ಚಂದನ್ ಶೆಟ್ಟಿಯಿಂದ ವಿಚ್ಛೇದನದ ನಂತರ ನಿವೇದಿತಾ ಗೌಡ ಅವರ ಖ್ಯಾತಿ ಹೆಚ್ಚಾಗಿದ್ದು, ಟ್ರೋಲ್‌ಗಳ ನಡುವೆಯೂ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಐಟಂ ಸಾಂಗ್ ಮಾಡಲು ಸಿದ್ಧವಿರುವುದಾಗಿ ಹೇಳಿರುವ ಅವರು, ಇದೀಗ ತಮ್ಮ ಎರಡನೇ ಮದುವೆಯ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.
Bigg Bossನಿಂದ ಫೇಮಸ್ ಆಗಿರೋ ನಿವೇದಿತಾ ಗೌಡ (Niveditha Gowda) ಅವರ ಲೆವೆಲ್ಲೇ ಈಗ ಬೇರೆಯಾಗಿದೆ. ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ, ಫಾರಿನ್ ಟೂರ್ ಹೆಚ್ಚಾಗಿದೆ, ಜೊತೆಗೆ ತುಂಡುಡುಗೆ ಕುಣಿತವೂ ಅಷ್ಟೇ ಜೋರಾಗಿದೆ. ವಾಣಿ ಎನ್ನುವ ಸ್ನೇಹಿತೆಯ ಜೊತೆ ಟ್ರೋಲ್ ಆಗುವಂಥ ರೀಲ್ಸ್ ಮಾಡುತ್ತಾ ಅಷ್ಟೇ (ಕು)ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. ಟ್ರೋಲ್ ಆದಷ್ಟೂ ಹೆಚ್ಚು ಹೆಚ್ಚು ಫೇಮಸ್ ಆಗುತ್ತಾ, ಹೆಚ್ಚಿಗೆ ದುಡಿಯುತ್ತಿದ್ದಾರೆ. ಇಂಥವರಿಗಾಗಿಯೇ ಕಾದು ಕುಳಿತಿರುವ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಭರ್ಜರಿ ಆಫರ್ ಪಡೆಯುತ್ತಿದ್ದಾರೆ.
26
ಬೇರೆ ಲೆವೆಲ್
ಒಟ್ಟಿನಲ್ಲಿ ನಿವೇದಿತಾ ಗೌಡ ಅವರ ರೇಂಜ್ ಇದೊಂದು ವರ್ಷದಲ್ಲಿ ಬೇರೆಯದ್ದೇ ಲೆವೆಲ್ಲಿಗೆ ಹೋಗಿದೆ ಎನ್ನಬಹುದು. ಇನ್ನೂ ವಯಸ್ಸು 20 ಇರುವಾಗಲೇ ಬಿಗ್ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿಯವರ ಲವ್ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿರುವಾಕೆಯೇ.
36
ಸೊಂಟದ ಚೈನ್ ಮೇಲೆ ಕಣ್ಣು
ಇದೀಗ ನಿವೇದಿತಾ ಹೊಸ ರೀಲ್ಸ್ ಹಾಕಿದ್ದಾರೆ. ಅದರಲ್ಲಿ ಮಾಮೂಲಿನಂತೆ ಸೊಂಟವನ್ನು ತೋರಿಸುತ್ತಾ ಸೊಂಟ ಬಳುಕಿಸಿದ್ದಾರೆ. ಆದರೆ ಇದೀಗ ನೆಟ್ಟಿಗರ ಕಣ್ಣು ಅವರ ಸೊಂಟದ ಮೇಲೆ ಹೋಗಿದೆ. ಅದಕ್ಕೆ ಕಾರಣ, ಅವರು ಹಾಕಿರುವ ಸೊಂಟದ ಚೈನು. ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದರಷ್ಟೇ ನಟಿ ಚೈನು ಧರಿಸಿರುವುದನ್ನು ನೋಡಬಹುದು. ಆದರೂ ಅದನ್ನೂ ಬಿಡದ ನಿವ್ವಿ ಫ್ಯಾನ್ಸ್ ಸೊಂಟದ ಚೈನ್ ಸಕತ್ ಸುಂದರವಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆರ್ಥಿಕ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ನಿವೇದಿತಾ ಗೌಡ, ಇದಕ್ಕಾಗಿ ಈಗ ಯಾವ ಹಂತಕ್ಕಾದರೂ ಹೋಗಲು ರೆಡಿ ಇದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಆಸೆ ಇದೆ. ಅದು ಸಿಗದೇ ಹೋದರೆ ಐಟಂ ಸಾಂಗ್ ಆದ್ರೂ ಓಕೆ, ನನಗೆ ದುಡ್ಡು ಬೇಕು ಅರ್ಥಾತ್ Finacially strong ಆಗಬೇಕು. ಅದಕ್ಕಾಗಿ ನನಗೆ ಇಷ್ಟವಾದದ್ದನ್ನು ನಾನು ಏನು ಬೇಕಾದರೂ ಮಾಡಲು ಸೈ ಎಂದು ಧೈರ್ಯದಿಂದ ಹೇಳಿದ್ದಾರೆ ನಟಿ.
56
ಎರಡನೆಯ ಮದ್ವೆ ಬಗ್ಗೆ
ಇದಾಗಲೇ ಎರಡನೆಯ ಮದುವೆಯ ಬಗ್ಗೆ ಕೆಲವು ಮಾಧ್ಯಮಗಳ ಮುಂದೆ ನಿವೇದಿತಾ ಗೌಡ ಹೇಳಿಕೊಂಡಿದ್ದು ಇದೆ. ಸದ್ಯ ಮದುವೆ ಎಂದರೆ ಭಯ ಎಂದೆಲ್ಲಾ ಹೇಳಿದ್ದರು. ಆದರೆ ಈಚಿಗಿನ ಒಂದು ಸಂದರ್ಶನದಲ್ಲಿ ನಿವೇದಿತಾ, ಎರಡನೆಯ ಮದುವೆಗೆ ತಾವು ಸಿದ್ಧ ಎಂದು ಹೇಳಿದ್ದಾರೆ. ನನ್ನ ಅಮ್ಮ ನನಗೆ ಯಾವಾಗ ಮದುವೆ ಆಗಬೇಕು ಎನ್ನಿಸುತ್ತದೆ ಆಗ ಆಗು ಎಂದು ಹೇಳಿದ್ದಾರೆ. ಆದ್ದರಿಂದ ಮದುವೆ ಆಗುತ್ತೇನೆ ಎಂದಿದ್ದಾರೆ.
66
ನಿವೇದಿತಾ ಹೇಳಿದ್ದೇನು?
ಇದೇ ವೇಳೆ, ತಮ್ಮನ್ನು ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿರುವ ನಿವ್ವಿ, ನನ್ನನ್ನು ಆತ ತುಂಬಾ ಇಷ್ಟಪಡಬೇಕು. ಅದಕ್ಕಿಂತಲೂ ಹೆಚ್ಚಾಗಿ ನನಗೆ ಆ ಫೀಲಿಂಗ್ ಬರುವಂತೆ ಮಾಡಬೇಕು. ಸದ್ಯ ಭಯ ಇದೆ. ಆ ಭಯವನ್ನು ಹೋಗಲಾಡಿಸುವ ಸಿಕ್ಕರೆ ಆಗುತ್ತೇನೆ. ಅವನು ಫೀಲಿಂಗ್ ಬರಿಸುವುದರ ಜೊತೆಗೆ ನನ್ನನ್ನು ತುಂಬಾ ಇಷ್ಟಪಡುವವನಾಗಿರಬೇಕು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.