Bigg Boss​ ಕ್ಲೋಸ್​ ಫ್ರೆಂಡ್ಸ್​ ತ್ರಿವಿಕ್ರಮ್​- ಭವ್ಯಾ ಮದ್ವೆ ಆಗ್ತಾ ಇದ್ದಾರಾ? ಖುದ್ದು ನಟ ಹೇಳಿದ್ದೇನು ಕೇಳಿ

Published : Oct 04, 2025, 05:54 PM IST

ಬಿಗ್​ಬಾಸ್​ ಸೀಸನ್​ 11ರ ಜೋಡಿ ತ್ರಿವಿಕ್ರಮ ಮತ್ತು ಭವ್ಯಾ ಗೌಡ ಅವರ ಮದುವೆಯ ಬಗ್ಗೆ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಇವರ ನಡುವಿನ ಸ್ನೇಹ ಒಂದು ಹಂತ ಮೀರಿತ್ತು ಎನ್ನುವ ಮಾತುಗಳ ನಡುವೆಯೇ ಈ ಪ್ರಶ್ನೆ ಕೇಳಲಾಗಿದೆ. ಇದಕ್ಕೆನಟ ತ್ರಿವಿಕ್ರಮ್​ ಏನು ಹೇಳಿದ್ರು ನೋಡಿ!

PREV
16
ತ್ರಿವಿಕ್ರಮ ಮತ್ತು ಭವ್ಯಾ ಗೌಡ ಸ್ಟೋರಿ

ಬಿಗ್​ಬಾಸ್​ (Big Boss) ಸೀಸನ್​ 11ರಲ್ಲಿ ಪ್ರೀತಿಯ ವಿಷಯದಲ್ಲಿ ಎಲ್ಲರ ಗಮನ ಸೆಳೆದಿದ್ದು ತ್ರಿವಿಕ್ರಮ ಮತ್ತು ಭವ್ಯಾ ಗೌಡ. ಇವರ ನಡುವಿನ ಪ್ರೇಮದ ಮಾತುಗಳು ಮನೆಮಂದಿಯ ಗಮನ ಸೆಳೆದಿದ್ದವು. ಮೊದಲು ಇಬ್ಬರೂ ಗೆಳೆತನ ಮಾತ್ರ ಎಂದಿದ್ದರೂ, ನಂತರ ತ್ರಿವಿಕ್ರಮ ಅವರು ಭವ್ಯಗೆ ಪ್ರೀತಿ ವ್ಯಕ್ತಪಡಿಸಿದ್ದೂ ಇದೆ. ಇದೇ ಕಾರಣಕ್ಕೆ ಇವರಿಬ್ಬರೂ ಮದುವೆ ಆಗುತ್ತಾರೆ ಎಂದೇ ಹೇಳಲಾಗಿತ್ತು. ಅಷ್ಟಕ್ಕೂ ಬಿಗ್​ಬಾಸ್​​ನಲ್ಲಿ ಇವೆಲ್ಲಾ ಮಾಮೂಲೇ ಆಗಿದ್ದರೂ ಅಭಿಮಾನಿಗಳು ಯಾರನ್ನೋ ಜೋಡಿ ಮಾಡಿಬಿಡುವುದು ಹೊಸ ವಿಷಯವೇನಲ್ಲ

26
ದೊಡ್ಡ ಸಂಗತಿಯೇ ನಡೆದಿತ್ತು!

ಆದರೆ ಇವರಿಬ್ಬರ ವಿಷಯದಲ್ಲಿ ಇನ್ನೂ ಒಂದು ದೊಡ್ಡ ಸಂಗತಿ ಬಿಗ್​ಬಾಸ್​ನಲ್ಲಿ ನಡೆದಿತ್ತು. ಅದೇನೆಂದರೆ, ಫಿನಾಲೆಯ ಹೊತ್ತಿನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಪ್ರೇಮ ಪ್ರಕರಣವೊಂದರ ವೀಡಿಯೋ ವೈರಲ್ ಆಗಿತ್ತು. ಅದು ತ್ರಿವಿಕ್ರಮ್ ಮತ್ತು ಭವ್ಯಾ ನಡುವಿನ ಮಾತುಗಳು. ಆ ಮಾತುಗಳನ್ನು ಕೇಳಿ ಜನ ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡಿದ್ದರು. ಕುಟುಂಬದವರೆಲ್ಲ ಕೂತು ನೋಡೋ ಶೋನಲ್ಲಿ ಇದೆಲ್ಲ ಏನು ನಡೀತಿದೆ ಅಂತೆಲ್ಲ ಹೇಳಿದ್ದರು. ಭವ್ಯಾ ಮತ್ತು ತ್ರಿವಿಕ್ರಮ್ ನಡುವಿನ ಈ ರಹಸ್ಯ ವೀಡಿಯೋ ಸೋಷಲ್ ಮೀಡಿಯಾ ತನಕ ತಲುಪಿದ್ದು ಹೇಗೆ ಅನ್ನೋ ಬಗೆಗೂ ಮಾತುಕತೆ ಶುರುವಾಗಿತ್ತು.

36
ಬೇರೆಯದ್ದೇ ಮಾತುಕತೆ

ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ (Bigg Boss Trivikram) ಹಾಗೂ ಭವ್ಯಾ ಕೊನೆಕೊನೆಗೆ ಕಚ್ಚಾಡುತ್ತಿದ್ದರು. ಆದರೆ ಇವರ ನಡುವೆ ಬೇರೆಯದೇ 'ಮಾತುಕತೆ' ನಡೆದಿತ್ತು ಅನ್ನೋದಕ್ಕೆ ಸಾಕ್ಷಿಯಾಗಿ ಈ ವೀಡಿಯೋ ಲೀಕ್ ಆಗಿತ್ತು. ಸುದೀಪ್ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಅವರು ಭವ್ಯಾ ಗೌಡ ಬಳಿ ಕೇಳಿದಾಗ, 'ಆ ತರ ಏನು ಇಲ್ಲ ಸರ್' ಎಂದಿದ್ದರು. ಆಗ ಸುದೀಪ್, 'ಆ ತರ ಅಂದರೆ ಯಾವ ತರ' ಎಂದು ಮರು ಪ್ರಶ್ನೆ ಹಾಕಿದ್ದರು. 'ತ್ರಿವಿಕ್ರಮ್ ಜೊತೆ ಗುಡ್ ವೈಬ್ ಕನೆಕ್ಷನ್ ಇದೆ ಸರ್' ಎಂದು ಭವ್ಯಾ ಹೇಳಿದಾಗ ಸುದೀಪ್ ಕಾಮಿಡಿಯಾಗಿ 'ಗುಡ್‌ ವೈಫ್ ಕನೆಕ್ಷನ್ ಇದಿಯಾ?' ಎಂದು ಕೇಳಿ ಕಾಲೆಳೆದಿದ್ದರು. ಒಟ್ಟಿನಲ್ಲಿ ಇವರ ವಿಷಯ ಸಕತ್​ ಚರ್ಚೆಯಾಗುತ್ತಲೇ ಇತ್ತು.

