ಜೀ ಕನ್ನಡದ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ನಾಯಕ-ನಾಯಕಿ ಅಮೋಘ್ ಮತ್ತು ಆಸಿಯಾ, ಜೀ ಕುಟುಂಬ ಅವಾರ್ಡ್ಸ್‌ನ ಭಾಗವಾಗಿ ನಡೆದ ಚುಕ್ಕಿಯ ಆಟದಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಎಡವಿದ ಜೋಡಿ ಮುಂದೆ ಸಕ್ಸಸ್ ಆಯ್ತಾ?
ಸದ್ಯ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ (Shravani Subramanya) ಜೀ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದು, ವಿಭಿನ್ನ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರಾವಣಿಯನ್ನು ಸುಬ್ರಹ್ಮಣ್ಯ ಮನಸಾರೆ ಇಷ್ಟಪಟ್ಟರೂ, ಅವಳದ್ದೇ ಜೊತೆ ಮದುವೆಯಾದರೂ ಅದನ್ನು ಹೇಳಿಕೊಳ್ಳಲು ಅವನಿಗೆ ಬರುವುದಿಲ್ಲ. ತನ್ನ ತಂದೆಗಾಗಿ ಈ ಮದುವೆಯಾಗಿದ್ದಾನೆ ಎಂದು ಶ್ರಾವಣಿ ತಪ್ಪುತಿಳಿದುಕೊಂಡಿದ್ದಾಳೆ. ಒಟ್ಟಿನಲ್ಲಿ ಗಂಡ-ಹೆಂಡತಿಯ ಕಿತ್ತಾಟ ಇದೇ ಪ್ರೀತಿಯ ವಿಷಯದಲ್ಲಿ ನಡೆಯುತ್ತಲೇ ಇದೆ.
26
ಜೀ ಕುಟುಂಬ ಅವಾರ್ಡ್
ಇದರ ನಡುವೆಯೇ ಜೀ ಕುಟುಂಬ ಅವಾರ್ಡ್ (Zee Kutumba Award) ಶುರುವಾಗಲಿದೆ. ನೆಚ್ಚಿನ ನಾಯಕ, ನಾಯಕಿ, ವಿಲನ್, ಪೋಷಕ ಪಾತ್ರ, ಬಾಲ ನಟರು... ಹೀಗೆ ಹಲವಾರು ಕೆಟಗರಿಯಲ್ಲಿ ಅವಾರ್ಡ್ ನೀಡಲಾಗುತ್ತದೆ. ಇದಕ್ಕೂ ಮುನ್ನ, ಸೀರಿಯಲ್ಗಳ ನಾಯಕ- ನಾಯಕಿಯರಿಗೆ ಕೆಲವೊಂದು ಆಟಗಳನ್ನು ಆಡಿಸಲಾಗುತ್ತಿದೆ. ಇದೀಗ ಇದರಲ್ಲಿ ಶ್ರಾವಣಿ ಮತ್ತು ಸುಬ್ರಹ್ಮಣ್ಯ ಸೀರಿಯಲ್ ತಾರೆಯರು ಮಿಂಚಿದ್ದಾರೆ.
36
ಚುಕ್ಕಿಯ ಆಟ
ಶ್ರಾವಣಿ ಪಾತ್ರದಲ್ಲಿ ಆಸಿಯಾ ಫಿರ್ದೋಸ್ ನಟಿಸುತ್ತಿದ್ದರೆ, ಅಮೋಘ್ ಆದಿತ್ಯ ಸುಬ್ರಹ್ಮಣ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರೂ ಜೋಡಿಯಾಗಿ ಈ ಫನ್ ಗೇಮ್ಗೆ ಬಂದಿದ್ದಾರೆ. ಇದರಲ್ಲಿ ಅವರಿಗೆ ಕೆಲವೊಂದು ಚುಕ್ಕಿ ನೀಡಲಾಗಿದೆ. ಸುಬ್ರಹ್ಮಣ್ಯ ಶ್ರಾವಣಿಯ ಕೈಯನ್ನು ಹಿಡಿದುಕೊಳ್ಳಬೇಕು. ಬಳಿಕ ಅಲ್ಲಿರುವ ಚುಕ್ಕಿಗಳನ್ನು ಕೈಬಿಡದೇ ಸೇರಿಸಬೇಕು. ಎಲ್ಲಿಯೂ ರಿಪೀಟ್ ಆಗಬಾರದು ಎನ್ನುವ ಷರತ್ತು ಅಲ್ಲಿದೆ.
