Bigg Boss ಸ್ಪಂದನಾ ಸೋಮಣ್ಣ ಹೊಟ್ಟೆಯಲ್ಲಿ ಮಗು? ದೊಡ್ಮನೆಯಲ್ಲಿ ಇದೇನಿದು ಧನುಷ್​ ಗಲಾಟೆ?

Published : Dec 19, 2025, 07:19 PM IST

ಬಿಗ್‌ಬಾಸ್ ಮನೆಯಲ್ಲಿ ಧನುಷ್, ಸ್ಪಂದನಾ ಸೋಮಣ್ಣ ಅವರ 'ಕರಿಮಣಿ' ಸೀರಿಯಲ್ ಪಾತ್ರವನ್ನು ತಮಾಷೆ ಮಾಡಿದ್ದಾರೆ. ಸೀರಿಯಲ್‌ನಲ್ಲಿ ಗರ್ಭಿಣಿಯಾಗಿದ್ದಾಗ ಫೈಟಿಂಗ್ ಮಾಡಿದ ದೃಶ್ಯವನ್ನು ಧನುಷ್ ನಟಿಸಿ ತೋರಿಸಿದ್ದು, ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದೆ. 

PREV
17
ಟಾಸ್ಕ್​ ಭರಾಟೆ

ಬಿಗ್​ಬಾಸ್​ (Bigg Boss) ವೀಕ್ಷಕರಿಗೆ ಕೆಲವೊಂದು ದೃಶ್ಯಗಳನ್ನು ಮಾತ್ರ ತೋರಿಸುತ್ತಿದ್ದರೆ, ದಿನದ 24 ಗಂಟೆಗಳು ನಡೆಯುವ ಕೆಲವೊಂದು ತುಣುಕುಗಳನ್ನು ವಾಹಿನಿ ಕಡೆಯಿಂದ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗುತ್ತದೆ. ಇನ್ನೇನು ಬಿಗ್​ಬಾಸ್​ ಮುಗಿಯಲು ಒಂದೇ ತಿಂಗಳು ಬಾಕಿ ಇರುವ ನಡುವೆಯೇ, ಟಾಸ್ಕ್​ ಭರಾಟೆಯೂ ಜೋರಾಗಿಯೇ ನಡೆಯುತ್ತಿದೆ.

27
ಹಾಸ್ಯದ ಪ್ರಸಂಗ

ಇಂಥ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಕ್ಕೆ ಹೋಗಲು ಇಷ್ಟಪಡುವುದಿಲ್ಲವಾದ್ದರಿಂದ, ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗ ಜಗಳ, ಕಿತ್ತಾಟ ಎಲ್ಲವೂ ಸರ್ವೇ ಸಾಮಾನ್ಯ. ಇದರ ಹೊರತಾಗಿಯೂ ಅಲ್ಲಿ ಹಾಸ್ಯದ ಪ್ರಸಂಗಗಳು ನಡೆಯುತ್ತಿರುತ್ತವೆ.

37
ಸ್ಪಂದನಾ ಹೊಟ್ಟೆಯಲ್ಲಿ ಮಗು

ಇದೀಗ ಅಂಥದ್ದೇ ಒಂದು ಹಾಸ್ಯದ ತುಣುಕು ಜಿಯೋಸ್ಟಾರ್​ನಲ್ಲಿ ಶೇರ್​ ಮಾಡಲಾಗಿದೆ. ಇಲ್ಲಿ ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರ ಹೊಟ್ಟೆಯಲ್ಲಿ ಮಗು ಇರುವ ಬಗ್ಗೆ ಚರ್ಚೆ ಮಾಡಲಾಗಿದೆ.

47
ಕರಿಮಣಿ ಸೀರಿಯಲ್​

ಅಷ್ಟಕ್ಕೂ ಇದು ಕರಿಮಣಿ ಸೀರಿಯಲ್​ (Karimani Serial) ಸ್ಟೋರಿ. ಇದರಲ್ಲಿ ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ ನಟಿಸಿದ್ದರು. ತಾಯಿಯಿಲ್ಲದೆ ಬೆಳದಿರುವ ಹುಡುಗಿಯ ಪಾತ್ರ ಈಕೆಯದ್ದು. ಅವಳು ಶ್ರೀಮಂತ ಕುಟುಂಬದ ಕರ್ಣನನ್ನು ಮದುವೆಯಾಗುತ್ತದೆ. ಆ ಬಳಿಕ ನಡೆಯುವ ಕಥಾಹಂದರವನ್ನು ಈ ಸೀರಿಯಲ್​ ಹೊಂದಿತ್ತು.

57
ಧನುಷ್​ ತಮಾಷೆ

ಆ ಸಮಯದಲ್ಲಿ ಸ್ಪಂದನಾ ಸೋಮಣ್ಣ ಅರ್ಥಾತ್​ ಸಾಹಿತ್ಯ ಗರ್ಭಿಣಿಯಾಗುತ್ತಾಳೆ. ಆಕೆ ಗರ್ಭಿಣಿಯಾಗಿದ್ದಾಗಲೇ ಫೈಟಿಂಗ್​ ಮಾಡುವ ದೃಶ್ಯವಿದೆ. ಇದನ್ನೇ ಈಗ ಧನುಷ್​ ಅವರು ತಮಾಷೆಯಾಗಿ ಆ್ಯಕ್ಟ್​ ಮಾಡಿ ತೋರಿಸಿದ್ದಾರೆ. ಹೊಟ್ಟೆಯನ್ನು ಹಿಡಿದುಕೊಂಡು ನನ್ನ ಮಗುವಿಗೆ ಏನೂ ಆಗಿಲ್ಲ ತಾನೆ ಎಂದು ಡಾಕ್ಟರ್​ ಮುಂದೆ ಸಾಹಿತ್ಯ ಗೋಳಾಡಿದ ಪರಿಯನ್ನು ಅವರು ತೋರಿಸಿದ್ದಾರೆ.

67
ಏನ್​ ಬಿಲ್ಡಪ್​

ಹೊಟ್ಟೆ ಹಿಡಿದುಕೊಂಡು ಫೈಟ್​ ಮಾಡಿದ್ದೇನು ಎಂದು ಧನುಷ್​ ಸ್ಪಂದನಾಗೆ ತಮಾಷೆ ಮಾಡಿದ್ದಾರೆ. ಅಲ್ಲಿ ಒಂದು ಸ್ವಲ್ಪ ಟಚ್​ ಮಾಡಿದ್ದು ಅಷ್ಟೇ, ಏನು ಬಿಲ್ಡ್​ಅಪ್​ ತೆಗೆದುಕೊಂಡ್ರಪ್ಪಾ ಎಂದಿದ್ದಾರೆ. ಚೈತ್ರಾ ಕುಂದಾಪುರ (Chaitra Kundapura) ಕೂಡ ಈ ಸೀರಿಯಲ್​ನಲ್ಲಿ ಸಕತ್​ ಆ್ಯಕ್ಟಿಂಗ್ ಇತ್ತು ಎಂದಿದ್ದಾರೆ.

77
ಸ್ಪಂದನಾ ಆ್ಯಕ್ಟಿಂಗ್​

ಕೊನೆಗೆ ಸ್ಪಂದನಾ ಕೂಡ ಹೊಟ್ಟೆ ಹಿಡಿದುಕೊಂಡು ತಮ್ಮದೇ ಆ್ಯಕ್ಟಿಂಗ್​ ಮಾಡಿದ್ದಾರೆ. ಇದನ್ನು ನೋಡಿ ಕಾವ್ಯಾ ಶೈವ ಸೇರಿದಂತೆ ಎಲ್ಲರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories