ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳು 'ದೊಡ್ಮನೆ ಹಬ್ಬ' ಎಂಬ ವಿಶೇಷ ಕಾರ್ಯಕ್ರಮಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ, ಸ್ಪರ್ಧಿಗಳ ಡಾನ್ಸ್, ಕಾಮಿಡಿ ಹಾಗೂ ಅಸಮಾಧಾನಿತರ ಮುಖಾಮುಖಿಯನ್ನು ನಿರೀಕ್ಷಿಸಬಹುದು. ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ.
ಬಿಗ್‌ಬಾಸ್ 12 (Bigg Boss 12) ಮುಕ್ತಾಯಗೊಂಡು ಹಲವು ದಿನಗಳು ಕಳೆದಿದ್ದು, ಸದ್ಯ ಅದರ ಮೇಲಿನ ಕ್ರೇಜ್ ಕ್ರಮೇಣ ಜನರ ಮನಸ್ಸಿನಲ್ಲಿ ಕಡಿಮೆಯಾಗತೊಡಗಿದೆ. ಬಿಗ್‌ಬಾಸ್ ಸಂದರ್ಭದಲ್ಲಿ ವಾಹಿನಿಯ ಟಿಆರ್ಪಿ ಒಂದೇ ಸಮನೆ ಏರಿದರೆ, ಅದು ಮುಗಿದ ಮೇಲೆ ಸಹಜವಾಗಿ ಕುಸಿತ ಕಾಣುವುದು ಇದ್ದೇ ಇದೆ. ಆದರೆ ಇನ್ನೊಮ್ಮೆ ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳನ್ನು ಒಟ್ಟಿಗೇ ವೇದಿಕೆ ಮೇಲೆ ಕರೆತಂದಿದೆ ಕಲರ್ಸ್ ವಾಹಿನಿ.
26
ದೊಡ್ಮನೆ ಹಬ್ಬ
ಇದೇ ಫೆಬ್ರುವರಿ 14ರಂದು ದೊಡ್ಮನೆ ಹಬ್ಬದ ಹೆಸರಿನಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಸುಷ್ಮಾ ಕೆ.ರಾವ್ ಅವರ ನಿರೂಪಣೆಯಲ್ಲಿ, ಬಿಗ್‌ಬಾಸ್ 12ನೇ ಸೀಸನ್ನ ಎಲ್ಲಾ ಸ್ಪರ್ಧಿಗಳನ್ನು ಪುನಃ ಒಟ್ಟಿಗೇ ನೋಡುವ ಅವಕಾಶವನ್ನು ವೀಕ್ಷಕರು ಪಡೆದುಕೊಳ್ಳಬಹುದಾಗಿದೆ.
36
ಜೋಡಿ ಹಕ್ಕಿಗಳ ಮಿಲನ
ಈ ಸೀಸನ್ನಲ್ಲಿ ಜೋಡಿ ಹಕ್ಕಿಗಳೆಂದೇ ಫೇಮಸ್ ಆದವರು ರಾಶಿಕಾ ಶೆಟ್ಟಿ- ಸೂರಜ್ ಸಿಂಗ್ (Rashika Shetty and Suraj Singh) ಮತ್ತು ಗಿಲ್ಲಿ ನಟ- ಕಾವ್ಯಾ ಶೈವ. ಇವರ ಜೋಡಿಯನ್ನು ಮತ್ತೊಮ್ಮೆ ಒಟ್ಟಿಗೇ ನೋಡಿ ವೀಕ್ಷಕರು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಇದರ ಜೊತೆಗೆ, ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಅಸಮಾಧಾನ ಹೊರಹಾಕುತ್ತಿರುವ ಸ್ಪರ್ಧಿಗಳೂ ಇದ್ದಾರೆ. ಗಿಲ್ಲಿ ನಟ ವಿನ್ ಆಗಿರುವುದಕ್ಕೆ ವಿವಿಧ ಮಾಧ್ಯಮಗಳಲ್ಲಿ ಭಾರಿ ಕೋಪವನ್ನೂ ತೋಡಿಕೊಂಡಿರುವ ಸ್ಪರ್ಧಿಗಳೂ ಇದ್ದಾರೆ. ಅವರು ಇದೀಗ ಮತ್ತೊಮ್ಮೆ ಗಿಲ್ಲಿ ನಟನ ಮುಖಾಮುಖಿಯಾದರೆ ಹೇಗಿರುತ್ತದೆ ಎನ್ನುವುದನ್ನೂ ಇದರಲ್ಲಿ ನೋಡಬಹುದಾಗಿದೆ.
56
ಬಿಗ್‌ಬಾಸ್ ಸವಿಯೂಟ
ಒಟ್ಟಿನಲ್ಲಿ ಕಲರ್ಸ್ ವಾಹಿನಿ ವೀಕ್ಷಕರಿಗೆ ಮತ್ತೊಮ್ಮೆ ಬಿಗ್‌ಬಾಸ್ ಸವಿಯೂಟವನ್ನು ಬಡಿಸಲು ಮುಂದಾಗಿದೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಎಲ್ಲರೂ ಭರ್ಜರಿ ಹೆಜ್ಜೆ ಹಾಕುವುದನ್ನು ನೋಡಬಹುದು.
66
ಗಾಸಿಪ್ ಅಂದ್ರೆ ತೆಂಗಿನ ಚಿಪ್ಪು
ಜೊತೆಗೆ ಸುಷ್ಮಾ ಕೆ.ರಾವ್ ಅವರ ನಿರೂಪಣೆ ಎಂದರೆ, ಸಹಜವಾಗಿ ಅದರಲ್ಲಿ ಕಾಮಿಡಿ ಇದ್ದೇ ಇರುತ್ತದೆ. ಮಲ್ಲಮ್ಮ ಅವರಿಗೆ ಸುಷ್ಮಾ ಅವರು ಗಾಸಿಪ್ ಎಂದರೆ ಏನು ಎಂದು ಕೇಳಿದಾಗ, ಮಲ್ಲಮ್ಮ ತೆಂಗಿನ ಚಿಪ್ಪು ಎಂದಿದ್ದಾರೆ. ಹೀಗೆ ಹಲವು ರೀತಿಯ ಕಾಮಿಡಿಗಳನ್ನೂ ಇದರಲ್ಲಿ ನೋಡಬಹುದು. ಜೊತೆಗೆ ಬಿಗ್‌ಬಾಸ್ ಸ್ಪರ್ಧಿಗಳ ಕುಟುಂಬಸ್ಥರ ಜೊತೆಗಿನ ಮೋಜು ಮಸ್ತಿಯನ್ನೂ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.