ಆರಂಭದಲ್ಲಿ ಸ್ವಲ್ಪ ಎಡವಿದರೂ, ಈ ಜೋಡಿ ಚುಕ್ಕಿಗಳನ್ನು ಮುಗಿಸುವಲ್ಲಿ ಸಕ್ಸಸ್ ಆಗಿದೆ. ಆದರೆ ಲೈನ್ ಹಾಕುವಾಗ ಸ್ವಲ್ಪ ಅಲ್ಲಾಡಿದ್ದರಿಂದ ರಸ್ತೆ ಸರಿಯಾಗಿ ಬಂದಿಲ್ಲ ಎಂದು ಆ್ಯಂಕರ್ ಹೇಳಿದ್ದಾರೆ. ಅದಕ್ಕೆ ಶ್ರಾವಣಿ ನಾವು ಇರುವುದು ಬೆಂಗಳೂರಿನ ರೋಡ್ನಲ್ಲಿ ಎಂದು ತಮಾಷೆ ಮಾಡಿದ್ದಾರೆ.
56
ಮಾಡೆಲ್ ಆಗಿರೋ ಆಸಿಯಾ ಫಿರ್ದೋಸ್
ಇನ್ನು ಆಸಿಯಾ ಫಿರ್ದೋಸ್ ಕುರಿತು ಹೇಳುವುವದಾದರೆ, ಅವರು ಇದಕ್ಕೂ ಮುನ್ನ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಟಿಸಿದ್ದರು. 1998, ಮಾರ್ಚ್ 22ರಂದು ಬೆಂಗಳೂರಿನಲ್ಲಿ ಜನಿಸಿರುವ ನಟಿ, ನಟನೆಯ ಲೋಕಕ್ಕೆ ಬರುವ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಓದುತ್ತಿರುವಾಗಲೇ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು ಆಸಿಯಾ. ಅವರು 'ಕಾಲಾಯ ತಸ್ಮೈ ನಮಃ' ಎಂಬ ಸಿನಿಮಾದಲ್ಲಿಯೂ ನಟಿಸಿದ್ದಾರೆ.
66
ಅಮೋಘ್ ಆದಿತ್ಯ ಕುರಿತು
ಇನ್ನು ನಟ ಅಮೋಘ್ ಆದಿತ್ಯ ಕುರಿತು ಹೇಳುವುದಾದರೆ, ಇವರು ಉಡುಪಿ ಜಿಲ್ಲೆಯ ಕುಂದಾಪುರದವರು. ರಂಗಭೂಮಿಯಿಂದ ನಟನೆ ಪ್ರಾರಂಭಿಸಿದ ಅವರು ದೃಶ್ಯ ಹಾಗೂ ಸರ್ವಂ ಎಂಬ ಎರಡು ನಾಟಕ ತಂಡಗಳಲ್ಲಿ ಕೆಲಸ ಮಾಡಿದ್ದಾರೆ. 2020 ರಲ್ಲಿ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ "ಸ್ವರ" ಸೇರಿದಂತೆ ಹಲವು ಕಿರುಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಮತ್ತು ಪಾತ್ರಧಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. 2021 ರಲ್ಲಿ ತೆರೆಗೆ ಬಂದ ಕನ್ನಡ ಚಿತ್ರ ರಾಮಾರ್ಜುನ ದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 2022 ರಲ್ಲಿ ಬಿಡೆಗಡೆಯಾದ ಕನ್ನಡ ಆಲ್ಬಮ್ ಸಾಂಗ್ "ಇದು ನಿಜವೇ" ದಲ್ಲಿ ಇವರು ನಾಯಕಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಶಾಂತಂ ಪಾಪಂ, ಹೂ ಮಳೆ, ದೊರೆಸಾನಿ, ಗೀತಾ, ಅಂತರಪಟ, ಸತ್ಯ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದಾರೆ.