Bigg Boss Contestant Mallamma : ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಔಟ್, ಬಿಗ್ ಬಾಸ್ ಮನೆಯಿಂದ ಹೊರ ನಡೆದ ಸ್ಪರ್ಧಿ ಎನ್ನುವ ಸುದ್ದಿಗೆ ಈಗ ತೆರೆ ಬಿದ್ದಿದೆ. ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ಬಿಗ್ ಬಾಸ್ 12 (Bigg Boss 12)ರ ಸ್ಪರ್ಧಿ ಮಲ್ಲಮ್ಮ, ವೈಯಕ್ತಿಕ ಕಾರಣದಿಂದ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಆದ್ರೆ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿಲ್ಲ. ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಔಟ್ ಎನ್ನುವ ವಿಷ್ಯ ಚರ್ಚೆ ಆಗ್ತಿದ್ದಂತೆ ಮಲ್ಲಮ್ಮ ಅವರ ಅಧಿಕೃತ ಇನ್ಸ್ಟಾಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಮಲ್ಲಮ್ಮ (Mallamma), ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿಲ್ಲ, ವೋಟ್ ಮಾಡ್ತಿರಿ ಎನ್ನುವ ಸಂದೇಶ ರವಾನೆ ಮಾಡಲಾಗಿದೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದಿಲ್ಲ ಮಲ್ಲಮ್ಮ : 

ಬಿಗ್ ಬಾಸ್ ಮನೆಯಲ್ಲಿ ಈಗ ಕಾಲೇಜ್ ಟಾಸ್ಕ್ ನಡೀತಿದೆ. ಇದ್ರಲ್ಲಿ ರೆಡ್ ಹೌಸ್ ಮತ್ತು ಬ್ಲೂ ಹೌಸ್ ಅಂತ ಎರಡು ತಂಡಗಳನ್ನು ಮಾಡಲಾಗಿದೆ. ಎದುರಾಳಿಗಿಂತ ನಾನು ಬಿಗ್ ಬಾಸ್ ಮನೆಯಲ್ಲಿರೋಕೆ ಏಕೆ ಅರ್ಹ ಎನ್ನುವ ಕುರಿತು ಚರ್ಚಾ ಸ್ಪರ್ಧೆ ನಡೆದಿದೆ. ಅದ್ರಲ್ಲಿ ಗೆದ್ದವರು ಯಾರು ಎಂಬುದನ್ನು ಬಿಬಿ ಕಾಲೇಜ್ ಪ್ರಿನ್ಸಿಪಾಲರು ಘೋಷನೆ ಮಾಡಿದ್ದಾರೆ. ಮಲ್ಲಮ್ಮ ಹಾಗೂ ಸ್ಪಂದನಾ ಮಧ್ಯೆ ಚರ್ಚಾ ಸ್ಪರ್ಧೆ ನಡೆದಿತ್ತು. ಸ್ಪಂದನಾ, ಸ್ಪರ್ಧೆಯಲ್ಲಿ ಗೆದ್ರು. ಹಾಗಾಗಿ ಮಲ್ಲಮ್ಮ ಈ ಬಾರಿ ನಾಮಿನೇಟ್ ಆಗಿದ್ದಾರೆ. ಮಲ್ಲಮ್ಮ ಅವರ ಕುಟುಂಬಸ್ಥರ ಜೊತೆ ಮಾತನಾಡುವ ಅವಕಾಶವನ್ನು ರಘು ಅವರಿಗೆ ಬಿಗ್ ಬಾಸ್ ನೀಡಿತ್ತು. ಮಲ್ಲಮ್ಮ ಕೆಲ್ಸ ಮಾಡ್ತಿರುವ ಬೋಟಿಕ್ ಓನರ್ ಪಲ್ಲವಿ, ರಘು ಜೊತೆ ಮಾತನಾಡಿದ್ದಾರೆ. ಮಲ್ಲಮ್ಮ ಚೆನ್ನಾಗಿ ಆಟ ಆಡ್ತಿದ್ದಾರೆ, ಮುಂದೆ ಆಡ್ತಾರೆ ಅಂತ ಮಲ್ಲಮ್ಮಗೆ ಧೈರ್ಯ ತುಂಬಿದ್ದಾರೆ. ಮಲ್ಲಮ್ಮ ನಾಮಿನೇಟ್ ಆಗಿರೋದ್ರಿಂದ ಅವ್ರಿಗೆ ವೋಟು ಮಾಡಿ ಗೆಲ್ಲಿಸೋದು ವೀಕ್ಷಕರ ಜವಾಬ್ದಾರಿ. ಸದ್ಯ ಮಲ್ಲಮ್ಮ ಪೇಜ್ ನೋಡಿಕೊಳ್ತಿರುವ ಪಲ್ಲವಿ ಹಾಗೂ ಮನೋಜ್, ಇನ್ಸ್ಟಾಗ್ರಾಮ್ ನಲ್ಲಿ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿಲ್ಲ, ವೋಟ್ ಮಾಡಿ ಅಂತ ಪೋಸ್ಟ್ ಹಂಚಿಕೊಂಡಿದ್ದಾರೆ.

