‘Lakshmi Nivasa’... ಭಾವನಾ ಪಾತ್ರ ಮುಗಿಯುತ್ತಾ? ಧಾರಾವಾಹಿಯಿಂದ ಹೊರ ಬರ್ತಾರ ದಿಶಾ ಮದನ್!

Published : Sep 17, 2026, 07:04 PM IST

Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರ ಕೊನೆಯಾಗುತ್ತಾ? ಹೀಗೊಂದು ಪ್ರಶ್ನೆ ಬರೋದಕ್ಕೆ ಕಾರಣ ಏನು ಅಂದ್ರೆ ಈಗಷ್ಟೇ ಬಿಡುಗಡೆಯಾಗಿರುವ ಪ್ರೊಮೋ. ಅತ್ತೆಗೆ ಬೀಳಲಿದ್ದ ಗುಂಡೇಟಿಗೆ ತಾನು ಎದೆಯೊಡ್ಡಿರುವ ಭಾವನಾ, ಸಾವನ್ನು ಗೆದ್ದು ಬರುತ್ತಾರೋ? ಪಾತ್ರ ಕೊನೆಯಾಗುತ್ತೋ?.

PREV
16
ಲಕ್ಷ್ಮೀ ನಿವಾಸ ಧಾರಾವಾಹಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೀಗ ದೊಡ್ಡದೊಂದು ಟ್ವಿಸ್ಟ್ ತೆಗೆದುಕೊಂಡು ಬಂದಿದೆ. ಟ್ವಿಸ್ಟ್ ನೋಡಿದ್ರೆ ಭಾವನಾ ಪಾತ್ರದ ಕೊನೆಯಾಗುತ್ತಾ? ದಿಶಾ ಮದನ್ ಧಾರಾವಾಹಿಯಿಂದ ಹೊರ ನಡೆಯುತ್ತಾರೆಯೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ?

26
ಏನಾಗ್ತಿದೆ ಧಾರಾವಾಹಿಯಲ್ಲಿ

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಇದೀಗ ಅತ್ತೆ ರೇಣುಕಾಳ ಸನ್ಮಾನ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ಕುಟುಂಬ ಸಮೇತರಾಗಿ ಜವರೇಗೌಡರ ಕುಟುಂಬ ಸಮಾರಂಭಕ್ಕೆ ಹೊರಟು ನಿಂತಿದೆ. ಆದರೆ ನೀಲುವಿನ ಸಂಚಿಕೆ ಇಡೀ ಮನೆಯ ಸಂತೋಷ ಕಣ್ಮರೆಯಾಗಿ ದುಃಖದ ಮಡುವಿನಲ್ಲಿ ತೇಲುವಂತಾಗಿದೆ.

36
ಹೊಸ ಪ್ರೊಮೋದಲ್ಲಿ ಏನಿದೆ?

ಪ್ರೊಮೋದಲ್ಲಿ ತೋರಿಸಿದಂತೆ, ಇನ್ನೇನು ಜವರೇಗೌಡರ ಕುಟುಂಬ ಸಮಾರಂಭಕ್ಕೆ ಹೊರಡಲು ಅನುವಾಗುತ್ತಿದ್ದಂತೆ, ನೀಲು ಆಣತಿಯಂತೆ, ರೌಡಿಯೊಬ್ಬ ರೇಣುಕಾ ಮೇಲೆ ಗುಂಡು ಹಾರಿಸುತ್ತಾನೆ, ಕಾರಿನಿಂದ ಇದನ್ನ ನೋಡಿದ ಭಾವನಾ ಓಡಿ ಹೋಗಿ ಅತ್ತೆಯನ್ನು ರಕ್ಷಿಸಲು ಹೋಗಿ ತನ್ನ ಎದೆ ಮೇಲೆ ಗುಂಡೇಟು ಬೀಳುವಂತೆ ಮಾಡುತ್ತಾಳೆ.

46
ಭಾವನಾ ಪಾತ್ರ ಕೊನೆಯಾಗುತ್ತಾ?

ಈ ಪ್ರೊಮೋ ನೋಡುತ್ತಿದ್ದಂತೆ ವೀಕ್ಷಕರ ಮನಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿವೆ. ಧಾರಾವಾಹಿಯಲ್ಲಿ ಭಾವನಾ ಪಾತ್ರ ಕೊನೆಯಾಗುತ್ತಾ? ಅದಕ್ಕಾಗಿ ಈ ಶೂಟಿಂಗ್ ದೃಶ್ಯ ಇದೆಯೇ? ಅಥವಾ ಭಾವನಾ ಹುಷಾರಾಗಿ ಬರುತ್ತಾಳೆ, ಅತ್ತೆ-ಸೊಸೆ ಮತ್ತೆ ಒಂದಾಗುತ್ತಾರೆಯೇ? ಈ ಎರಡು ಪ್ರಶ್ನೆಗಳು ಸದ್ಯ ವೀಕ್ಷಕರ ಮನಸ್ಸಲ್ಲಿದೆ.

56
ಧಾರಾವಾಹಿಯಿಂದ ಹೊರ ಬರುತ್ತಾರೆಯೇ ದಿಶಾ

ದಿಶಾ ಮದನ್ ಸದ್ಯ ತಮ್ಮ ಡ್ಯಾನ್ಸ್ ದಿಶಾ ಮದನ್ ಡ್ಯಾನ್ಸ್ ಕ್ಲಾಸಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಹೆಚ್ಚಾಗಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ನಟಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗಾಗಿ ನಟಿ ಧಾರಾವಾಹಿಯಿಂದ ಹೊರ ಬರುತ್ತಾರೆಯೇ ಎನ್ನು ಪ್ರಶ್ನೆ ಮೂಡಿದೆ. ಆದರೆ ಯಾವುದಕ್ಕೂ ಉತ್ತರ ಸಿಕ್ಕಿಲ್ಲ.

66
ವೀಕ್ಷಕರು ಏನು ಹೇಳುತ್ತಿದ್ದಾರೆ?
  • ಇದಾದಮೇಲೆ ಭಾವನಾ ಅಕ್ಕ, ರೇಣುಕಾ ಅತ್ತೇ ಒಂದಾಗೆ ಆಗ್ತಾರೆ ಅನ್ನೋರು ಲೈಕ್ ಮಾಡಿ
  • ನಮ್ಮ ಭಾವನಾ ಮೇಡಂ ಗೆ ಏನು ಆಗಲ್ಲ
  • ಭಾವನಾ ಅತ್ತೇನಾ shooter's ಇಂದ ಕಾಪಾಡಲು ಹೋದಾಗ ಅವಳ ಅತ್ತೆಯನ್ನು shooting range ಇಂದ ದೂರ ತಳ್ಳಿ ಅದೇ exact spot ಅಲ್ಲಿ ತಾನೆ ನಿನ್ಕೋಬೇಕಾ? ಬೇರೆ ಜಾಗ ಇಲ್ವಾ ಅಂತಾನೂ ಪ್ರಶ್ನಿಸಿದ್ದಾರೆ ಜನ.
  • ಮುಂದೇನಾಗುತ್ತೆ ಅನ್ನೋದನ್ನು ಸೀರಿಯಲ್ ನೋಡಿಯೇ ತಿಳಿಯಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories