ಅಪ್ಪನಿಗೆ ಗೌರವದ ಜೀವನ ನಡೆಸಲು ಅವಕಾಶಕ್ಕೆ ಚೈತ್ರಾಗೆ ಆದೇಶ
ಉಡುಪಿ (ಡಿ.19): ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ಚೈತ್ರಾ ಕುಂದಾಪುರ ಅವರಿಗೆ ಉಡುಪಿಯ ಹಿರಿಯ ನಾಗರಿಕರ ನ್ಯಾಯಾಲಯದಿಂದ ಭಾರಿ ಹಿನ್ನಡೆಯಾಗಿದೆ. ಸ್ವಂತ ತಂದೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡದಂತೆ ಹಾಗೂ ಅವರಿಗೆ ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅವಕಾಶ ಮಾಡಿಕೊಡುವಂತೆ ಉಡುಪಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶಿಸಿದೆ.
26
ತಂದೆಯ ಆಕ್ರೋಶ ಮತ್ತು ದೂರು
ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ತಮ್ಮ ಪತ್ನಿ ಹಾಗೂ ಮಗಳು ಚೈತ್ರಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. 'ನನ್ನ ಮಗಳು ಮತ್ತು ಪತ್ನಿ ನನಗೆ ಸರಿಯಾಗಿ ಊಟ-ಉಪಹಾರ ನೀಡದೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಮನೆಯಲ್ಲಿ ನಡೆಯುವ ಕೆಲವು ಅವ್ಯವಹಾರಗಳನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನೇ ಮನೆಯಿಂದ ಹೊರಹಾಕಿದ್ದಾರೆ. ನನ್ನ ಸ್ವಂತ ಮನೆಯಲ್ಲೇ ನಾನು ಪರಕೀಯನಾಗಿದ್ದೇನೆ' ಎಂದು ಬಾಲಕೃಷ್ಣ ನಾಯ್ಕ್ ಗಂಭೀರ ಆರೋಪ ಮಾಡಿದ್ದರು. ಸದ್ಯ ಅವರು ಕಿರುಕುಳ ತಾಳಲಾರದೆ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದರು.
36
ನ್ಯಾಯಾಲಯದ ಆದೇಶವೇನು?
ಬಾಲಕೃಷ್ಣ ನಾಯ್ಕ್ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, 'ಕರ್ನಾಟಕ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ನಿಯಮಗಳು' ಅಡಿಯಲ್ಲಿ ರಕ್ಷಣೆ ನೀಡಿದೆ. ಚೈತ್ರಾ ಕುಂದಾಪುರ ಹಾಗೂ ಅವರ ತಾಯಿ, ಬಾಲಕೃಷ್ಣ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಮತ್ತು ಮನೆಯಲ್ಲಿ ಅವರು ಗೌರವಯುತವಾಗಿ ವಾಸಿಸಲು ಅನುವು ಮಾಡಿಕೊಡಬೇಕು ಎಂದು ಆದೇಶಿಸಿದೆ. ಅಲ್ಲದೆ, ಈ ಬಗ್ಗೆ ಪ್ರತಿವಾದಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳುವಂತೆ ಕುಂದಾಪುರ ಪೊಲೀಸರಿಗೆ ಸೂಚನೆ ನೀಡಿದೆ.
ಚೈತ್ರಾ ಕುಂದಾಪುರ ಮತ್ತು ಅವರ ತಂದೆಯ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಚೈತ್ರಾ ಮದುವೆಯ ವಿಚಾರದಲ್ಲಿ ತಂದೆ ಆಕ್ಷೇಪ ಎತ್ತಿದ್ದರು. ಇತ್ತ ಚೈತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ 'ನಾನು ಸಿಂಗಲ್ ಪೇರೆಂಟ್ (ತಾಯಿ) ಆಸರೆಯಲ್ಲಿ ಬೆಳೆದವಳು, ತಂದೆ ಜವಾಬ್ದಾರಿಯಿಲ್ಲದ ವ್ಯಕ್ತಿ' ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಆದರೆ ತಂದೆ ಬಾಲಕೃಷ್ಣ ಅವರು, 'ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಪೋಷಿಸಿದ್ದು ನಾನು, ಈಗ ಆಸ್ತಿಗಾಗಿ ನನ್ನನ್ನೇ ಹಿಂಸಿಸುತ್ತಿದ್ದಾರೆ' ಎಂದು ಕಣ್ಣೀರಿಟ್ಟಿದ್ದಾರೆ.
56
ಗೋವಿಂದ ಬಾಬು ಪೂಜಾರಿಗೆ ವಂಚನೆ
ಬಿಗ್ ಬಾಸ್ ಮನೆಯಲ್ಲಿ ತಾನು ಕಷ್ಟಪಟ್ಟು ಬಂದವಳು ಎಂದು ಹೇಳಿಕೊಳ್ಳುತ್ತಿರುವ ಚೈತ್ರಾ ಅವರಿಗೆ, ಹೊರಗಿನ ಜಗತ್ತಿನಲ್ಲಿ ತಂದೆಯವರ ಈ ಕಾನೂನು ಹೋರಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವ ಚೈತ್ರಾ ಕುಂದಾಪುರ, ಈ ಹಿಂದೆ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಬಿಜೆಪಿಯಿಂದ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ ಎದುರಿಸುತ್ತಿದ್ದಾರೆ.
66
ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ವಾಪಸ್ ಸಾಧ್ಯತೆ
ಜೊತೆಗೆ ಬಿಗ್ ಬಾಸ್ ಸೀಸನ್ 11 ಮುಗಿದ ನಂತರ ಮದುವೆಯಾಗಿ ಸುಖೀ ಸಂಸಾರ ನಡೆಸುತ್ತಿದ್ದಾರೆ. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗಿ ಗದ್ದಲ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಹಿರಿಯ ನಾಗರಿಕರ ನ್ಯಾಯಾಲಯದ ತೀರ್ಪು ಬಂದಿದ್ದು, ದಿಢೀರನೇ ಹೊರಗೆ ಬರುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.