ಸುದ್ದಿ ಇಲ್ಲದೇ ಕದ್ದು ಮುಚ್ಚಿ ಮದುವೆ ಆಗ್ಬಿಟ್ರ ಶೋಭಾ ಶೆಟ್ಟಿ... ವೈರಲ್ ಆಗ್ತಿದೆ ವಿಡಿಯೋ

ಮಲ್ಲಮ್ಮನ ಬಗ್ಗೆ ಫೇಕ್ ನ್ಯೂಸ್? : 

ಮಲ್ಲಮ್ಮ ವೈಯಕ್ತಿಕ ಕಾರಣಕ್ಕೆ ಬಿಗ್ ಬಾಸ್ ಮನೆ ಬಿಟ್ಟಿದ್ದಾರೆ. ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಈ ಬಗ್ಗೆ ಕಲರ್ಸ್ ಕನ್ನಡ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಮಲ್ಲಮ್ಮ ಇನ್ಸ್ಟಾಖಾತೆಯಲ್ಲಿ ಸ್ಪಷ್ಟನೆ ಸಿಕ್ಕಿದೆ. ಮಲ್ಲಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ, ಮಲ್ಲಮ್ಮ ಚೆನ್ನಾಗಿ ಆಡ್ತಿದ್ದಾರೆ. ಅವರ ವಯಸ್ಸಿನಲ್ಲಿ ಬಿಗ್ ಬಾಸ್ ಗೆ ಹೋಗಿ ಇಷ್ಟು ದಿನ ಆಡಿದ್ದೇ ಸಾಧನೆ. ಅದು ಕೆಲವರಿಗೆ ಸಹಿಸೋಕೆ ಆಗ್ತಿಲ್ಲ, ಫೇಕ್ ನ್ಯೂಸ್ ನಂಬಬೇಡಿ ಎನ್ನುವ ಕಮೆಂಟ್ ಗಳು ಬಂದಿವೆ.

Bhagyalakshmi ಆದಿ ಜೊತೆ ಮದ್ವೆಗೆ ರೆಡಿಯಾದಳಾ ಭಾಗ್ಯ? ಮದುಮಗಳ ಲುಕ್ ಹಿಂದಿರೋ ಸೀಕ್ರೆಟ್​ ಏನು?

ಮಲ್ಲಮ್ಮ ಆಟ ಹೇಗಿದೆ? : 

ಹಳ್ಳಿಯಲ್ಲಿ ಹುಟ್ಟಿ, ಕಷ್ಟದ ಜೀವನ ಕಂಡಿರುವ ಮಲ್ಲಮ್ಮ ಬೆಂಗಳೂರಿಗೆ ಬಂದ್ರೂ ಹಳ್ಳಿ ಸೊಗಡನ್ನು ಬಿಟ್ಟಿಲ್ಲ. ಬೋಟಿಕ್ ನಲ್ಲಿ ಕೆಲ್ಸ ಮಾಡ್ತಾ, ಇನ್ಟ್ರಾಗ್ರಾಮ್ ನಲ್ಲಿ ಫೇಮಸ್ ಆಗಿದ್ದ ಮಲ್ಲಮ್ಮ ಅವ್ರನ್ನು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಲ್ಲಿ ನೋಡಿ ಅನೇಕರು ಶಾಕ್ ಆಗಿದ್ದರು. ವಯಸ್ಸು ಬರೀ ಲೆಕ್ಕ ಅನ್ನೋದನ್ನು ಮಲ್ಲಮ್ಮ ತೋರಿಸಿದ್ದಾರೆ. ಆರಂಭದಲ್ಲಿ ಸಾಕಷ್ಟು ಗಮನ ಸೆಳೆದಿದ್ದ ಮಲ್ಲಮ್ಮ ಅವ್ರನ್ನು ಮನೆಯವರೇ ಹಿಂದೆ ತಳ್ತಿದ್ದಾರೆ ಎನ್ನುವ ಆರೋಪ ಇದೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲೂ ಚರ್ಚೆ ನಡೆದಿದೆ.

View post on Instagram