Karna Serial: ಫಸ್ಟ್​ ನೈಟ್​ ಹೇಗಾಯ್ತು ಕೇಳಿದ ಅಜ್ಜಿ! ಕರ್ಣ-ನಿಧಿ ಏನಂದ್ರು; ಬೇಕಿತ್ತಾ ನಿಂಗಿದು ಕೇಳಿದ ನೆಟ್ಟಿಗರು

Published : Jun 02, 2026, 08:08 PM IST

ಕರ್ಣ ಸೀರಿಯಲ್​​ನಲ್ಲಿ ಕರ್ಣ ಮತ್ತು ನಿಧಿಯ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನಕ್ಕೆ ಸಂಜಯ್ ಮತ್ತು ಸಾಲಗಾರರಿಂದ ಸಂಕಷ್ಟ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಅಡುಗೆಮನೆಯಲ್ಲಿ ಕರ್ಣ-ನಿಧಿ ಪ್ರಣಯದಲ್ಲಿ ಮುಳುಗಿದ್ದಾಗ, ಅಜ್ಜಿ ಬಂದು ಮೊದಲ ರಾತ್ರಿಯ ಬಗ್ಗೆ ಪ್ರಶ್ನಿಸಿ ಮುಜುಗರಕ್ಕೀಡುಮಾಡುತ್ತಾಳೆ.

PREV
16
ಕರ್ಣ-ನಿಧಿ ಮದುವೆ

ಕರ್ಣ ಸೀರಿಯಲ್​​ನಲ್ಲಿ (Karna Serial)ನಲ್ಲಿ ಕೊನೆಗೂ ಕರ್ಣ ಮತ್ತು ನಿಧಿಯ ಮದುವೆಯಾಗಿದೆ. ಇವರ ಮೊದಲ ರಾತ್ರಿಯ ದಿನವೇ ಸಂಜಯ್​ ಬಂದು ಇನ್ನಿಲ್ಲದ ರೀತಿಯಲ್ಲಿ ಗಲಾಟೆ ಮಾಡಿದ್ದಾನೆ.

26
ಕರ್ಣನಿಗೆ ಸವಾಲು

ಅದೇ ಇನ್ನೊಂದೆಡೆ, ಕರ್ಣನಿಗೆ ಸಾಲಗಾರರ ಕಾಟ ಶುರುವಾಗಿದೆ. ಅತ್ತ ಅನಾಮಿಕ ಮಹಿಳೆಯೊಬ್ಬಳು ಕರ್ಣನ ಮನೆಯವರನ್ನು ಬರ್ಬಾದ್​ ಮಾಡಲು ಹೊಂಚು ಹಾಕುತ್ತಿದ್ದಾಳೆ. ಅತ್ತ ಮನೆಯಿಂದ ಹೊರಕ್ಕೆ ಹಾಕಿರುವ ರಮೇಶ್​ ಕರ್ಣನಿಗೆ ಮುಂದೇನು ಮಾಡುತ್ತಾನೋ ಎನ್ನುವ ಭಯ ಕೂಡ ಇದೆ. 

36
ಕರ್ಣ ಮತ್ತು ನಿಧಿಯ ರೊಮಾನ್ಸ್​

ಇವೆಲ್ಲಾ ಸಮಸ್ಯೆಗಳನ್ನು ಕರ್ಣ ಯಾವ ರೀತಿ ನಿಭಾಯಿಸುತ್ತಾನೆ ಎನ್ನುವುದು ಸದ್ಯಕ್ಕೆ ಇರುವ ಕುತೂಹಲ. ಇದರ ನಡುವೆಯೇ ಕರ್ಣ ಮತ್ತು ನಿಧಿಯ ರೊಮಾನ್ಸ್​ ಶುರುವಾಗಿದೆ.

46
ಅಜ್ಜಿ ಬಂದು ಡಿಸ್ಟರ್ಬ್​

ಅಡುಗೆ ಮನೆಯಲ್ಲಿ ನಿಧಿ ಕೆಲಸ ಮಾಡುತ್ತಿರುವ ವೇಳೆ, ಕರ್ಣ ಬಂದು ಆಕೆಯ ಜೊತೆ ರೊಮಾನ್ಸ್​ ಮಾಡುತ್ತಿರುತ್ತಾನೆ. ಆಗ ಅಲ್ಲಿಗೆ ಅಜ್ಜಿ ಬಂದು ಡಿಸ್ಟರ್ಬ್​ ಮಾಡುತ್ತಾಳೆ.

56
ಫಸ್ಟ್​ ನೈಟ್​ ಹೇಗಾಯ್ತು?

ಕರ್ಣ ಏನೋ ಒಂದು ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡಿದ್ರೂ ಅಜ್ಜಿ ಬಿಡುವುದಿಲ್ಲ. ಕೊನೆಗೆ ಫಸ್ಟ್​ ನೈಟ್​ ಹೇಗಾಯ್ತು ಕೇಳ್ತಾಳೆ. ಅಜ್ಜಿಯ ಬಾಯಲ್ಲಿ ಈ ಮಾತು ಕೇಳಿ ಕರ್ಣ ಮತ್ತು ನಿಧಿ ಸುಸ್ತಾಗಿ ಹೋಗ್ತಾರೆ.

66
ಇದೆಲ್ಲಾ ಬೇಕಿತ್ತಾ

ಅಯ್ಯಯ್ಯೋ ಅಜ್ಜಿ ನಿಂಗೆ ಇದೆಲ್ಲಾ ಬೇಕಿತ್ತಾ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ. ಕರ್ಣ ಮತ್ತು ನಿಧಿಯ ಮುದ್ದಾಟಕ್ಕೆ ಖುಷಿಯಾಗಿರೋ ವೀಕ್ಷಕರು, ಅಜ್ಜಿಯ ಮಾತಿನಿಂದ ಸುಸ್ತಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories