- Home
- Entertainment
- TV Talk
- BBK 12: ರಕ್ಷಿತಾ ಶೆಟ್ಟಿಗೆ ಕಣ್ಣೀರು ಹಾಕಿಸಿದ್ದ ಅಶ್ವಿನಿ ಗೌಡ, ಜಾಹ್ನವಿಗೆ ಮಂಗಳಾರತಿ ಮಾಡಿದ ಕಿಚ್ಚ ಸುದೀಪ್
BBK 12: ರಕ್ಷಿತಾ ಶೆಟ್ಟಿಗೆ ಕಣ್ಣೀರು ಹಾಕಿಸಿದ್ದ ಅಶ್ವಿನಿ ಗೌಡ, ಜಾಹ್ನವಿಗೆ ಮಂಗಳಾರತಿ ಮಾಡಿದ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ನಾಗವಲ್ಲಿ, ರಾಜಾ, ಗೆಜ್ಜೆ ಶಬ್ದವು ಇಡೀ ಕರ್ನಾಟಕದಲ್ಲಿ ಸದ್ದು ಮಾಡಿತ್ತು. ನಾವು ಮಾಡಿದ ತಮಾಷೆ, ಬೇರೆಯವರನ್ನು ನೋಯಿಸಿ, ಕಣ್ಣೀರನ್ನು ಹಾಕುವಂತೆ ಮಾಡಿದ್ದು ಜೋಕ್ ಎಂದು ಜಾಹ್ನವಿ, ಅಶ್ವಿನಿ ಎಸ್ ಎಸ್ ಅವರನ್ನು ಕಿಚ್ಚ ಸುದೀಪ್ ತರಾಟೆಗೆ ತೆಗೆದುಕೊಂಡರು.

ರಕ್ಷಿತಾ ಶೆಟ್ಟಿ ನಾಗವಲ್ಲಿ ಅವತಾರವಂತೆ!
ರಕ್ಷಿತಾ ಶೆಟ್ಟಿ ಅವರು ಬಾತ್‌ರೂಮ್‌ಗೆ ಹೋಗಿ ಡ್ಯಾನ್ಸ್ ಮಾಡುತ್ತಿರೋದನ್ನು ಅಶ್ವಿನಿ ಎಸ್ ಎಸ್, ಜಾಹ್ನವಿ ಅವರು ನೋಡಿದ್ದರು. ರಾತ್ರಿ ರಾ ರಾ ಎಂದು ಹಾಡು ಹಾಡಿ ಡ್ಯಾನ್ಸ್ ಮಾಡ್ತಾಳೆ, ಒಬ್ಬೊಬ್ಬಳೇ ಮಾತಾಡ್ತಾಳೆ ಎಂದು ಅವರಿಬ್ಬರು ರಕ್ಷಿತಾ ಬಗ್ಗೆ ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಿದ್ದರು. ಆಮೇಲೆ ಜಾಹ್ನವಿ ಅವರೇ ಕಾಲ್ಗೆಜ್ಜೆ ಸೌಂಡ್ ಮಾಡಿ, ರಕ್ಷಿತಾರೇ ಕಾಲ್ಗೆಜ್ಜೆ ಸೌಂಡ್ ಮಾಡಿದರು ಎಂಬಂತೆ ಬಿಂಬಿಸಿದರು. ಎಲಿಮಿನೇಶನ್ ವಿಚಾರವಾಗಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಎಸ್ ಎಸ್, ಜಾಹ್ನವಿ ಅವರು ಜಗಳ ಮಾಡಿದರು, ಪರ್ಸನಲ್ ಅಟ್ಯಾಕ್ ಮಾಡಿದರು.
ತಮಾಷೆ ಪರ್ಸನಲ್ ಆಗಿ ಹೋಗ್ತಿದೆ
“ನಿಮಗೆ ಯಾವಾಗ ಬೇಕೋ ಆಗ ರಕ್ಷಿತಾ ಚಿಕ್ಕವಳು ಅಂತ ಹೇಳ್ತೀರಾ, ಆಮೇಲೆ ದೊಡ್ಡವಳು ಅಂತೀರಾ. ಇದ್ಯಾಕೆ? ನಮ್ಮ ಚಿಕ್ಕಪ್ಪ ಪೊಲೀಸ್ ಆಫೀಸರ್ ಆಗಿದ್ದು, ನಾನು ತಪ್ಪು ಮಾಡಿದಾಗ ಅವರು ನನ್ನ ಮುಂದೆ ಪೊಲೀಸ್ ಆಫೀಸರ್ ಆದರೆ ಅದನ್ನು ನಾನು ನನ್ನ ತಂದೆ ಬಳಿ ಕಂಪ್ಲೆಂಟ್ ಮಾಡೋಕೆ ಆಗತ್ತಾ? ನನ್ನ ಹೆಸರು ಹಾಳಾಗ್ತಿದೆ, ಪರ್ಸನಲ್ ಆಗಿ ಹೋಗ್ತಿದೆ ಎಂದಾಗ ಅವರು ಟ್ರಿಗರ್ ಆಗಿ ಮಾತನಾಡುತ್ತಾರೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಬಟ್ಟೆ ಬಗ್ಗೆ ಮಾತಾಡ್ತೀರಾ
“ನೀವೇ ತಪ್ಪು ಮಾಡಿದ್ದೀರಿ ಎಂದು ಒಪ್ಪಿಕೊಂಡು, ಆಮೇಲೆ ಮತ್ತೆ ರಕ್ಷಿತಾ ಶೆಟ್ಟಿ ಅವರು ಕೆಣಕಿದ್ರೆ ಆಗ ನೀವು ಮಾತನಾಡಿದ್ರೆ ಅದು ಚರ್ಚೆಯಾಗುತ್ತಿತ್ತು. ಸಿಕ್ಕಾಪಟ್ಟೆ ಪರ್ಸನಲ್ ಅಟ್ಯಾಕ್ ಆಗಿದೆ. ನಿನ್ನ ಬಟ್ಟೆ ನೋಡಿದ್ರೆ, ನೀನು ಎಲ್ಲಿಂದ ಬಂದಿದ್ದೀಯಾ ಅಂತ ಗೊತ್ತಾಗತ್ತೆ. She is nothing but s, ಈಡಿಯಟ್ ಅಂತೆಲ್ಲ ಬೈಯ್ತೀರಿ. ಅಂದು ಕಾಕ್ರೋಚ್ ಸುಧಿ ಯಮ್ಮ ಎಂದಾಗ ಹೆಸರು ಇದೆ ಹೇಳಿ ಅಂತ ಹೇಳ್ತೀರಾ, ಆದರೆ ನೀವು ರಕ್ಷಿತಾಗೆ ಈಡಿಯಟ್, ಕಾರ್ಟೋನ್ ಅಂತ ಕರೆಯುತ್ತೀರಾ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಿಮ್ಮ ಗೌರವ ನಮ್ಮ ಜವಾಬ್ದಾರಿ
ಈ ಮನೆ ನಿಮ್ಮದು, ಆ ಮನೆಯಲ್ಲಿ ಇರುವವರು ನೀವು ಎಂದಾಗ ಅಲ್ಲಿರುವ ಕ್ಯಾಮರಾಗಳು ನಿಮ್ಮದೇ. ಅದು ಯಾರೊಬ್ಬ ಅಪ್ಪನ ಆಸ್ತಿಯಲ್ಲ. ಬೇರೆಯವರ ಗೌರವ ತೆಗೆಯದೆ ಏನು ಬೇಕಿದ್ರೂ ಮಾಡಿ. ಆದರೆ ಒಬ್ಬನ ಮರ್ಯಾದೆ, ಗೌರವ, ಅಸ್ತಿತ್ವ ಇನ್ನೊಬ್ಬನ ಆಟದ ಸಾಮಾನು ಆಗಬಾರದು. ನೀವು ಮನೆಯೊಳಗಡೆ ಇದ್ದಾಗ ನಿಮ್ಮ ಗೌರವ ನಮ್ಮ ಜವಾಬ್ದಾರಿ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ರಕ್ಷಿತಾ ಶೆಟ್ಟಿ ಟ್ರಿಗರ್ ಆಗಿರೋದು ತಪ್ಪಿಲ್ಲ
“ಇಷ್ಟ ಬಂದಾಗ ಮಗಳು, ಉಳಿದ ಟೈಮ್‌ನಲ್ಲಿ ದೊಡ್ಡವಳು ಅಂತೀರಿ. ಬುಡವೇ ಸರಿ ಇಲ್ಲ ಅಂದ್ಮೇಲೆಮರ ಹೇಗೆ ಸರಿ ಇರತ್ತೆ? ನೀವು ಆ ರೀತಿ ಮಾತನಾಡಿದ್ದಕ್ಕೆ ರಕ್ಷಿತಾ ಆ ರೀತಿ ಟ್ರಿಗರ್ ಆಗಿರೋದು” ಎಂದು ಕಿಚ್ಚ ಸುದೀಪ್ ಅವರು ಬುದ್ಧಿ ಹೇಳಿದ್ದಾರೆ.
