Nan Magle Superstar Movie Ritu Singh: ಹನಿ ಫಿಲಂಸ್ ಲಾಂಛನದಲ್ಲಿ ಎನ್ ಎ ಶಿವಕುಮಾರ್(ಕುಮಾರ್ ನೊಣವಿನಕೆರೆ) ನಿರ್ಮಿಸಿರುವ, ಆಯುರ್ ನಿರ್ದೇಶಿಸಿರುವ ಸಿನಿಮಾವೇ ‘ನನ್ ಮಗಳೇ ಸೂಪರ್‌ಸ್ಟಾರ್’. ಈ ಸಿನಿಮಾದಲ್ಲಿ ‘ಸೀತಾರಾಮ’ ಧಾರಾವಾಹಿ ಸಿಹಿ ಪಾತ್ರಧಾರಿ ನಟಿಸುತ್ತಿದ್ದಾರೆ.
‘ಸೀತಾರಾಮ’ ಸೀರಿಯಲ್ ಬಾಲನಟಿ ಬೇಬಿ ರೀತು ಸಿಂಗ್ ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು ‘ಭಜರಂಗಿ 2’ ಸಿನಿಮಾ ಖ್ಯಾತಿಯ ಚೆಲುವರಾಜ್, ಸಂಭ್ರಮಶ್ರೀ ನಾಯಕ - ನಾಯಕಿಯಾಗಿ ಅಭಿನಯಿಸಿರುವ ‘ನನ್ನ ಮಗಳೇ ಸೂಪರ್ ಸ್ಟಾರ್’ ಸಿನಿಮಾ ಟೀಸರ್, ಹಾಡುಗಳ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು.
24
ಟೀಸರ್, ಹಾಡು ರಿಲೀಸ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲ, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಟೀಸರ್ ಅನಾವರಣ ಮಾಡಿದರು. ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್, ಸಾಹಿತಿ ಬಿ.ಆರ್ ಲಕ್ಷ್ಮಣರಾವ್, ಪರಿಸರ ಪ್ರೇಮಿ ರೇವತಿ ಕಾಮತ್ ಹಾಡುಗಳನ್ನು ಬಿಡುಗಡೆಗೊಳಿಸಿದರು. ಹಾಡುಗಳು ಸಿರಿ ಮ್ಯೂಸಿಕ್‌ನಲ್ಲಿ ಲಭ್ಯವಿದೆ. ಟೀಸರ್, ಹಾಡುಗಳನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
34
ನಿರ್ದೇಶಕನಾಗಿ ಮೊದಲ ಸಿನಿಮಾವಿದು!
ನಿರ್ದೇಶಕ ಆಯುರ್ ಮಾತನಾಡಿ, ನಾನು ಮೂಲತಃ ಸಂಕಲನಕಾರ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಾನೇ ಬರೆದಿದ್ದೇನೆ. ಅಪ್ಪ - ಅಮ್ಮನಿಗೆ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕೆಂಬ ಕನಸು. ಜೊತೆಗೆ ತಾವು ಅಂದುಕೊಂಡಂತೆ ಅವರು ಇರಬೇಕು ಎಂಬ ಆಸೆ. ಅದರಲ್ಲೂ ಈ ಸ್ವಭಾವ ತಾಯಿಗೆ ಸ್ವಲ್ಪ ಹೆಚ್ಚು. ಆದರೆ ಮಕ್ಕಳಿಗೂ ಅವರದೇ ಆಸೆ ಇರುತ್ತದೆ. ನಿಮ್ಮ ಆಸೆಯನ್ನು ಅವರ ಮೇಲೆ ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅದರಿಂದ ಮಕ್ಕಳು ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬ ಅಂಶವೇ ಈ ಚಿತ್ರದ ಕಥಾಹಂದರ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಬಿ.ಆರ್.ಲಕ್ಷ್ಮಣರಾವ್ ಅವರೆ ಮೂರು ಹಾಡುಗಳನ್ನು ಬರೆದಿದ್ದಾರೆ. ಕೆವಿನ್ ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.
ನಟ ಚಲುವರಾಜ್ ಮಾತನಾಡಿ, 15 ವರ್ಷಗಳ ಹಿಂದೆ ನಾನು "ಮಹಾಭಾರತ" ಧಾರಾವಾಹಿಯಲ್ಲಿ ದುರ್ಯೋಧನನ ಪಾತ್ರ ಮಾಡಿದ್ದೆ. ಆಗ ನನಗೆ ಮೇಕಪ್ ಮಾಡಿದ್ದೆ ಕುಮಾರ್ ಅವರು. ಈವರೆಗೂ ವಿಲನ್ ಪಾತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ ಹಾಗೂ ಈವರೆಗೂ ಮಾಡಿರದ ಪಾತ್ರ ಮಾಡಿದ್ದೇನೆ ಎಂದರು.
ನಿರ್ದೇಶಕರು ಹೇಳಿದ ಹಾಗೆ ಪೋಷಕರು ಹಾಗೂ ಮಕ್ಕಳು ನೋಡಲೇ ಬೇಕಾದ ಚಿತ್ರವಿದು. ನಾನು ಈ ಚಿತ್ರದ ನಾಯಕಿ. ಬೇಬಿ ರೀತುಸಿಂಗ್ ತಾಯಿಯಾಗಿ ಅಭಿನಯಿಸಿದ್ದೇನೆ ಎಂದು ನಟಿ ಸಂಭ್ರಮಶ್ರೀ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.