Bigg Boss Kannada 12 Update: ಅಡುಗೆ ವಿಚಾರದಲ್ಲಿ ಸಹ-ಸ್ಪರ್ಧಿಗಳೊಂದಿಗೆ ಜಗಳವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ವೀಕ್ಷಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೆಲವರು ಆಕೆಯ ಆಟವನ್ನು ಮೆಚ್ಚಿದರೆ, ಇನ್ನು ಕೆಲವರು ಇದನ್ನು ಸಿಂಪಥಿ ಗಿಮಿಕ್ ಎಂದು ಟೀಕಿಸುತ್ತಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳ ಬಗ್ಗೆ ವೀಕ್ಷಕರಿಗೂ ಒಂದು ಜಡ್ಜ್‌ಮೆಂಟ್ ಸಿಗುತ್ತಿದೆ. ತಮ್ಮ ನೆಚ್ಚಿನ ಸ್ಪರ್ಧಿ ಯಾರು ಅನ್ನೋ ತೀರ್ಮಾನಕ್ಕೆ ವೀಕ್ಷಕರು ಬಂದಂತೆ ಕಾಣಿಸುತ್ತಿದೆ. ತಮ್ಮ ವ್ಲಾಗ್‌ಗಳಿಂದಲೇ ಫೇಮಸ್ ಆಗಿದ್ದ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ತಮ್ಮದೇ ವಿಭಿನ್ನ ಆಟದಿಂದ ರಕ್ಷಿತಾ ಶೆಟ್ಟಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
25
ರಾಶಿಕಾ ಜೊತೆ ರಕ್ಷಿತಾಗೆ ಜಗಳ
ಅಡುಗೆ ಮತ್ತು ಪಾತ್ರೆ ತೊಳೆಯುವ ವಿಚಾರಲ್ಲಿ ರಾಶಿಕಾ ಜೊತೆ ರಕ್ಷಿತಾಗೆ ಜಗಳ ನಡೆದಿತ್ತು. ನನಗೆ ಕೈ ನೋವು ಆಗ್ತಿದೆ. ನನ್ನಿಂದ ಅಡುಗೆ ಮಾಡಲು ಸಾಧ್ಯವಿಲ್ಲ ಎಂದು ಹಿಂದೆ ಸರಿದಿದ್ದರು. ಮನೆಯ ಕ್ಯಾಪ್ಟನ್ ಮುಂದೆ ಹೋದ ರಕ್ಷಿತಾ ಶೆಟ್ಟಿ, ನಾನು ಸಹ ಅಡುಗೆ ಮಾಡಲ್ಲ ಎಂದಿದ್ದರು. ಇದೇ ವಿಷಯವಾಗಿ ರಾಶಿಕಾ ಬೆಂಬಲಕ್ಕೆ ನಿಂತ ಅಶ್ವಿನಿ ಗೌಡ, ರಕ್ಷಿತಾ ವಿರುದ್ಧ ವಾಗ್ದಾಳಿ ನಡೆಸಿದರು.
35
ರಕ್ಷಿತಾ ಪರವಾಗಿ ಹೆಚ್ಚೆಚ್ಚು ಕಮೆಂಟ್
ಕಲರ್ಸ್ ಕನ್ನಡ ಬಿಡುಗಡೆ ಮಾಡುತ್ತಿರುವ ಪ್ರೋಮೋಗಳಿಗೆ ನೆಟ್ಟಿಗರು ರಕ್ಷಿತಾ ಪರವಾಗಿ ಹೆಚ್ಚೆಚ್ಚು ಕಮೆಂಟ್‌ಗಳು ಬರುತ್ತಿವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಾವೆ ಗೂಬೆಗಳು. ಹೊರಗೆ ಅವಳಿಗೆ ಇರುವ ಅಭಿಮಾನಿಗಳನ್ನು ನೋಡಿದ್ರೆ ಏನಾಗ್ತವೋ ಮುಂಡೇವು ಎಂದು ನಾಗವೇಣಿ ಎಂಬವರು ಕಮೆಂಟ್ ಮಾಡಿದ್ದಾರೆ. ಲಲಿತಾ ಎಪಿ ಎಂಬವರು ತಾವು ರಕ್ಷಿತಾ ಶೆಟ್ಟಿಯಲ್ಲಿ ಕಂಡ ಗುಣಗಳ ಬಗ್ಗೆ ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ನಲ್ಲಿ ನಿಯಮಗಳನ್ನು ಪಾಲಿಸುತ್ತಾ, ಇಡೀ ದಿವಸ ಎಂಬಂತೆ ಅಡುಗೆ ಹಾಗೂ ಉಳಿದ ಮನೆ ಕೆಲಸಗಳನ್ನು ಪ್ರೀತಿಯಿಂದ ಮಾಡುತ್ತಾ, ಎಲ್ಲರೊಂದಿಗೆ ಬೆರೆಯುತ್ತಾ, ಖುಷಿ ಖುಷಿಯಾಗಿ ಚುರುಕಾಗಿ ಓಡಾಡುತ್ತಾ, ಆಟಗಳನ್ನು ಅದ್ಭುತವಾಗಿ ಆಡುತ್ತಾ, ಪೂರ್ಣವಾಗಿ ಜೀವಿಸುತ್ತಿರುವ ವ್ಯಕ್ತಿ ಎಂದರೆ ಈ ರಕ್ಷಿತಾ. ದಿನ ಕಳೆದಂತೆ ಅವಳ ಕನ್ನಡ ಕೂಡಾ ಸುಧಾರಿಸುತ್ತಾ ಹೋಗುತ್ತಿದೆ. ಅವಳ ಮಾತುಗಳಲ್ಲಿ ತೂಕವಿದೆ, ವಾದದಲ್ಲಿ ಅರ್ಥ ಇರುತ್ತದೆ. ಕ್ಷಮಾ ಗುಣವಿದೆ. ಸರಳ,ಸಹಜ, ಬುದ್ಧಿವಂತ ಹುಡುಗಿ. ತುಂಬಾ ಇಷ್ಟವಾಗುತ್ತಾಳೆ. ಭಗವಂತ ಯಾವಾಗಲೂ ಚೆನ್ನಾಗಿಟ್ಟಿರಲಿ ಎಂದು ಹಾರೈಸಿದ್ದಾರೆ.
ಅಡುಗೆ ಮಾಡ್ಬೇಕು ಅಂತ ರಕ್ಷಿತಾ ರಾಶಿಕಳನ್ನು ಕರೆದ್ರೆ ಈ ಕಾಗೆ ಅಶ್ವಿನಿ ಮಾಡಲ್ಲಾ ಅಂತ ಹೇಳು ಚಾಡಿ ಹೇಳಿಕೊಡುವ ಮೂಲಕ ಮನೆಯ ಗೌರವ ಹಾಳು ಮಾಡ್ತಾ ಇದ್ದಾಳೆ ನಕಲಿ ಹೋರಾಟಗಾರ್ತಿ ಎಂದು ಕಿರಣ್ ರಾಜ್ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ರಕ್ಷಿತಾ ಶೆಟ್ಟಿ ಸಿಂಪಥಿ ಕ್ರಿಯೇಟ್ ಮಾಡಿಕೊಂಡು ಆಟವಾಡುತ್ತಿದ್ದಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.