ಮಾಡೋದೆಲ್ಲಾ ಮಾಡ್ಬಿಟ್ಟು ಹ್ಹಿ, ಹ್ಹೀ ನಕ್ಕಬಿಟ್ರು: ಇಬ್ಬರಿಗೂ ಈ ವಾರ ಕ್ಲಾಸ್ ತೆಗೆದುಕೊಳ್ಳಬೇಕಲೇ ಬೇಕು!

Published : Oct 17, 2025, 10:31 PM IST

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಸೇರಿ ರಕ್ಷಿತಾ ಶೆಟ್ಟಿಯನ್ನು ಗೆಜ್ಜೆ ಸದ್ದಿನ ವಿಚಾರವಾಗಿ ಗುರಿಮಾಡಿದ್ದಾರೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ರಕ್ಷಿತಾ, ಇಬ್ಬರನ್ನೂ 'ನಾಗವಲ್ಲಿ' ಎಂದು ಕರೆದು ಅವರ ಸುಳ್ಳುಗಳನ್ನು ಬಯಲಿಗೆಳೆದಿದ್ದಾರೆ.

PREV
16
ಅಶ್ವಿನಿ ಗೌಡ ಮತ್ತು ಜಾನ್ವಿ

ಈ ವಾರದಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿ ಮನೆಯ ಪುಟ್ಟಿ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿರೋದು ಕಂಡು ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಇಬ್ಬರಿಗೂ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಅಶ್ವಿನಿ ಗೌಡ ಮತ್ತು ಜಾನ್ವಿ ವಿರುದ್ಧ ಇತರೆ ಮನೆಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

26
ಗೆಜ್ಜೆ ಸೌಂಡ್

ಮನೆಯಲ್ಲಿ ಗೆಜ್ಜೆ ಸೌಂಡ್ ಮಾಡಿ, ನಂತರ ಆ ಅಪವಾದವನ್ನು ರಕ್ಷಿತಾ ಶೆಟ್ಟಿ ಮೇಲೆ ಹಾಕಲಾಗಿತ್ತು. ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ರೂ ಆಕೆ ಮೇಲೆಯೇ ಅಶ್ವಿನಿ ಗೌಡ ಮತ್ತು ಜಾನ್ವಿ ಗೂಬೆ ಕೂರಿಸುವ ಕೆಲಸ ಮಾಡಿದರು. ಮನೆಯಿಂದ ಹೊರೆಗೆ ಹೋಗುವ ಸ್ಪರ್ಧಿಯ ನಾಮಿನೇಟ್ ಮಾಡುವ ಸಂದರ್ಭದಲ್ಲಿ ಗಿಲ್ಲಿ ನಟ ಇದೇ ಕಾರಣವನ್ನು ನೀಡಿ ಜಾನ್ವಿ ಹೆಸರು ಹೇಳಿದ್ದರು.

36
ಎಲಿಮಿನೇಟ್

ಇದೇ ಪ್ರಕ್ರಿಯೆಯಲ್ಲಿಯೇ ಜಾನ್ವಿಯವರನ್ನು ರಕ್ಷಿತಾ ಶೆಟ್ಟಿ ಎಲಿಮಿನೇಟ್ ಮಾಡಿದ್ದರು. ನಂತರ ಇದಕ್ಕೆ ಪ್ರತಿಯಾಗಿ ರಕ್ಷಿತಾ ಹೆಸರು ಹೇಳಿದ್ರು. ನಾನು ಎಲಿಮಿನೇಟ್ ಮಾಡಿದ್ದಕ್ಕೆ ಹೀಗೆ ಮಾಡ್ತಿದ್ದಾರೆ ಎಂದು ಅಲ್ಲಿಯೇ ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಜಾನ್ವಿ ಪ್ರಾಮಾಣಿಕವಾಗಿ ನಡೆದುಕೊಳ್ಳದೇ ಸೇಫ್ ಗೇಮ್ ಆಡ್ತಿದ್ದಾರೆ ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಪ್ರಕ್ರಿಯೆ ಮುಗಿದ ಬಳಿಕ ಇದೇ ವಿಷಯವಾಗ ಜಗಳವೂ ನಡೆಯುತ್ತದೆ.

46
ಬಾಯಿ ಕೊಳಕು ಮಾಡಲು ಸಾಧ್ಯವಿಲ್ಲ

ನೀವು ಚೈಲ್ಡ್, ನಿಮ್ಮ ಕಾರಣಗಳನ್ನು ನೋಡಿದ್ದೇನೆ. ನಿಮ್ಮ ವಿಷಯವನ್ನು ಮಾತನಾಡಿ ನನ್ನ ಬಾಯಿ ಕೊಳಕು ಮಾಡಲು ಸಾಧ್ಯವಿಲ್ಲ. ಬಿಗ್‌ಬಾಸ್ ಅನ್ನೋದು ಕೇವಲ ಟಾಸ್ಕ್ ಆಡೋದು ಮಾತ್ರವಲ್ಲ. ನೀವು ಹೇಳಿದಂತೆ ನಾನು ಮಾಡಲ್ಲ. ಬೆನ್ನ ಹಿಂದೆ ಚೂರಿ ಹಾಕುವ ದೊಡ್ಡ ನಾಗವಲ್ಲಿ ನೀವು ಎಂದು ಜಾನ್ವಿಗೆ ರಕ್ಷಿತಾ ಶೆಟ್ಟಿ ಕ್ಲಾಸ್ ತೆಗೆದುಕೊಂಡರು.

ಇದನ್ನೂ ಓದಿ: Bigg Bossನಲ್ಲಿ ನಡುರಾತ್ರಿ ಲೇಡೀಸ್​ ಮಾರಾಮಾರಿ! ರೌದ್ರರೂಪ ತೋರಿದ್ರು, ನಾಗವಲ್ಲಿ ಅವತಾರ ಎತ್ತಿದ್ರು - ಆಗಿದ್ದೇನು?

56
ಚಳಿ ಬಿಡಿಸಿದ ರಕ್ಷಿತಾ

ಎರಡು ದಿನ ಹಿಂದೆ ನನ್ನನ್ನು ನಾಗವಲ್ಲಿ ಎಂದು ಹೇಳಿ ಅಪಮಾನ ಮಾಡಿದರು. ಗೆಜ್ಜೆ ಸೌಂಡ್ ಮಾಡ್ತಾರೆ. ಇಷ್ಟು ಸುಳ್ಳು ಹೇಳಿದ್ರೂ ಎಷ್ಟು ಕಾನ್ಫಿಡೆಂಟ್ ಆಗಿದ್ದೀರಿ. ನಾನು ಟಾಯ್ಲೆಟ್‌ಗೆ ಎಷ್ಟು ಗಂಟೆಗಾದ್ರೂ ಹೋಗುತ್ತೇನೆ. ಇದು ನಿಮ್ಮ ಮನೆಯ ವಾಶ್‌ರೂಮ್ ಆಲ್ಲ. ನಿಮ್ಮ ಜೀವನವೇ ಸುಳ್ಳುಗಳಿಂದ ತುಂಬಿದೆ. ಮನೆಯಿಂದ ಹೊರಗೆ ಹೋದ್ಮೇಲೆ ನಿಮಗೆ ಖಂಡಿತ ಗೊತ್ತಾಗುತ್ತದೆ ಎಂದು ಇಬ್ಬರಿಗೂ ರಕ್ಷಿತಾ ಶೆಟ್ಟಿ ಚಳಿ ಬಿಡಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12 ಮನೆಯಲ್ಲಿ ದಿಢೀರ್ ಪತ್ರಿಕಾಗೋಷ್ಠಿ; ಪ್ರಶ್ನೆ ಕೇಳಿ ಬೆಚ್ಚಿಬಿದ್ದ ರಕ್ಷಿತಾ ಶೆಟ್ಟಿ!

66
ತಪ್ಪು ಒಪ್ಪಿಕೊಳ್ಳದ ಅಶ್ವಿನಿ ಗೌಡ ಮತ್ತು ಜಾನ್ವಿ

ಇಡೀ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿಯೇ ಗೆಜ್ಜೆ ಸದ್ದು ಮಾಡುತ್ತಿರೋದು ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಮನೆ ಸ್ಪರ್ಧಿಗಳೆಲ್ಲರೂ ಈ ಬಗ್ಗೆ ಪರೋಕ್ಷವಾಗಿಯೇ ಹೇಳುತ್ತಿದ್ರೂ ಅಶ್ವಿನಿ ಗೌಡ ಮತ್ತು ಜಾನ್ವಿ ಒಪ್ಪಿಕೊಳ್ಳುತ್ತಿಲ್ಲ. ನಂತರ ಎಲ್ಲರೂ ಮಲಗಿದ ನಂತರ ಅಶ್ವಿನಿ ಮತ್ತು ಜಾನ್ವಿ ತಮ್ಮ ತಪ್ಪು ಕೆಲಸಗಳನ್ನು ನೆನಪು ಮಾಡಿಕೊಂಡು ನಗುತ್ತಾರೆ.

ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಆರಂಭದಲ್ಲಿ ಹೇಟ್ ಮಾಡ್ತಿದ್ದೋರೆಲ್ಲಾ ಈವಾಗ ರಕ್ಷಿತಾ ಶೆಟ್ಟಿ ಫ್ಯಾನ್ಸ್ ಆಗ್ಬಿಟ್ರು!

Read more Photos on
click me!

Recommended Stories