ಭಾಗ್ಯಲಕ್ಷ್ಷಿ ಸೀರಿಯಲ್ ಅಂತಿಮ ಘಟ್ಟ ತಲುಪಿದ್ದು, ತಾಂಡವ್ ಕ್ಷಮೆ ಕೇಳಿದರೂ ಭಾಗ್ಯ ಒಪ್ಪುತ್ತಿಲ್ಲ. ಇದರ ನಡುವೆ ಆದಿ ಪ್ರಪೋಸ್ ಮಾಡಿದ್ದು, ಭಾಗ್ಯಳ ಮನಸ್ಸಿನಲ್ಲಿ ಪ್ರೀತಿ ಮೂಡಿದೆ. ಈ ತ್ರಿಕೋನ ಪ್ರೇಮಕಥೆಯ ಅಂತ್ಯ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಭಾಗ್ಯಲಕ್ಷ್ಷಿ ಸೀರಿಯಲ್ (Bhagyalakshmi Serial) ಅಂತಿಮ ಹಂತ ತಲುಪಿದೆ. ಇದಾಗಲೇ ತಾನು ಮಾಡಿರುವ ತಪ್ಪಿಗೆ ತಾಂಡವ್ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾನೆ.ತನಗೆ ಭಾಗ್ಯ ಕ್ಷಮೆ ಕೊಟ್ಟರೆ ಸಾಕು, ಇನ್ನು ಜೀವನದಲ್ಲಿ ಆಕೆಯ ತಂಟೆಗೆ ಬರುವುದಿಲ್ಲ ಎನ್ನುತ್ತಿದ್ದಾನೆ.
26
ಕ್ಷಮಿಸದ ಭಾಗ್ಯ
ಆದರೆ, ಯಾರೇ ಹೇಳಿದರೂ ನಾನು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕಡ್ಡಿ ಮುರಿದವಳಂತೆ ಭಾಗ್ಯ ಹೇಳಿದ್ದಾಳೆ. ಭಾಗ್ಯಳ ಈ ಬದಲಾವಣೆಗೆ ವೀಕ್ಷಕರು ಭರ್ಜರಿ ಖುಷಿ ಪಟ್ಟುಕೊಂಡಿದ್ದಾರೆ. ಅಳುಮುಂಜಿ ಭಾಗ್ಯ ಈಗಾದರೂ, ಬದಲಾದಳಲ್ಲ ಎನ್ನುವುದು ಎಲ್ಲರ ಖುಷಿ.
36
ಭಾಗ್ಯಳಿಗೆ ಆದಿ ಪ್ರಪೋಸ್
ಇದರ ಮಧ್ಯೆಯೇ ಆದಿ ಕೂಡ ಭಾಗ್ಯಳಿಗೆ ಪ್ರಪೋಸ್ ಮಾಡಿದ್ದು, ಭಾಗ್ಯಳ ಮನಸ್ಸಿನಲ್ಲಿಯೂ ಆದಿಯ ಮೇಲೆ ಪ್ರೀತಿ ಮೂಡಿದೆ. ಇಬ್ಬರು ದೊಡ್ಡ ಮಕ್ಕಳು ಇರುವಾಗ ಎರಡನೆಯ ಮದುವೆ ಸರಿಯಲ್ಲ ಎನ್ನುವ ಆತಂಕ ಮನಸ್ಸಿನಲ್ಲಿ ಇದ್ದರೂ ಪ್ರೀತಿಯ ಮುಂದೆ ಅದು ಸೋತಿದೆ.
ಆದರೂ ಕೊನೆಯವರೆಗೆ ಹೀಗೆಯೇ ಎನ್ನಲಾಗದು. ಭಾಗ್ಯ ಯಾರ ಪರ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದರ ನಡುವೆಯೇ, ಭಾಗ್ಯ, ಆದಿ ಮತ್ತು ತಾಂಡವ್ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನುನೋಡಿ ಎಲ್ಲರೂ ಆದಿ ಭಾಗ್ಯ ಒಂದಾಗಬೇಕು ಎನ್ನುತ್ತಿದ್ದಾರೆ.
56
ಜೀನ್ಸ್ನಲ್ಲಿ ಮಿಂಚಿಂಗ್
ಭಾಗ್ಯ ಪಾತ್ರಧಾರಿ ಸುಷ್ಮಾಕೆ. ರಾವ್ ಅವರು ಜೀನ್ಸ್ನಲ್ಲಿ ಮಿಂಚಿದ್ದರೆ, ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಮತ್ತು ಆದಿ ಪಾತ್ರಧಾರಿ ಹರೀಶ್ ಅವರು ಒಂದೇ ರೀತಿಯ ಮಾರ್ವಾಡಿ ಡ್ರೆಸ್ನಲ್ಲಿ ಮಿಂಚಿದ್ದಾರೆ. ಈ ಫೋಟೋವನ್ನು ಹಾರ್ಟ್ ಇಮೋಜಿಗಳಿಂದ ಕಮೆಂಟಿಗರು ತುಂಬಿಸಿದ್ದಾರೆ. ಆದರೆ ಏನೇ ಆದರೂ ಭಾಗ್ಯ ಮತ್ತು ಆದಿ ಒಂದಾಗಬೇಕು ಎನ್ನುವುದು ಅವರ ಮಾತು.
66
ಸುಸೂತ್ರ ದಿ ಎಂಡ್
ಭಾಗ್ಯ- ಆದಿ ಒಂದಾಗುವ ಲಕ್ಷಣಗಳೂ ಇದೆ. ತಾಂಡವ್ ಮತ್ತು ಶ್ರೇಷ್ಠಾಳನ್ನು ಭಾಗ್ಯ ಒಂದು ಮಾಡಬಹುದು. ಶ್ರೇಷ್ಠಾಳಿಗೂ ತಾನು ಮಾಡಿರುವುದು ಮೋಸ ಎಂದು ಬುದ್ಧಿ ಬಂದು ತಾಂಡವ್ನಲ್ಲಿ ಕ್ಷಮೆ ಕೇಳಿದರೆ ಅಲ್ಲಿಗೆ ಎಲ್ಲವೂ ಸುಸೂತ್ರವಾಗಿ ದಿ ಎಂಡ್ ಆಗುವಲ್ಲಿ ಸಂದೇಹವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.