ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪವರ್ ಕಾರ್ಡ್ ವಿಚಾರವಾಗಿ ಶುರುವಾದ ಜಗಳ ಏಕವಚನದ ಪದಗಳ ಬಳಕೆಗೆ ತಿರುಗಿ, ಇಬ್ಬರ ಕಾಳಗಕ್ಕೆ ಉಳಿದ ಸ್ಪರ್ಧಿಗಳು ಮೂಕ ಪ್ರೇಕ್ಷಕರಾಗಿದ್ದಾರೆ.
ಬಿಗ್‌ಬಾಸ್ ಮನೆ ಅಂದ್ರೆ ಜಗಳ ಎಂಬಂತಾಗಿದೆ. ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ಜೋರು ಗಲಾಟೆಯಾಗಿದ್ದು, ಇಬ್ಬರ ಕಾಳಗಕ್ಕೆ ಬಿಗ್‌ಬಾಸ್ ಬೆಚ್ಚಿದ ಇನ್ನುಳಿದ ಸ್ಪರ್ಧಿಗಳು ಗಪ್‌ಚುಪ್ ಆಗಿದ್ದಾರೆ. ದೂರದಿಂದಲೇ ಇಬ್ಬರ ಜಗಳ ನೋಡಿದ್ದಾರೆ. ಯಾವಳೇ ಅವಳು, ಏಯ್, ಗೆಟ್ ಲಾಸ್ಟ್ ಎಂಬ ಪದಗಗಳು ಬಳಕೆಯಾಗಿವೆ.
25
ಅಶ್ವಿನಿ ಗೌಡ ಮತ್ತು ಕಾವ್ಯಾ
ಅಶ್ವಿನಿ ಗೌಡ ಮತ್ತು ಕಾವ್ಯಾ ನಡುವೆ ಮಾತುಕತೆ ನಡೆಯತ್ತಿರುತ್ತದೆ. ನಮಗಿಬ್ಬರಿಗೂ ಮಾತನಾಡಿಕೊಳ್ಳಲು ವೇದಿಕೆ ಸಿಕ್ಕಿತ್ತು. ಚರ್ಚೆ ನಾನು ಸರಿ, ನೀನು ತಪ್ಪು ಅನ್ನೋದು ಅಲ್ಲ. ಆದರೆ ಆ ವೇದಿಕೆಯನ್ನು ನಾವಿಬ್ಬರು ಬಳಸಿಕೊಳ್ಳಲಿಲ್ಲವಾ ಎಂದು ಕಾವ್ಯಾಗೆ ಅಶ್ವಿನಿ ಗೌಡ ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಕಾವ್ಯಾ, ನನಗೆ ನಿಮ್ಮ ಅವಶ್ಯಕತೆ ಇರಲಿಲ್ಲ ಅಂತಾರೆ. ಇದಕ್ಕೆ ಪ್ರತಿಯಾಗಿ ನನಗೂ ಅಗತ್ಯ ಇರಲಿಲ್ಲ ಅಂತ ಅಶ್ವಿನಿ ಗೌಡ ಹೇಳ್ತಾರೆ.
35
ಪವರ್ ಕಾರ್ಡ್
ಬರೀ ಅಶ್ವಿನಿ ಗೌಡ ಎಂಬ ಹೆಸರು ಹೇಳಿ ಪವರ್ ಕಾರ್ಡ್ ಯೂಸ್ ಮಾಡ್ತಿದ್ದೀಯಾ ಅಷ್ಟೇ. ಆಟದಲ್ಲಿ ಆಡೋ ಯೋಗ್ಯತೆ ನಿನಗಿಲ್ಲ, ಬಾ ನೋಡೋಣ ಕಣಕ್ಕೆ ಇಳಿ ಎಂದು ಏಕವಚನದಲ್ಲಿಯೇ ಕ್ಯಾವಾ ಅವ್ರಿಗೆ ಅಶ್ವಿನಿ ಗೌಡ ಚಾಲೆಂಜ್ ಹಾಕುತ್ತಾರೆ. ಇಲ್ಲಿಂದ ಇಬ್ಬರ ಕಿತ್ತಾಟ ಏಕವಚನಕ್ಕೆ ತಿರುವು ಪಡೆದುಕೊಳ್ಳುತ್ತದೆ. ತಮ್ಮನ್ನು ಏಕವಚನದಿಂದ ಮಾತನಾಡಿಸಿದ್ದಕ್ಕೆ ಅಶ್ವಿನಿ ಗೌಡ ಕೋಪಗೊಳ್ಳುತ್ತಾರೆ.
ಇಬ್ಬರು ಮಹಿಳಾಮಣಿಗಳ ನಡುವೆ ರಣರೋಚಕ ಕದನ ನಡೆಯುತ್ತಿದ್ರೂ ಯಾವ ಸ್ಪರ್ಧಿಯೂ ಇಬ್ಬರ ಮಧ್ಯೆ ಹೋಗುವ ಪ್ರಯತ್ನವನ್ನು ಮಾಡಿಲ್ಲ. ಸದಾ ಕಾವ್ಯಾ ಜೊತೆಯಲ್ಲಿರುತ್ತಿದ್ದ ಗಿಲ್ಲಿ ನಟ ಸುಮ್ಮನೇ ಕುಳಿತಿರೋದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ. ಈ ಪ್ರೋಮೋಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಬಿಗ್‌ಬಾಸ್ ಮನೆ ಕಾಲೇಜು ಆಗಿ ಬದಲಾಗಿದೆ. ಸ್ಪರ್ಧಿಗಳನ್ನು ಕೆಂಪು ಮತ್ತು ನೀಲಿ ಎಂದು ಎರಡು ಗುಂಪುಳನ್ನಾಗಿ ಮಾಡಲಾಗಿದೆ. ನೀಡಲಾಗಿದ್ದ ಎರಡು ಟಾಸ್ಕ್‌ಗಳನ್ನು ನೀಲಿ ತಂಡ ಗೆದ್ದುಕೊಂಡಿದೆ. ಸೋತ ಕೆಂಪು ತಂಡದ ಧ್ರುವಂತ್ ಮತ್ತು ಚಂದ್ರಪ್ರಭಾ ಕ್ಯಾಪ್ಟನ್ಸಿ ಓಟದಿಂದ ಹೊರಗುಳಿದಿದ್ದಾರೆ.