Bigg Boss Kannada 12: ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಜನಪ್ರಿಯತೆ ಗಳಿಸುತ್ತಿದ್ದು, ಅವರನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ. ರಕ್ಷಿತಾ ಕನ್ನಡ ಬರದಂತೆ ನಾಟಕವಾಡುತ್ತಿದ್ದಾರೆ ಎಂದು ಸಹ ಸ್ಪರ್ಧಿ ಆರೋಪಿಸಿದ್ದು, ವೀಕೆಂಡ್ ಸಂಚಿಕೆಯಲ್ಲಿ ಇದನ್ನು ಬಯಲು ಮಾಡುವುದಾಗಿ ಹೇಳಿದ್ದಾರೆ.
ದಿನದಿಂದ ದಿನಕ್ಕೆ ರಕ್ಷಿತಾ ಶೆಟ್ಟಿ ನೋಡುಗರಿಗೆ ಇಷ್ಟವಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಪದೇ ಪದೇ ಟಾರ್ಗೆಟ್ ಆಗ್ತಾರೆ ಅನ್ನೋದು ವೀಕ್ಷಕರ ಕಮೆಂಟ್‌ಗಳಿಂದ ಗೊತ್ತಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ನಾಟಕ ಮಾಡುತ್ತಿದ್ದು, ಈ ಬಾರಿಯ ವೀಕೆಂಡ್ ಸಂಚಿಕೆಯಲ್ಲಿ ಅದನ್ನು ಬಯಲು ಮಾಡುವೆ ಎಂದು ಹೇಳಿದ್ದಾರೆ.
25
ರಕ್ಷಿತಾ ಶೆಟ್ಟಿ ಮತ್ತು ಕನ್ನಡ
ತುಳು ನಾಡಿನ ನಿವಾಸಿಯಾಗಿರುವ ರಕ್ಷಿತಾ ಶೆಟ್ಟಿ ಮುಂಬೈನಲ್ಲಿಯೇ ಹುಟ್ಟಿ ಬೆಳೆದಿರುವ ಹುಡುಗಿ. ಹಾಗಾಗಿ ಕನ್ನಡ ಮಾತನಾಡುವ ಕೆಲವೊಮ್ಮೆ ಪದಗಳು ತೋಚದೇ ಬ್ಲಾಂಕ್ ಆಗುತ್ತಾರೆ. ಬಿಗ್‌ಬಾಸ್ ಮನೆಗೆ ಬರುವ ಮುನ್ನವೂ ಕನ್ನಡ ಕಲಿಯುವ ಬಯಕೆಯಿಂದ ಇಲ್ಲಿಗೆ ಬರುತ್ತಿರೋದಾಗಿ ರಕ್ಷಿತಾ ಹೇಳಿಕೊಂಡಿದ್ದರು. ಆದ್ರೆ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಬರುತ್ತೆ. ಸುದೀಪ್ ಸರ್ ಮುಂದೆ ನಾಟಕ ಮಾಡ್ತಾರೆ ಅಂತ ಸ್ಪರ್ಧಿ ರಿಷಾ ಗೌಡ ಹೇಳುತ್ತಾರೆ.
35
ಆಟದಲ್ಲಿ ಗೆದ್ದಿರುವ ರಕ್ಷಿತಾ ಶೆಟ್ಟಿ
ಸದ್ಯ ಬಿಗ್‌ಬಾಸ್ ಮನೆ ಕಾಲೇಜು ಆಗಿ ಬದಲಾಗಿದ್ದು, ಸ್ಪರ್ಧಿಗಳೆಲ್ಲರೂ ವಿದ್ಯಾರ್ಥಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಟಾಸ್ಕ್‌ನಲ್ಲಿ ತಮ್ಮ ಎದುರಾಳಿ ಬಿಗ್‌ಬಾಸ್ ಮನೆಯಲ್ಲಿರಲು ಯಾಕೆ ಅರ್ಹತೆ ಹೊಂದಿಲ್ಲ ಎಂದು ಹೇಳಬೇಕಿತ್ತು. ಈ ಆಟ ರಕ್ಷಿತಾ ಮತ್ತು ರಿಷಾ ಗೌಡ ಮಧ್ಯೆ ನಡೆದಿತ್ತು. ರಕ್ಷಿತಾ ತಮ್ಮನ್ನು ಪ್ರಬಲವಾಗಿ ಸಮರ್ಥಿಸಿಕೊಂಡು ಆಟದಲ್ಲಿ ಗೆದ್ದಿದ್ದರು. ಈ ಆಟದಲ್ಲಿ ಸೋತ ರಿಷಾ ಗೌಡ, ರಕ್ಷಿತಾ ಮುಖವಾಡ ಕಳಚುವೆ ಅಂತ ಹೇಳಿದ್ದಾರೆ.
ವೀಕೆಂಡ್ ಬಂದ್ರೆ ಕನ್ನಡ ಬರದಂತೆ ರಕ್ಷಿತಾ ನಾಟಕ ಮಾಡ್ತಾರೆ. ಪದೇ ಪದೇ ಲೈಕ್, ಅದೇ ಇದೇ ಅಂತ ನಾಟಕ ಮಾಡ್ತಾರೆ. ಈಗ ಮಾತನಾಡಿದ್ದನ್ನು ನೋಡಿದ್ರೆ ರಕ್ಷಿತಾಗೆ ಚೆನ್ನಾಗಿ ಕನ್ನಡ ಬರುತ್ತದೆ. ಸುದೀಪ್ ಸರ್ ಬಂದಾಗ ಅವರು ಬೈದರೂ ಪರವಾಗಿಲ್ಲ. ಈ ವಿಷಯದ ಬಗ್ಗೆ ಮಾತನಾಡುತ್ತೇನೆ ಎಂದು ರಿಷಾ ಗೌಡ ಹೇಳಿದ್ದಾರೆ. ಈ ಹಿಂದೆಯೂ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಬರುತ್ತಾ? ಎಂಬುದರ ಬಗ್ಗೆ ಸ್ಪರ್ಧಿಗಳ ನಡುವೆ ಚರ್ಚೆ ನಡೆದಿತ್ತು.
ಮೊದಲ ವಾರ ಕರುನಾಡಿನ ಜನತೆಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ಮೂರನೇ ವಾರ ಕಿಚ್ಚನ ಚಪ್ಪಾಳೆಯನ್ನು ಗಿಲ್ಲಿ ನಟ ಪಡೆದುಕೊಂಡಿದ್ದರು. ನಾಲ್ಕನೇ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ಒಂದೇ ವೇಗದಲ್ಲಿ ತನ್ನದೇ ಆದ ತಂತ್ರಗಾರಿಕೆಯಿಂದ ಆಟ ಆಡುತ್ತಿರುವ ರಕ್ಷಿತಾ ಶೆಟ್ಟಿಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ವೀಕ್ಷಕರು ಬಯಸುತ್ತಿದ್ದಾರೆ. ಈ ಹಿಂದೆ ಅಶ್ವಿನಿ ಗೌಡ ಮತ್ತು ಜಾನ್ವಿ ತಪ್ಪಾದ ಸಂದೇಶ ರವಾನಿಸಿ ರಕ್ಷಿತಾ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.