ಕರ್ಣ ಮತ್ತು ನಿಧಿ ಬ್ಯಾಂಕಾಕ್‌ನಲ್ಲಿ ಹನಿಮೂನ್ ಆಚರಿಸುತ್ತಿರುವಾಗ ನಯನತಾರಾ ಕುತಂತ್ರದಿಂದ ಕರ್ಣ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿದ್ದಾನೆ. ಪಾಸ್‌ಪೋರ್ಟ್ ಸೀಜ್ ಆಗಿ, ಹಣವಿಲ್ಲದೆ ಪರದಾಡುತ್ತಿರುವ ಕರ್ಣನನ್ನು ಪೊಲೀಸರು ಅರೆಸ್ಟ್ ಮಾಡಲು ಬಂದಿದ್ದಾರೆ.
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಕರ್ಣ ಮತ್ತು ನಿಧಿ ಬ್ಯಾಂಕಾಕ್ಗೆ ಹನಿಮೂನ್ಗೆಂದು ಬಂದಿದ್ದಾರೆ. ಅಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ.
26
ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್
ಆದರೆ, ಇವರಿಬ್ಬರ ಖುಷಿಯನ್ನು ನಾಶಪಡಿಸುವುದಕ್ಕಾಗಿಯೇ ನಯನತಾರಾ ದೊಡ್ಡ ಪ್ಲ್ಯಾನ್ ಮಾಡಿದ್ದಾಳೆ. ಕರ್ಣನನ್ನು ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಪೊಲೀಸರು ಬಂದು ಕರ್ಣನನ್ನು ಅರೆಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.
36
ಅರೆಸ್ಟ್ಗೆ ವಾರೆಂಟ್
ಕರ್ಣನ ಅರೆಸ್ಟ್ಗೆ ವಾರೆಂಟ್ ತರಲಾಗಿದೆ. ತಾವು ಯಾವುದೋ ಕಷ್ಟದಲ್ಲಿ ಸಿಲುಕಿರುವ ಬಗ್ಗೆ ತಿಳಿದುಕೊಂಡಿದ್ದ ಕರ್ಣ, ಅದರಿಂದ ಹೇಗೆ ಪಾರಾಗಬೇಕು ಎಂದು ತಿಳಿಯುವಷ್ಟರಲ್ಲಿಯೇ ಈ ಅನಾಹುತ ಆಗಿಹೋಗಿದೆ.
ಅದಕ್ಕೂ ಮೊದಲು ಅವರ ಪಾಸ್‌ಪೋರ್ಟ್ ಸೀಜ್ ಮಾಡಲಾಗಿತ್ತು. ಕರ್ಣನ ಬಳಿ ಹಣ ಕೂಡ ಇರಲಿಲ್ಲ. ಆದರೆ ನಿಧಿ ತನ್ನ ಆಸೆಯ ಪಟ್ಟಿಯನ್ನು ಕರ್ಣನ ಮುಂದೆ ಇಟ್ಟಿದ್ದಳು.
56
ಚಿನ್ನದ ಸರ ಮಾರಾಟ
ಅದಕ್ಕಾಗಿ ಕರ್ಣ ತನ್ನ ಚಿನ್ನದ ಸರವನ್ನು ಮಾರಿ, ಅದರಿಂದ ಬಂದ ಹಣದಿಂದ ನಿಧಿಯ ಆಸೆಯನ್ನು ಪೂರೈಸಲು ಮುಂದಾಗಿದ್ದ. ಅಷ್ಟರಲ್ಲಿಯೇ ಈ ಅನಾಹುತ ಸಂಭವಿಸಿದೆ.
66
ಕಾಯುವ ತಂತ್ರ
ಈ ಸಂಕಷ್ಟದಿಂದ ಕರ್ಣ ಮತ್ತು ನಿಧಿ ಹೇಗೆ ಹೊರಕ್ಕೆ ಬರುತ್ತಾರೆ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಿದೆ. ಎಲ್ಲವೂ ನಯನತಾರಾ ಕುತಂತ್ರ ಎನ್ನುವುದು ತಿಳಿಯುವುದು ಯಾವಾಗ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.