ತಪ್ಪು ತಿದ್ದಿಕೊಳ್ತೀನಿ
ಇನ್ನೊಂದು ಕಡೆ ಅಶ್ವಿನಿ ಗೌಡ, ಜಾಹ್ನವಿ ಅವರಿಗೆ ಪಶ್ಚಾತ್ತಾಪವೇ ಆಗಿಲ್ಲ, ಸುಮ್ಮನೆ ನಿಮ್ಮ ಮುಂದೆ ಕ್ಷಮೆ ಕೇಳಿದ್ದಾರೆ ಎಂದು ಮಂಜುಭಾಷಿಣಿ ಅವರು ಹೇಳಿದ್ದರು. ಆಗ ಅಶ್ವಿನಿ ಅವರು, “ಪಶ್ಚಾತ್ತಾಪವನ್ನು ಹೇಗೆ ತೋರಿಸೋದು, ಮುಂದಿನ ದಿನಗಳಲ್ಲಿ ತಿದ್ದಿಕೊಂಡು ಬದಲಾಗುವೆ” ಎಂದಿದ್ದಾರೆ.
ಡಿಫೇಮ್ ಆದರೆ ಸುಮ್ಮನೆ ಬಿಡಲ್ಲ
“ಎಲ್ಲೋ ನಮ್ಮಿಂದ ತಪ್ಪಾಗಿದೆ, ಅದರಿಂದ ಇದೆಲ್ಲ ನಡೆದಿದೆ ಎಂದು ಗೊತ್ತಾದಾಗ ಅಲ್ಲೇ ನಮ್ಮ ಗೆಲುವು ಇರೋದು, ತಮಾಷೆಗೆ ನೀವು ಮಾಡಿದ್ದು ಸರಿ, ಆದರೆ ಅದು ಮಿತಿ ಮೀರಿತ್ತು. ನಾನು ಯಾರನ್ನು ಡಿಫೇಮ್ ಮಾಡೋಕೆ ಬರೋದಿಲ್ಲ, ಬೇರೆಯವರಿಗೆ ಡಿಫೇಮ್ ಆಗಿರೋದನ್ನು ಸುಮ್ಮನೆ ಬಿಡೋದಿಲ್ಲ. Bigg Boss is bigger than biggest” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಿಮ್ಮ ರೂಮ್ ಹೇಗಿದೆ ಗೊತ್ತಾ?
“ನೀವು ಬಟ್ಟೆ ಬಗ್ಗೆ ಮಾತನಾಡುತ್ತೀರಿ. ಆದರೆ ನಿಮ್ಮ ರೂಮ್‌ಗಳು ಹೇಗಿದೆ ಎಂದು ಗೊತ್ತಾ?” ಎಂದು ಅವರು ಬೆಡ್ ರೂಮ್ ಏರಿಯಾದ ಫೋಟೋವನ್ನು ತೋರಿಸಿದ್ದಾರೆ.
ಕಿಚ್ಚ ಸುದೀಪ್ ಏನು ಮಾತನಾಡಬಹುದು ಎಂದು ವೀಕ್ಷಕರು ಕಾಯುತ್ತಿದ್ದರು. ಕೊನೆಗೂ ಬುದ್ಧಿ ಹೇಳಿದ್ದಾರೆ.