46
ಫ್ಯಾನ್ಸ್​ಗೆ ಮದ್ವೆ ಚಿಂತೆ

ಬಿಗ್​ಬಾಸ್​​ 11 ಮುಗಿದು 12 ಆರಂಭವಾಗಿದ್ದರೂ, ಕೆಲವು ಫ್ಯಾನ್ಸ್​ಗೆ ಈ ಜೋಡಿಯದ್ದೇ ಚಿಂತೆ. ಬಾಸ್​ ಟಿವಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದೇ ಪ್ರಶ್ನೆಯನ್ನು ಮಹಿಳಾ ಫ್ಯಾನ್​ ಒಬ್ಬರು ತ್ರಿವಿಕ್ರಮ್​ ಅವರಿಗೆ ಕೇಳಿದ್ದಾರೆ. ನೀವಿಬ್ಬರೂ ಮದ್ವೆಯಾಗ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ತ್ರಿವಿಕ್ರಮ್​, ನಾನು 120 ದಿನ ಬಿಗ್​ಬಾಸ್​ನಲ್ಲಿ ಭವ್ಯ (Bigg Boss Bhavya Gowda ) ಜೊತೆಗೆ ಇದದ್ದೂ ಒಂದೇನೇ, ಈಗ ಸೀರಿಯಲ್​ನಲ್ಲಿ ಪ್ರತಿಮಾ ಅವರ ಜೊತೆಗೆ ಇದದ್ದೂ ಒಂದೇನೆ. ನನಗೆ ಜೆಂಡರ್​ ಫೀಲಿಂಗ್ಸ್​ ಇಲ್ಲ. ಯಾರು ಪ್ರೀತಿಯಿಂದ ಮಾತನಾಡಿಸ್ತಾರೋ ಎಲ್ಲರ ಜೊತೆಯೂ ಪ್ರೀತಿಯಿಂದ ಮಾತನಾಡಿಸುತ್ತೇನೆ ಅಷ್ಟೇ ಎಂದಿದ್ದಾರೆ ತ್ರಿವಿಕ್ರಮ್​

56
ತ್ರಿವಿಕ್ರಮ್​ ಹೇಳಿದ್ದೇನು?

ಇನ್ನು ಭವ್ಯಾ ವಿಷಯದಲ್ಲಿ ಹೇಳುವುದಾರೆ ಬಿಗ್​ಬಾಸ್​ನಲ್ಲಿ ಒಟ್ಟಿಗೆ ಇದ್ವಿ ಅಷ್ಟೇ. ಅಲ್ಲಿಂದ ಹೊರಕ್ಕೆ ಬಂದಾಗ, ಯಾರೇ ಆದರೂ ಅವರ ಕರಿಯರ್​​ನಲ್ಲಿ ಮುಂದುವರೆದಾಗ ನಾವು ಸಪೋರ್ಟ್​ ಮಾಡಬೇಕು ಅಷ್ಟೆ. ನಾನೂ ಅದನ್ನೇ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಬಾಪ್ಪ, ಇಬ್ಬರೂ ಬಿಗ್​ಬಾಸ್​ನಲ್ಲಿ ಇದ್ವಿ, ಬಾ ಮದುವೆಯಾಗೋಣ ಎನ್ನೋದು ಫೂಲಿಷ್​ ಆಗುತ್ತದೆ ಎಂದಿದ್ದಾರೆ.

66
ಅಸಹ್ಯ ಮಾಡಬೇಡಿ ಎಂದ ನಟ

ಭವ್ಯ ಅವರಿಗೆ ಅವರದ್ದೇ ಆದ ಓನ್​ ಲೈಫ್​ ಇದೆ. ಅದಕ್ಕೆ ನಾವು ಡಿಸ್ಟರ್ಬ್​ ಮಾಡಬಾರದು. ಬಿಗ್​ಬಾಸ್​ ಮನೆಯಲ್ಲಿ ನಮ್ಮಿಬ್ಬರ ನಡುವೆ ಫ್ರೆಂಡ್​ಷಿಪ್​ ಇತ್ತು ಅಷ್ಟೇ. ಊಟ ಶೇರ್​ ಮಾಡ್ತಿದ್ವಿ, ನಾನು ಗೆಲ್ಲದಿದ್ರೆ ನೀನಾದ್ರೂ ಗೆಲ್ಲು ಅನ್ನೋದು ಫ್ರೆಂಡ್​ಷಿಪ್​ ಅಷ್ಟೇ ಎಂದಿದ್ದಾರೆ. ಅದನ್ನು ಮದುವೆ ಎಂದು ಹೇಳಿ ಅಸಹ್ಯ ಮಾಡುವುದು ಬೇಡ ಎಂದಿದ್ದಾರೆ.

Read more Photos on
click me!

Recommended Stories