BBK 12: ಎಲ್ಲರ ಮನಸ್ಸನ್ನ ಗೆದ್ದಬಿಟ್ಟಾರಿ ಸೂರಜ್; ಇಬ್ಬರ ಸ್ವಾರ್ಥಕ್ಕೆ ಮನೆಯಲ್ಲಿ ಮಹಾ ಕೋಲಾಹಲ!

Published : Oct 23, 2025, 09:06 AM IST

ಬಿಗ್‌ಬಾಸ್ ನೀಡಿದ ಕ್ಯಾಪ್ಟನ್ಸಿ ಟಾಸ್ಕ್‌ನ ವಿಶೇಷ ಅಧಿಕಾರದಿಂದಾಗಿ ಮನೆಯಲ್ಲಿ ದೊಡ್ಡ ಜಗಳವೇ ನಡೆದಿದೆ. ಸೂರಜ್ ತಮ್ಮ ತಂಡದ ಪರ ನಿಂತು ಎಲ್ಲರ ಮನಗೆದ್ದಿದ್ದಾರೆ. ಈ ನಿರ್ಧಾರದಿಂದ ಮನೆಯ ಸದಸ್ಯರು ರಿಷಾ ಮತ್ತು ರಘು ವಿರುದ್ಧ ತಿರುಗಿಬಿದ್ದಿದ್ದಾರೆ.

PREV
16
ಬಿಗ್‌ಬಾಸ್ ಕೊಟ್ರು ಟ್ವಿಸ್ಟ್

ಈ ವಾರ ವೈಲ್ಡ್‌ಕಾರ್ಡ್ ಎಂಟ್ರಿ ನೀಡಿರುವ ಮೂವರು ಸ್ಪರ್ಧಿಗಳು ಹಲವು ಅಧಿಕಾರಗಳನ್ನು ಪಡೆದುಕೊಂಡಿದ್ದಾರೆ. ಮನೆಯೊಳಗೆ ಬರುತ್ತಿದ್ದಂತೆ ಇವರಿಂದ ಮಲ್ಲಮ್ಮ, ಅಭಿಷೇಕ್ ಮತ್ತು ಕಾಕ್ರೋಚ್ ಸುಧಿ ನಾಮಿನೇಷನ್‌ ಪ್ರಕ್ರಿಯೆಯಿಂದ ಸೇವ್ ಆಗಿದ್ದರು. ಹಾಗೇ ವೈಲ್ಡ್‌ಕಾರ್ಡ್ ಮೂವರು ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಂತಿಲ್ಲ ಅಂತ ಬಿಗ್‌ಬಾಸ್ ಆದೇಶಿಸಿದ್ದರು.

26
ಕ್ಯಾಪ್ಟನ್ಸಿ ಟಾಸ್ಕ್‌

ಇದೆಲ್ಲದರ ಜೊತೆ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಇಬ್ಬರನ್ನು ಹೊರಗಿಡುವ ಅಧಿಕಾರ ಪಡೆದುಕೊಂಡಿದ್ದರು. ಮೂವರು ಚರ್ಚಿಸಿ ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ಅವರನ್ನು ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲ ಕ್ಯಾಪ್ಟನ್ಸಿ ಟಾಸ್ಕ್‌ನ ತಂಡಗಳಿಗೆ ಈ ಮೂವರೇ ಲೀಡರ್ ಆಗಿದ್ದಾರೆ. ಇದೀಗ ಬಿಗ್‌ಬಾಸ್ ನೀಡಿದ ಮತ್ತೊಂದು ಟ್ವಿಸ್ಟ್‌ನಿಂದ ಮನೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ರಿಷಾ ಮತ್ತು ರಘು ವಿರುದ್ಧ ಅವರ ತಂಡದವರು ತಿರುಗಿ ಬಿದ್ದಿದ್ದಾರೆ.

36
ಬಿಗ್‌ಬಾಸ್ ನೀಡಿದ ಟ್ವಿಸ್ಟ್ ಏನು?

ತಂಡದ ಕ್ಯಾಪ್ಟನ್ ಆಗಿರುವ ಮೂವರಿಗೂ ವಿಶೇಷ ಆಯ್ಕೆಯೊಂದನ್ನು ಬಿಗ್‌ಬಾಸ್ ನೀಡಿದ್ರು. ತಮ್ಮ ಮುಂದಿರುವ ಪವರ್ ಇರೋ ನಾಣ್ಯ ತೆಗೆದುಕೊಂಡ್ರೆ ನೇರವಾಗಿ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆಯಾಗುತ್ತೀರಿ. ಆದ್ರೆ ನಿಮ್ಮ ತಂಡದ ಸದಸ್ಯರೆಲ್ಲರೂ ಆಟದಿಂದ ಹೊರಗುಳಿಯುತ್ತಾರೆ ಎಂದು ಬಿಗ್‌ಬಾಸ್ ಹೇಳುತ್ತಾರೆ. ಮೂವರ ಪೈಕಿ ರಿಷಾ ಮತ್ತು ರಘು ವಿಶೇಷ ಪವರ್ ಇರೋ ನಾಣ್ಯ ಸ್ವೀಕರಿಸುತ್ತಾರೆ. ಸೂರಜ್ ಮಾತ್ರ ತಮ್ಮ ತಂಡದೊಂದಿಗೆ ನಿಲ್ಲುತ್ತಾರೆ.

46
ರಿಷಾ ಮತ್ತು ರಘು ವಿರುದ್ಧ ಆಕ್ರೋಶ?

ಕನ್ಫೆಷನ್ ರೂಮ್‌ನಲ್ಲಿ ನಡೆದ ಈ ಪ್ರಕ್ರಿಯೆಯನ್ನು ಮನೆ ಮಂದಿಯೆಲ್ಲರೂ ಲಿವಿಂಗ್ ರೂಮ್‌ನಲ್ಲಿ ಟಿವಿ ಮೂಲಕ ನೋಡಿದ್ದಾರೆ. ಮೂವರು ಕನ್ಫೆಷನ್ ರೂಮ್‌ನಿಂದ ಹೊರ ಬರುತ್ತಿದ್ದಂತೆಮ ರಿಷಾ ಮತ್ತು ರಘು ವಿರುದ್ಧ ಅವರ ತಂಡದ ಆಟಗಾರರು ಮುಗಿಬಿದ್ದಿದ್ದಾರೆ. ತಮ್ಮನ್ನು ಆಟದಲ್ಲಿ ಉಳಿಸಿಕೊಂಡಿದ್ದ ಸೂರಜ್ ತಂಡದ ಸದಸ್ಯರು ಖುಷಿಯಾಗಿದ್ದಾರೆ.

56
ಯಾರು ಏನು ಹೇಳಿದ್ರು?

ನೀವು ಒಬ್ಬರು ಕ್ಯಾಪ್ಟನ್ಸಿ ಟಾಸ್ಕ್ ಹೋದ್ರೆ ನಮಗೇನು ಸಿಕ್ತು ಎಂದು ಧನುಷ್ ಪ್ರಶ್ನೆ ಮಾಡಿದ್ದಾರೆ. ನೀವು ತುಂಬಾ ಸ್ವಾರ್ಥಿಯಾಗಿದ್ದು, ಇಡೀ ತಂಡವನ್ನ ಅರ್ಧದಲ್ಲಿಯೇ ಬಿಟ್ಟು ಹೋಗಿದ್ರಿ ಎಂದು ರಿಷಾ ವಿರುದ್ಧ ರಕ್ಷಿತಾ ವಾಗ್ದಾಳಿ ನಡೆಸಿದ್ದಾರೆ. ಟೀಂ ಗೆಲ್ಲಿಸುವೆ ಎಂಬುವುದು ಕ್ಯಾಪ್ಟನ್‌ಗಿರೋ ಜವಾಬ್ದಾರಿ ಎಂದು ಗಿಲ್ಲಿ ನಟ ಹೇಳಿದ್ದಾರೆ. ಇಬ್ಬರ ನಿರ್ಧಾರ ಮಾತ್ರ ಯಾಕೆ ಹೀಗಾಯ್ತು ಎಂದು ಅಶ್ವಿನಿ ಗೌಡ ಸಹ ಪ್ರಶ್ನಿಸಿದ್ದಾರೆ. ಪವರ್ ನಾಣ್ಯ ಬಿಟ್ಟುಬಂದ ಸೂರಜ್ ಒಬ್ಬ ಫೂಲ್ ಅಂತಾ ರಿಷಾ ಹೇಳಿದ್ದಾರೆ.

ಇದನ್ನೂ ಓದಿ: BBK 12: ಕಾಲು ಮುಗಿತೀನಿ ಅಂದ್ರು ಬಿಡಲಿಲ್ಲ: ಗಿಲ್ಲಿ ನಟನಿಗೆ ಶಾಕ್ ಕೊಟ್ಟ ಸ್ಪರ್ಧಿಗಳು

66
ಬಿಗ್‌ಬಾಸ್ ವೀಕ್ಷಕರು ಹೇಳಿದ್ದೇನು?

ಇಂದಿನ ಪ್ರೋಮೋ ನೋಡಿರುವ ವೀಕ್ಷಕರು, ಸೂರಜ್ ಎಲ್ಲರ ಮನಸ್ಸನ್ನ ಗೆದ್ದಿದ್ದಾರೆ. ಸೂರಜ್ ನಿರ್ಧಾರ ಸರಿಯಾಗಿ ಇದೆ. ಸೂರಜ್ ನಿಮ್ಮ ಈ ಒಳ್ಳೆತನ ಮುಂದಿನ ದಿನಗಳಲ್ಲಿ ನಿಮಗೂ ಒಳ್ಳೆಯದಾಗಲಿ ಎಲ್ಲರ ಮನಸ್ಸು ಗೆದ್ದಿಬಿಟ್ಟೆ ಸೂರಜ್. ಹೌದು ಹುಲಿಯಾ! ಈ ವಾರದ ಕಿಚ್ಚನ ಚಪ್ಪಾಳೆ ಸೂರಜ್. ಸೂರಜ್ ನಿರ್ಧಾರ ಸರಿಯಾಗಿ ಇದೆ ಇನ್ನು ರಕ್ಷಿತಾ ದಿನೇ ದಿನೇ ಆಟ ಚೆನ್ನಾಗಿ ಆಡ್ಕೊಂಡು ಬರ್ತಿದಾಳೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸುಳ್ಳು ಹೇಳಿ ತಗ್ಲಾಕೊಂಡ ಗಿಲ್ಲಿಗೆ ಚಳಿ ಬಿಡಿಸಿದ ಮಲ್ಲಮ್ಮ; ಹಿಂದಿದ್ಯಾ ಧ್ರುವಂತ್ ಕೈವಾಡ?

Read more Photos on
click me!

Recommended Stories