Kaun Banega Crorepati: ದೇಶದ ಭವಿಷ್ಯದ ಮಾತನಾಡಿ ಪ್ರಧಾನಿಗೇ ಪ್ರಶ್ನೆ ಮಾಡಿದ ಗುಜರಾತ್​ ಬಾಲಕ!

Published : Oct 17, 2025, 06:41 PM IST

ಕೌನ್​ ಬನೇಗಾ ಕರೋರ್​ಪತಿ ಮಕ್ಕಳ ಸೀಸನ್​ನಲ್ಲಿ, ರುದ್ರ ಚಿಟ್ಟೆ ಎಂಬ ಬಾಲಕ ತನ್ನ ಹಾಸ್ಯ ಪ್ರಜ್ಞೆ ಮತ್ತು ತಿಳುವಳಿಕೆಯಿಂದ ಗಮನ ಸೆಳೆದಿದ್ದಾನೆ. ಆತ್ಮನಿರ್ಭರ ಭಾರತಕ್ಕಾಗಿ ದೇಶದ ಮೊದಲ ಆಪರೇಟಿಂಗ್ ಸಿಸ್ಟಮ್ ರಚಿಸುವ ತನ್ನ ಗುರಿಯನ್ನು ಬಹಿರಂಗಪಡಿಸಿ, ಅಮಿತಾಭ್ ಬಚ್ಚನ್ ಸೇರಿದಂತೆ ಬೆರಗುಗೊಳಿಸಿದ್ದಾನೆ.

PREV
18
ಮಕ್ಕಳ ಟ್ಯಾಲೆಂಟ್​ಗೆ KBC ವೇದಿಕೆ

ನಟ ಅಮಿತಾಭ್​ ಬಚ್ಚನ್​ ನಡೆಸಿಕೊಡ್ತಿರೋ ಕೌನ್​ ಬನೇಗಾ ಕರೋರ್​ಪತಿ (Kaun Banega Crorepati 17)ನಲ್ಲಿ ಇದೀಗ ಮಕ್ಕಳ ಸೀಸನ್​ ಶುರುವಾಗಿದೆ. ಒಬ್ಬರಿಗಿಂತ ಒಬ್ಬರು ಟ್ಯಾಲೆಂಟ್​ ಮಕ್ಕಳನ್ನು ಈ ಷೋನಲ್ಲಿ ನೋಡಬಹುದು. 

28
ಉದ್ಧಟತನ ತೋರಿದ ಬಾಲಕ

ಕೆಲ ದಿನಗಳ ಹಿಂದಷ್ಟೇ ಅಮಿತಾಭ್​ ಅವರ ಮುಂದೆಯೇ ಉದ್ಧಟತನ ತೋರಿದ್ದ ಬಾಲಕನೊಬ್ಬನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗಿತ್ತು.

38
ದೇಶದ ಭವಿಷ್ಯದ ಬಗ್ಗೆ ಚಿಂತನೆ

ಇದೀಗ ಇನ್ನೋರ್ವ ಬಾಲಕನ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. ಆದರೆ ಈ ಬಾಲಕ ವೈರಲ್​ ಆಗ್ತಿರೋದು ಆತನ ಅಗಾಧ ತಿಳಿವಳಿಕೆ, ದೇಶದ ಭವಿಷ್ಯದ ಬಗೆಗೆ ಚಿಂತನೆ ಮತ್ತು ಆತನ ಹಾಸ್ಯ ಪ್ರಜ್ಞೆಯಿಂದಾಗಿ. ಈತನ ಹೆಸರು ರುದ್ರ ಚಿಟ್ಟೆ. ಪ್ರಧಾನಿಯ ನರೇಂದ್ರ ಮೋದಿ (PM Narendra Modi) ತವರು ಗುಜರಾತ್​ನ ವಡೋದರಾದ ಬಾಲಕ ಈತ. 6ನೇ ಕ್ಲಾಸ್​​ ಓದುತ್ತಿರುವ ಬಾಲಕ ಇವನು.

48
ಹಾಸ್ಯದಲ್ಲಿ ತೇಲಾಡಿಸಿದ ಬಾಲಕ

ಮೊದಲಿಗೆ ಹಲವಾರು ರೀತಿಯಲ್ಲಿ ಹಾಸ್ಯ ಮಾಡಿದ್ದಾನೆ ರುದ್ರ. ನನಗೆ ತಿಂಗಳಿಗೆ 50 ರೂಪಾಯಿ ಮಾತ್ರ ಪಾಕೆಟ್​ ಮನಿ ಕೊಡ್ತಾ ಇದ್ರು. ನನಗೆ ವಡಾಪಾವ್​, ಪಾವ್​ಬಾಜಿ ತಿನ್ನೋದು ಎಂದರೆ ತುಂಬಾ ಆಸೆ. ಆದ್ರೆ ಹಣ ಸಾಕಾಗ್ತಾ ಇರಲಿಲ್ಲ. ಮೊದಲಿಗೆ ಅಪ್ಪ ಆಫೀಸ್​ನಿಂದ ಬಂದಾಗ ಫ್ರೀ ಆಗಿ ಕಾಲು ಒತ್ತುತ್ತಿದ್ದೆ. ಅಮ್ಮ ಅಂಗಡಿಗೆ ಕಳಿಸಿದಾಗ ಫ್ರೀ ಆಗಿ ಹೋಗಿ ಬರ್ತಿದ್ದೆ. ಆದರೆ ಈಗ ಎಲ್ಲದ್ದಕ್ಕೂ ಚಾರ್ಜ್​ ಮಾಡ್ತೇನೆ. ಹಾಗಾಗಿ ಪಾಕೆಟ್​ ಮನಿ ಜಾಸ್ತಿ ಆಗುತ್ತಿದೆ ಎಂದು ತಮಾಷೆ ಮಾಡಿ, ಅಮಿತಾಭ್​ ಬಚ್ಚನ್​ ಸೇರಿ ಎಲ್ಲರನ್ನೂ ನಗಿಸಿದ್ದಾನೆ.

58
ಗುರಿ ಕೇಳಿ ಎಲ್ಲರಿಗೂ ಅಚ್ಚರಿ

ಆರಂಭದಲ್ಲಿ ಹೀಗೆ ಮಾತನಾಡಿದ ಬಾಲಕ ಕೊನೆಗೆ ಈತನ ಗುರಿಯ ಬಗ್ಗೆ ಹೇಳುತ್ತಲೇ ಎಲ್ಲರೂ ಬೆಕ್ಕಸಬೆರಗಾಗಿ ಹೋದರು. ಕೋಡಿಂಗ್ ತನ್ನ ಶಕ್ತಿ ಎಂದು ಹೇಳಿಕೊಂಡ ರುದ್ರ, ಆತ್ಮನಿರ್ಭರ ಭಾರತ್‌ದ ಕನಸಿಗೆ ಅನುಗುಣವಾಗಿ ಭಾರತದ ಮೊದಲ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸುವ ಗುರಿಯನ್ನು ಹೊಂದಿದ್ದೇನೆ ಎಂದಾಗ ಚಪ್ಪಾಳೆಗಳ ಸುರಿಮಳೆಯೇ ಆಯಿತು.

68
ಪ್ರಧಾನಿಗೇ ಸವಾಲೆನ್ನುವ ಪ್ರಶ್ನೆ

2047ರ ವೇಳೆಗೆ ಸ್ವಾತಂತ್ರ್ಯದ ಶತಮಾತೋತ್ಸವದ ಸಂದರ್ಭದಲ್ಲಿ ಅಭಿವೃದ್ಧಿಶೀಲ ರಾಷ್ಟ್ರದ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಅದಕ್ಕೆ ಅನುಗುಣವಾಗಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಆತ್ಮನಿರ್ಭರತೆ ಅಂದರೆ ಸ್ವಾವಲಂಬಿಯಾಗುವತ್ತ ದೇಶ ಮುನ್ನಡೆಯುತ್ತಿದೆ. ರಕ್ಷಣಾ ವಲಯದಲ್ಲಿಯೂ ಆತ್ಮನಿರ್ಭರವಾಗಿರುವ ಭಾರತ ತನ್ನ ತಾಕತ್ತು ಏನೆಂದು ಇಡೀ ಜಗತ್ತಿಗೆ ಆಪರೇಷನ್​ ಸಿಂದೂರ್​ ಸಮಯದಲ್ಲಿ ತೋರಿಸಿದೆ. ಇದೇ ವೇಗಗತಿಯಲ್ಲಿ ಮುನ್ನುಗ್ಗುತ್ತಿರುವ ಭಾರತದ ಅರ್ಥ ವ್ಯವಸ್ಥೆ ಕಳೆದ ಹತ್ತು ದಶಕದಲ್ಲಿಯೇ 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದ್ದು, ಇನ್ನು 3ನೇ ಸ್ಥಾನದ ಗುರಿ ಹೊಂದಿದೆ.

78
ಆತ್ಮನಿರ್ಭರ ಭಾರತ

ಎಲ್ಲಾ ಕ್ಷೇತ್ರಗಳಲ್ಲಿಯೂ ಈ ರೀತಿಯಾಗಿ ಆತ್ಮನಿರ್ಭರತೆ ಇರುವಾಗ, ಸ್ಪ್ಯಾಮ್ ಜಾಹೀರಾತುಗಳನ್ನು ತಪ್ಪಿಸಲು ಸಹಾಯ ಮಾಡುವ ಅಪ್ಲಿಕೇಶನ್ ಅನ್ನು ಅವರು ಪ್ರಸ್ತುತ ಅಭಿವೃದ್ಧಿಪಡಿಸುವ ಗುರಿಯನ್ನು ಬಾಲಕ ಹೊಂದಿರುವ ಬಗ್ಗೆ ವಿವರಿಸಿದ. ಈ ಹಂತದಲ್ಲಿ ಪ್ರಧಾನಿಯವರೇ ಸವಾಲು ಹಾಕುವ ರೀತಿಯಲ್ಲಿ ಆತ, ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಆತ್ಮನಿರ್ಭರವಾಗಿದೆ. ಈ ಕ್ಷೇತ್ರದಲ್ಲಿ ಮಾತ್ರ ಏಕೆ ಇನ್ನೂ ಅಮೆರಿಕದ ಮೇಲೆ ನಾವು ಅವಲಂಬಿತರಾಗಿದ್ದೇವೆ? ಇದು ಸರಿಯಲ್ಲ. ಆದ್ದರಿಂದ ನಾನು ಕೋಡಿಂಗ್ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುತ್ತಿದ್ದೇನೆ. ಅದನ್ನು ನಾನೇ ಮಾಡುತ್ತೇನೆ. ನಂಬರ್​ 1 ಆಗುವ ಮೂಲಕ ಈ ಕ್ಷೇತ್ರದಲ್ಲಿಯೂ ಭಾರತ ಸ್ವಾವಲಂಬಿ ಎನ್ನುವುದನ್ನು ತೋರಿಸುತ್ತೇನೆ ಎಂದಿದ್ದಾನೆ.

(ಅಂದಹಾಗೆ ರುದ್ರ ಇದಾಗಲೇ ಹಲವು ಪ್ರಶಸ್ತಿಗಳನ್ನೂ ಗಳಿಸಿದ್ದಾನೆ. ಪ್ರತಿಷ್ಠಿತ ವಡೋದರಾ ಟಾಯ್‌ಕ್ಯಾಥನ್ 2024 ಪ್ರಶಸ್ತಿಯ ಚಿತ್ರ ಇಲ್ಲಿದೆ)

88
ಅಮಿತಾಭ್​ ಭಾವುಕ

ಬಾಲಕನ ಈ ಸೃಜನಶೀಲ ಕಲ್ಪನೆಯನ್ನು ನೋಡಿದ ಜನರಿಂದ ಚಪ್ಪಾಳೆಗಳ ಸುರಿಮಳೆಯಾದರೆ, ಅಮಿತಾಭ್​ ಬಚ್ಚನ್​ ಭಾವುಕರಾಗಿ ಅರೆಕ್ಷಣ ಅವರ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ. ಭಾರತದ ಭವಿಷ್ಯ ಇಂಥ ಮಕ್ಕಳಲ್ಲಿ ಅಡಗಿದೆ ಎಂದು ಅವರು ಹೇಳಿದರು.

Read more Photos on
click me!

Recommended Stories