Bhagyalakshmi Serial ಊಹಿಸದ ರೋಚಕ ಟ್ವಿಸ್ಟ್​: ಪ್ರಪೋಸ್​ ಮಾಡಿದ ಆದಿನಾ? ಕಾಲು ಹಿಡಿದ ತಾಂಡವ್​ನಾ? ಚಾಯ್ಸ್​ ಯಾರು?

Published : Dec 29, 2025, 12:23 PM IST

ಸಾವಿರ ಕಂತು ಪೂರೈಸಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ರೋಚಕ ತಿರುವು ಬಂದಿದೆ. ಒಂದೆಡೆ ಆದಿ ಪ್ರೀತಿ ನಿವೇದಿಸಿದರೆ, ಇನ್ನೊಂದೆಡೆ ಪಶ್ಚಾತ್ತಾಪದಿಂದ ತಾಂಡವ್ ಕ್ಷಮೆ ಕೇಳಿದ್ದಾನೆ. ಈ ಧರ್ಮಸಂಕಟದಲ್ಲಿ ಸಿಲುಕಿರುವ ಭಾಗ್ಯ ಯಾರನ್ನು ಆಯ್ಕೆ ಮಾಡುತ್ತಾಳೆ ಎನ್ನುವುದು ಕಥೆಯ ತಿರುಳು.

PREV
17
ಯಾರೂ ಊಹಿಸಿದ ಟ್ವಿಸ್ಟ್​

ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಒಂದು ಸಾವಿರದ ಕಂತು ಪೂರೈಸಿರುವ ಬೆನ್ನಲ್ಲೇ ಯಾರೂ ಊಹಿಸದ ರೋಚಕ ಟ್ವಿಸ್ಟ್​ ಒಂದು ಧಾರಾವಾಹಿಗೆ ಸಿಕ್ಕಿದೆ. ಆದಿನಾ, ತಾಂಡವ್​ನಾ ಎನ್ನುವ ಆಯ್ಕೆ ಮಾಡುವ ಪರಿಪಾಟಲು ಈಗ ಭಾಗ್ಯಳಿಗೆ ಬಂದಿದೆ.

27
ತಾಂಡವ್​ ಟಾರ್ಚರ್​

ಹೆಜ್ಜೆ ಹೆಜ್ಜೆಗೂ ಎಮ್ಮೆ, ಕತ್ತೆ ಎನ್ನುತ್ತಲೇ ಇನ್ನಿಲ್ಲದಂತೆ ಭಾಗ್ಯಳಿಗೆ ಟಾರ್ಚರ್​ ಕೊಟ್ಟವ ತಾಂಡವ್​. ಅದೆಷ್ಟರಮಟ್ಟಿನ ಟಾರ್ಚರ್​ ಎಂದರೆ ವೀಕ್ಷಕರು ಅಯ್ಯೋ ನಿಲ್ಲಿಸಿ ಎನ್ನುವಷ್ಟರ ಮಟ್ಟಿಗೆ ಅತಿರೇಕದ ವರ್ತನೆಯಾಗಿತ್ತು ತಾಂಡವ್​ದು. ಆದರೆ ಅದೆಲ್ಲವನ್ನೂ ಮೀರಿ ಭಾಗ್ಯ ಎದ್ದು ನಿಂತಿದ್ದಾಳೆ.

37
ಆದಿ ಮನದಲ್ಲಿ ಪ್ರೀತಿ

ಅವಳ ಸಕ್ಸಸ್​ಗೆ ಒಂದು ಹಂತದಲ್ಲಿ ಆದಿ ಕೂಡ ಕಾರಣನಾದ. ಆದಿ ಮತ್ತು ಭಾಗ್ಯ ಒಂದಾಗಬೇಕು ಎನ್ನುವುದು ಅತ್ತೆ ಕುಸುಮಾಳ ಆಸೆ. ಅದಕ್ಕಾಗಿ ಆಕೆ ಮಾಡಿದ, ಮಾಡುತ್ತಿರುವ ಪ್ರಯತ್ನ ಅಷ್ಟಿಷ್ಟಲ್ಲ. ಒಂದು ಹಂತದಲ್ಲಿ ಆದಿಯ ಮನಸ್ಸಿನಲ್ಲಿ ಭಾಗ್ಯಳ ಮೇಲೆ ಪ್ರೀತಿ ಮೂಡುವ ಹಾಗೆ ಮಾಡಿದ್ದೂ ಅವಳೇ.

47
ಒಳ್ಳೆಯ ಸ್ನೇಹಿತ

ಆದಿಗೆ ಭಾಗ್ಯಳ ಮೇಲೆ ಲವ್​ ಆಗಿದೆ. ಆದರೆ ಭಾಗ್ಯಳಿಗೆ ಆದಿ ಒಳ್ಳೆಯ ಸ್ನೇಹಿತ ಅಷ್ಟೇ. ಹಾಗೂ ಹೀಗೂ ಮಾಡಿ ಇದೀಗ ಆದಿ ಧೈರ್ಯದಿಂದ ಭಾಗ್ಯಳಿಗೆ ಪ್ರಪೋಸ್​ ಮಾಡಿಯೇ ಬಿಟ್ಟಿದ್ದಾನೆ.

57
ಕಾಲು ಹಿಡಿದ ತಾಂಡವ್​

ಆದರೆ, ಎಲ್ಲವೂ ಅಂದುಕೊಂಡಂತೆ ಇಲ್ಲ. ಏಕೆಂದ್ರೆ ಅತ್ತ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿರೋ ತಾಂಡವ್​ ಭಾಗ್ಯಳ ಕಾಲು ಹಿಡಿದು ಕ್ಷಮೆ ಕೋರಿದ್ದಾನೆ. ಎಲ್ಲವನ್ನೂ ಸರಿಮಾಡ್ತೇನೆ. ಕ್ಷಮಿಸಿಬಿಡು ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾನೆ.

67
ಧರ್ಮಸಂಕಟದಲ್ಲಿ ಭಾಗ್ಯ

ಈಗ ಧರ್ಮಸಂಕಟದಲ್ಲಿ ಭಾಗ್ಯ ಸಿಲುಕಿದ್ದಾಳೆ. ಮತ್ತೆ ಬಂದಿರೋ ಗಂಡ ತಾಂಡವ್​ನಾ, ಪ್ರೀತಿಯನ್ನು ಅರಸಿ ಬಂದಿರೋ ಆದಿನಾ? ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಪ್ರಮೇಯ ಅವಳಿಗೆ ಬಂದಿದೆ. ಭಾಗ್ಯಳ ನಿರ್ಧಾರ ಏನು?

77
ಮುಂದೇನು?

ಯಾವುದೇ ಕಾರಣಕ್ಕೂ ತಾಂಡವ್​ನ ಹತ್ತಿರ ಸೇರಿಸಬೇಡ ಎನ್ನುತ್ತಿದ್ದಾರೆ ವೀಕ್ಷಕರು. ಅಷ್ಟಕ್ಕೂ ಶ್ರೇಷ್ಠಾಳನ್ನು ತಾಂಡವ್​ ಮದುವೆಯಾಗಿರುವಾಗ ಬೇರೊಬ್ಬ ಹೆಣ್ಣಿಗೆ ಅನ್ಯಾಯ ಆಗಲು ಭಾಗ್ಯ ಬಿಡುವುದಿಲ್ಲ ಎನ್ನುವುದೂ ಸತ್ಯವೇ. ಹಾಗಿದ್ದರೆ ಮುಂದೇನು?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories