Published : Feb 08, 2026, 03:44 PM ISTUpdated : Feb 08, 2026, 03:49 PM IST
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಈಗ ಭಾಗ್ಯ ಮನೆಗೆ ಬಂದು ಕ್ಷಮಿಸು ಎಂದು ಭಿಕ್ಷೆ ಬೇಡುತ್ತಿದ್ದಾನೆ. ಎರಡನೇ ಮದುವೆ ಯೋಚನೆಯಲ್ಲಿದ್ದ ಭಾಗ್ಯಗೆ ಈಗ ತಾಂಡವ್‌ನನ್ನು ಕ್ಷಮಿಸಬೇಕಾ? ಆದಿಯನ್ನು ಮದುವೆ ಆಗಬೇಕಾ ಎಂಬ ಪ್ರಶ್ನೆ ಬಂದಿದೆ.
ಎರಡನೇ ಮದುವೆ ಆಗಿದ್ದು, ಮೊದಲ ಪತ್ನಿ ಮಕ್ಕಳಿಗೆ ಮೋಸ ಮಾಡಿದ್ದು, ಮನೆ ಕಿತ್ತುಕೊಂಡಿದ್ದು, ಅಪ್ಪ-ಅಮ್ಮನನ್ನು ದೂರ ಮಾಡಿದ್ದು ಎಲ್ಲವೂ ತಪ್ಪು ಎಂದು ತಾಂಡವ್‌ಗೆ ಅರ್ಥ ಆಗಿದೆ. ಹೀಗಾಗಿ ಅವನು ಭಾಗ್ಯ ಮನೆಗೆ ಬಂದು ಕ್ಷಮೆ ಕೇಳುತ್ತಿದ್ದಾನೆ.
26
ತಾಂಡವ್ ಹೊರಗಡೆ ಹೋಗೋಕೆ ತನ್ವಿ ಬಿಡ್ತಿಲ್ಲ
ತನ್ವಿಗೆ ತಂದೆ ಕಂಡರೆ ತುಂಬ ಇಷ್ಟ. ಬದಲಾಗಿರೋ ಅಪ್ಪ ಮನೆಗೆ ಬಂದಿದ್ದು, ಈಗ ಎಲ್ಲೂ ಖುಷಿಯಾಗಿರಬಹುದು ಎಂದು ಅವಳು ಆಲೋಚಿಸುತ್ತಿದ್ದಾಳೆ. ತನ್ನ ಯಾಯಿ ಒಂಟಿ ಆಗ್ತಾಳೆ ಎಂದು ಅವಳು ಅಂದುಕೊಂಡಿದ್ದಾಳೆ.
36
ತಾಯಿಗೆ ಮನವಿ ಮಾಡಿದ ತನ್ವಿ
ಅಪ್ಪನನ್ನು ನೀನು ಯಾಕೆ ಕ್ಷಮಿಸೋದಿಲ್ಲ, ತಪ್ಪು ಮಾಡುವುದು ಸಹಜ. ತಿದ್ದಿ ನಡೆಯಬೇಕು. ಒಂದು ಸಲ ಅಪ್ಪನನ್ನು ಕ್ಷಮಿಸಿ, ಅಪ್ಪ ತುಂಬ ಬದಲಾಗಿದ್ದಾರೆ ಎಂದು ತನ್ವಿ ತನ್ನ ತಾಯಿಗೆ ಮನವಿ ಮಾಡಿದ್ದಾಳೆ.
ಏನಾಗ್ತಿದೆಯೋ ಅದನ್ನು ನೀನು ಹೊರಗಡೆಯಿಂದ ನೋಡಬಹುದು. ಆದರೆ ಒಳಗಡೆ ಏನಾಗ್ತಿದೆ ಎನ್ನೋದು ನನಗೆ ಮಾತ್ರ ಗೊತ್ತಿದೆ. ನಾನು, ನಿನ್ನನ್ನು ಚೆನ್ನಾಗಿ ನೋಡಿಕೊಂಡಿಲ್ವಾ? ಯಾಕೆ ಹೀಗೆ ಮಾಡ್ತಿದೀಯಾ? ಎಂದು ಭಾಗ್ಯ ಮಗಳಿಗೆ ಮರು ಪ್ರಶ್ನೆ ಹಾಕಿದ್ದಾಳೆ.
56
ಒಂಟಿಯಾಗಿರುವೆ
ಆದಿ ಜೊತೆ ಮಗಳು ಭಾಗ್ಯ ಮದುವೆ ಆಗೋದು ಸುನಂದಾಗೆ ಇಷ್ಟ ಇಲ್ಲ. ಅಪ್ಪ-ಅಮ್ಮ ಒಂದಾಗಲಿ ಎಂದು ಮಗಳು ತನ್ವಿ ಬಯಸುತ್ತಿದ್ದಾಳೆ. ಇಷ್ಟುದಿನ ಗೊಂದಲದಲ್ಲಿದ್ದ ಭಾಗ್ಯ ಈಗ ಆದಿಯನ್ನು ಒಪ್ಪಿಕೊಳ್ಳಬೇಕು ಎಂದುಕೊಳ್ಳುತ್ತಿರುವಾಗಲೇ ತಾಂಡವ್ ಎಂಟ್ರಿಯಾಗಿದೆ. ಇಷ್ಟುದಿನ ನರಕ ಕೊಟ್ಟಿದ್ದ ತಾಂಡವ್ ಈಗ ಕ್ಷಮೆ ಬೇಡುತ್ತಿದ್ದಾನೆ. ತನ್ವಿ ಬಳಿ ಭಾಗ್ಯ ನಾನು ಒಂಟಿಯಾಗಿ ಬದುಕ್ತೀನಿ, ನನಗೆ ಯಾರೂ ಬೇಡ ಎಂದಿದ್ದಾಳೆ.
66
ಭಾಗ್ಯ ನಿರ್ಧಾರ ಏನು?
ತಪ್ಪು ಮಾಡಿ ಬದಲಾದ ತಾಂಡವ್‌ನನ್ನು ಕ್ಷಮಿಸದೆ, ಭಾಗ್ಯ ಆದಿಯನ್ನು ಮದುವೆಯಾದರೆ ಕೆಲವರು ಒಪ್ಪೋದಿಲ್ಲ. ಇನ್ನೂ ಕೆಲವರು ತಾಂಡವ್‌ನನ್ನು ನಂಬಲೇಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ತಾಂಡವ್‌ನನ್ನು ಮದುವೆಯಾದ ದಿನ ತನ್ನ ತನವನ್ನು ಕಳೆದುಕೊಂಡು ಒಂಟಿಯಾದ ಭಾಗ್ಯ ಈಗ ಹೀಗೆ ಬದುಕುವುದಾಗಿ ಹೇಳುತ್ತಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.