ಸೂಪರ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ: ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಹೀಗೆ!

Published : Sep 17, 2026, 11:39 PM IST

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಲಾಸ್ ವೇಗಾಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ.

PREV
16
ಟ್ರಾವೆಲಿಂಗ್ ಅಂದ್ರೆ ಪಂಚಪ್ರಾಣ

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ಟ್ರಾವೆಲಿಂಗ್ ಅಂದ್ರೆ ಪಂಚಪ್ರಾಣ ಎನ್ನುವ ನಿವೇದಿತಾ, ಆಗಾಗ ಹೊಸ ಹೊಸ ತಾಣಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ಬಾರಿ ಅಮೆರಿಕದ ನೆವಾಡಾ ರಾಜ್ಯದ ಪ್ರಸಿದ್ಧ ನಗರ ಲಾಸ್ ವೇಗಾಸ್‌ಗೆ ತೆರಳಿದ್ದು, ಅಲ್ಲಿನ ತಮ್ಮ ಟ್ರಾವೆಲ್ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

26
ಗ್ಲಾಮರಸ್ ಲುಕ್‌ನಲ್ಲಿ ನಿವೇದಿತಾ

ಲಾಸ್ ವೇಗಾಸ್‌ನ ಸ್ವಿಮ್ಮಿಂಗ್ ಪೂಲ್ ಬಳಿ ಟೂ-ಪೀಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ನಿವೇದಿತಾ, ಸಖತ್ ಗ್ಲಾಮರಸ್ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅವರ ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ‘ಬ್ಯೂಟಿಫುಲ್ ನಿವಿ’, ‘ಸ್ಪೈಸಿ ಕ್ವೀನ್’, ‘ಆಹಾ ಸೂಪರ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

36
ಅಮೆರಿಕದಲ್ಲಿ ವೆಕೇಷನ್

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಿವೇದಿತಾ ಗೌಡ, ತಮ್ಮ ರೀಲ್ಸ್, ಫೋಟೋಗಳು ಹಾಗೂ ಪುಟ್ಟ ಪುಟ್ಟ ಮಾತುಗಳ ಮೂಲಕ ಆಗಾಗ ಸುದ್ದಿಯಾಗುತ್ತಾರೆ. ಇದೀಗ ಬೆಂಗಳೂರಿನ ಬ್ಯುಸಿ ಲೈಫ್ ಮತ್ತು ಟ್ರಾಫಿಕ್‌ನಿಂದ ಬ್ರೇಕ್ ಪಡೆದು ಅಮೆರಿಕದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

46
ಹಾಲಿಡೇ ಮಸ್ತಿ

ನಿವೇದಿತಾಗೆ ಪ್ರವಾಸವೆಂದರೆ ಎಷ್ಟು ಇಷ್ಟ ಎನ್ನುವುದನ್ನು ಅವರ ಹಿಂದಿನ ಮಾತುಗಳೇ ಹೇಳುತ್ತವೆ. ಆರ್.ಜೆ. ರಾಜೇಶ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಅವರು, ಪ್ರವಾಸಕ್ಕೆ ಹೋಗುವುದು ಮಾತ್ರವಲ್ಲ, ಅಲ್ಲಿಗೆ ಹೋಗಿ ಬೇರೆ ಬೇರೆ ರೀತಿಯ ಬಟ್ಟೆಗಳನ್ನು ಧರಿಸುವುದೂ ತಮ್ಮ ಫೇವರಿಟ್ ಎಂದು ಹೇಳಿಕೊಂಡಿದ್ದರು.

56
ವೆರೈಟಿ ಬಟ್ಟೆ ಇಷ್ಟ

ನನಗೆ ಪ್ರವಾಸ ಮಾಡುವುದು ಎಂದರೆ ತುಂಬಾ ಇಷ್ಟ. ಅದಕ್ಕಿಂತ ಹೆಚ್ಚಾಗಿ ಪ್ರವಾಸಕ್ಕೆ ಹೋದಾಗ ವೆರೈಟಿ ಬಟ್ಟೆಗಳನ್ನು ತೊಡುವುದೆಂದರೆ ಮತ್ತಷ್ಟು ಇಷ್ಟ. ಅದಕ್ಕಾಗಿಯೇ ನಾನು ಹೋಗುವ ಕಡೆಯಲ್ಲೆಲ್ಲಾ ಕನಿಷ್ಠ ಎರಡು ಸೂಟ್‌ಕೇಸ್ ತುಂಬಾ ಬಟ್ಟೆಗಳನ್ನು ಹೊತ್ತುಕೊಂಡು ಹೋಗುತ್ತೇನೆ ಎಂದು ನಿವೇದಿತಾ ಹೇಳಿದ್ದರು.

66
ಸೋಷಿಯಲ್ ಮೀಡಿಯಾದಲ್ಲಿ ಸದ್ದು

ಈಗ ಅಮೆರಿಕ ಪ್ರವಾಸದಲ್ಲಿ ಒಂದರ ಹಿಂದೆ ಒಂದರಂತೆ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿವೇದಿತಾ, ತಮ್ಮ ಆ ಮಾತು ನಿಜ ಎಂಬುದನ್ನು ತೋರಿಸುತ್ತಿದ್ದಾರೆ. ಲಾಸ್ ವೇಗಾಸ್‌ನ ಟ್ರಾವೆಲ್ ವೈಬ್ಸ್, ಗ್ಲಾಮರಸ್ ಲುಕ್ಸ್ ಹಾಗೂ ಫೋಟೋಶೂಟ್‌ಗಳ ಮೂಲಕ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories