Bhagyalakshmi Serial: ಅತ್ತು ಕರೆದು, ತಾಂಡವ್ ಕಾಲು ಹಿಡ್ಕೊಂಡ್ರೂ ಇದೇ ಕಾರಣಕ್ಕೆ ಕ್ಷಮಿಸಲ್ಲ ಎಂದ ಭಾಗ್ಯ

Published : Feb 08, 2026, 03:18 PM IST

Bhagyalakshmi kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಈಗ ಸಂಪೂರ್ಣ ಬದಲಾಗಿದ್ದಾನೆ. ಭಾಗ್ಯಳ ಬಳಿ ಬಂದು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಿದ್ದಾನೆ. ಎರಡನೇ ಮದುವೆ ಆಗೋ ಆಲೋಚನೆಯಲ್ಲಿದ್ದ ಭಾಗ್ಯ ಈಗ ತಾಂಡವ್‌ನನ್ನು ದೂರ ಮಾಡಿದ್ದಾಳೆ. 

PREV
15
ತಾಂಡವ್‌ ಮಾಡಿರೋ ತಪ್ಪು

ಭಾಗ್ಯ ಜೊತೆ ಹದಿನಾರು ವರ್ಷ ಸಂಸಾರ ಮಾಡಿದ್ದ, ತಾಂಡವ್‌ ಬೇರೆ ಮದುವೆಯಾದನು. ಯಾರು ಎಷ್ಟೇ ಹೇಳಿದರೂ ಕೂಡ ಅವನು ಕೇಳದೆ, ಮಕ್ಕಳ ಮುಂದೆ ಮದುವೆಯಾದನು. ಈಗ ಅವನಿಗೆ ಎರಡನೇ ಪತ್ನಿ ಶ್ರೇಷ್ಠಳಿಂದ ಜೀವನ ಹಾಳಾಗಿದೆ ಎಂದು ಅರ್ಥ ಆಗಿದೆ. ಹೀಗಾಗಿ ಅವನು ಭಾಗ್ಯಳಿಗೆ ಕ್ಷಮೆ ಕೇಳಿದ್ದಾನೆ.

25
ಜ್ಞಾನೋದಯ ಆಗಿದೆ!

ಶ್ರೇಷ್ಠ ಸರಿ ಇಲ್ಲ, ಅವಳಿಂದ ನಾನು ಸಿಕ್ಕಾಪಟ್ಟೆ ತಪ್ಪುಗಳನ್ನು ಮಾಡಿದೆ, ಹೆಂಡ್ತಿ-ಮಕ್ಕಳು-ಅಪ್ಪ ಅಮ್ಮನನ್ನು ದೂರ ಮಾಡಿಕೊಂಡೆ, ಬೀದಿಗೆ ಬಿದ್ದೆ. ನನಗೆ ಎಲ್ಲಿಯೂ ಯಾರೂ ಕೂಡ ಗೌರವ ಕೊಡ್ತಿಲ್ಲ. ಭಾಗ್ಯ ನಾನು ಹೇಳಿದಂತೆ ಕೇಳುತ್ತಿದ್ದಳು, ಒಂದು ದಿನವೂ ಅವಳು ತಿರುಗಿ ಉತ್ತರ ಕೊಡುತ್ತಿರಲಿಲ್ಲ. ಆದರೆ ಶ್ರೇಷ್ಠ ಮಾತ್ರ ಯಾವ ವಿಷಯದಲ್ಲೂ ಭಾಗ್ಯಗೆ ಮ್ಯಾಚ್‌ ಆಗೋದಿಲ್ಲ ಎಂದು ಅವನಿಗೆ ಅರ್ಥ ಆಗಿದೆ.

35
ಕೊನೆಗೂ ಸಾಥ್‌ ಕೊಟ್ಟಿದ್ದು ಭಾಗ್ಯ ಮಾತ್ರ

ಶ್ರೇಷ್ಠ ಸರಿ ಇಲ್ಲ ಎಂದು ತಿಳಿದು, ತಾಂಡವ್‌ ಮನೆಯಿಂದ ಹೊರಗಡೆ ಬಂದಿದ್ದಾನೆ. ಊಟ-ತಿಂಡಿ, ಆಶ್ರಯಕ್ಕೋಸ್ಕರ ಅವರು ಅಲೆದಾಡಿದ್ದಾನೆ.

45
ಅಂಗಲಾಚಿ ಕ್ಷಮೆ ಕೇಳಿದ ತಾಂಡವ್

ನಾನು ತುಂಬ ತಪ್ಪು ಮಾಡಿದ್ದೀನಿ, ನಾನು ಬದಲಾಗಿದ್ದೀನಿ, ನನ್ನ ತಪ್ಪನ್ನು ನಾನು ಸಮರ್ಥಿಸಿಕೊಳ್ಳೋದಿಲ್ಲ, ಆದರೆ ಕ್ಷಮಿಸು ಎಂದು ತಾಂಡವ್‌ ಈಗ ಭಾಗ್ಯ ಮನೆಗೆ ಬಂದು ಬೇಡಿಕೊಳ್ಳುತ್ತಿದ್ದಾನೆ. ಮಗಳು ತನ್ವಿ, ಭಾಗ್ಯ ತಾಯಿ ಸುನಂದಾ ಬಿಟ್ಟು ಬೇರೆ ಯಾರೂ ಕೂಡ ತಾಂಡವ್‌ನನ್ನು ಆದರಿಸುತ್ತಿಲ್ಲ.

55
ಭಾಗ್ಯ ಯಾಕೆ ತಾಂಡವ್‌ನನ್ನು ಕ್ಷಮಿಸೋದಿಲ್ಲ

ಯಾವ ತಪ್ಪಿಗೆ ಕ್ಷಮಿಸಬೇಕಾ? ನನ್ನ ಬಿಟ್ಟು ಹೋದ ತಪ್ಪಿಗಾ? ಮಕ್ಕಳನ್ನು ಬಿಟ್ಟು ಹೋದ ತಪ್ಪಿಗಾ? ಜೇನುಗೂಡಿನ ಹಾಗೆ ಇದ್ದ ಕುಟುಂಬಕ್ಕೆ ಶ್ರೇಷ್ಠ ಎನ್ನೋ ಕಲ್ಲಿನಿಂದ ಹೊಡೆದು ಛಿದ್ರ ಮಾಡಿದ ತಪ್ಪಿಗಾ? ಮನೆ ಕಿತ್ತುಕೊಂಡ ತಪ್ಪಿಗಾ? ಎಲ್ಲದಕ್ಕೂ ಮೀರಿ ನನ್ನ ಜೀವನವನ್ನು ಹಾಳು ಮಾಡಿದ ತಪ್ಪಿಗಾ? ಎಲ್ಲದಕ್ಕೂ ಮಗ ಎಂದು ಹೇಳುತ್ತಿದ್ದ ಅಪ್ಪ-ಅಮ್ಮನನ್ನು ದೂರ ಮಾಡಿರೋ ತಪ್ಪಿಗಾ? ನಿಮ್ಮ ಯಾವ ತಪ್ಪನ್ನು ನಾನು ಕ್ಷಮಿಸಬೇಕು. ನಿಮ್ಮ-ನಮ್ಮ ಸಂಬಂಧ ಯಾವತ್ತಿಗೋ ಮುಗಿದು ಹೋಗಿದೆ ಎಂದು ಭಾಗ್ಯ, ಕಡ್ಡಿ ತುಂಡು ಮಾಡಿದಂತೆ ತಾಂಡವ್‌ಗೆ ಹೇಳಿದ್ದಾಳೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories