದ್ದಾರೆ. ನೋಡಿ ಅವರು ಚುಚ್ಚುತ್ತಾರೆ ಎಂದಾಗ ರಘು ಜೋರಾಗಿ ನಕ್ಕಿದ್ದಾರೆ.
67
ನಕ್ತೀರಲ್ಲರೀ...
ಅದಕ್ಕೆ ಗಿಲ್ಲಿ ನಟ, ನಿಮ್ ಹೆಂಡ್ತಿಗೆ ಚುಡಾಯಿಸಿದ್ರೂ ನಕ್ತೀರಲ್ಲರಿ, ಬೈಯೋ ಬದಲು ಖುಷಿ ಪಡ್ತೀರಲ್ಲಿ ತಮಾಷೆ ಮಾಡಿರುವ ವಿಡಿಯೋ ಅನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
77
ಶಾಪಿಂಗ್‌ಗೆ ಅಡ್ಡಿ
ಗಂಡ ಹೆಂಡ್ತಿ ಶಾಪಿಂಗ್ ಗೆ ಅಡ್ಡಿ ಆದ್ರೂ ರಜತ್ ಎನ್ನುವ ಶೀರ್ಷಿಕೆಯಲ್ಲಿ ಇದರ ಪ್ರೊಮೋ ರಿಲೀಸ್ ಮಾಡಲಾಗಿದ್ದು, ಗಿಲ್ಲಿಯ ತಮಾಷೆಗೆ ಅವರ ಅಭಿಮಾನಿಗಳು ಮತ್ತಷ್ಟು ಖುಷಿ ಪಟ್ಟುಕೊಂಡಿದ್ದಾರೆ.