ಬಿಗ್ ಬಾಸ್ 19 ಸ್ಪರ್ಧಿಗಳಿಗೆ ದೀಪಾವಳಿ ಗುಡ್ ನ್ಯೂಸ್, ಎಂಟ್ರಿಯಾಗಲಿದ್ದಾರೆ ರಶ್ಮಿಕಾ ಮಂದಣ್ಣ

Published : Oct 17, 2025, 07:44 PM IST

ಬಿಗ್ ಬಾಸ್ 19 ಸ್ಪರ್ಧಿಗಳಿಗೆ ದೀಪಾವಳಿ ಗುಡ್ ನ್ಯೂಸ್, ಎಂಟ್ರಿಯಾಗಲಿದ್ದಾರೆ ರಶ್ಮಿಕಾ ಮಂದಣ್ಣ, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶೇಷ ಎಪಿಸೋಡ್‌ನಲ್ಲಿ ರಶ್ಮಿಕಾ ಮಂದಣ್ಣ ಮನೆಗೆ ಎಂಟ್ರಿಕೊಡುತ್ತಿದ್ದಾರೆ.

PREV
16
ಬಿಗ್ ಬಾಸ್ ಮನೆಗೆ ರಶ್ಮಿಕಾ ಮಂದಣ್ಣ

ಬಿಗ್ ಬಾಸ್ ಮನೆಗೆ ರಶ್ಮಿಕಾ ಮಂದಣ್ಣ

ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋ ಭಾರಿ ಸಂಚಲನ ಸೃಷ್ಟಿಸುತ್ತಿದೆ. ವಿವಾದ, ಟೀಕೆಗಳ ನಡುವೆ ಇದೀಗ ಬಿಗ್ ಬಾಸ್ ಮತ್ತೆ ಪ್ರೇಕ್ಷಕರ ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿದೆ. ಬಿಗ್ ಬಾಸ್ 19 ಸ್ಪರ್ಧಿಗಳಿಗೆ ದೀಪಾವಳಿ ಧಮಾಕ. ಈ ವಾರಾಂತ್ಯದಲ್ಲಿ ಮನೆಯೊಳಗೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ ನೀಡುತ್ತಿದ್ದಾರೆ. ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ.

26
ದೀಪಾವಳಿಗೆ ವಿಶೇಷ ಎಪಿಸೋಡ್

ದೀಪಾವಳಿಗೆ ವಿಶೇಷ ಎಪಿಸೋಡ್

ರಶ್ಮಿಕಾ ಮಂದಣ್ಣ ಕಾಲಿಡುತ್ತಿರುವುದು ಬಿಗ್ ಬಾಸ್ 19ರ ಹಿಂದಿ ಎಪಿಸೋಡ್‌ಗೆ. ದೀಪಾವಳಿ ವಿಶೇಷ ಎಪಿಸೋಡ್‌ನಲ್ಲಿ ರಶ್ಮಿಕಾ ಮಂದಣ್ಣ, ಬಾಲಿವುಡ್ ನಟ ಆಯುಷ್ಮಾನ್ ಖುರಾನ ಹಾಗೂ ಗಾಯಕ ಶಾನ್ ಆಗಮಿಸುತ್ತಿದ್ದಾರೆ. ದೀಪಾವಳಿ ಧಮಾಕ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಜೊತೆ ಮಾತುಕತೆ, ಹರಟೆ ನಡೆಯಲಿದೆ.

36
ದೀಪಾವಳಿ ಹಬ್ಬಕ್ಕ ತಮ್ಮಾ ಟೀಂ

ದೀಪಾವಳಿ ಹಬ್ಬಕ್ಕ ತಮ್ಮಾ ಟೀಂ

ಹಿಂದಿ ಬಾಸ್ ವಾರಾಂತ್ಯ ಕಾರ್ಯಕ್ರಮದಲ್ಲಿ ತಮ್ಮಾ ಬಾಲಿವುಡ್ ಸಿನಿಮಾ ತಂಡ ಎಂಟ್ರಿಯಾಗುತ್ತಿದೆ. ಆಯುಷ್ಮಾನ್ ಖುರಾನಾ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ತಂಡ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಆಚರಿಸಲಿದೆ.

46
ಈ ವಾರಾಂತ್ಯ ಬಿಗ್ ಬಾಸ್ ಸ್ಪರ್ಧಿಗಳು ಸೇಫ್

ಈ ವಾರಾಂತ್ಯ ಬಿಗ್ ಬಾಸ್ ಸ್ಪರ್ಧಿಗಳು ಸೇಫ್

ದೀಪಾವಳಿ ಹಬ್ಬದ ವಿಶೇಷ ಎಪಿಸೋಡ್ ಕಾರಣ ಬಿಗ್ ಬಾಸ್ ಮನೆಗೆ ಅತಿಥಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಈ ವಾರಾಂತ್ಯದಲ್ಲಿ ಯಾವುದೇ ಎಲಿಮಿನೇಶನ್ ಇರುವುದಿಲ್ಲ. ಎಲ್ಲಾ ಸ್ಪರ್ಧಿಗಳು ಸೇಫ್. ಯಾರೂ ಕೂಡ ಮನೆಯಿಂದ ಹೊರಹೋಗುತ್ತಿಲ್ಲ. ಎಲ್ಲಾ ಸ್ಪರ್ಧಿಗಳು ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

56
ಅಕ್ಟೋಬರ್ 18, 19ರಂದು ದೀಪಾವಳಿ ಎಪಿಸೋಡ್

ಅಕ್ಟೋಬರ್ 18, 19ರಂದು ದೀಪಾವಳಿ ಎಪಿಸೋಡ್

ಅಕ್ಟೋಬರ್ 18 ಹಾಗೂ 19 ರಂದು ದೀಪಾವಳಿ ಸಂಭ್ರಮದ ಎಪಿಸೋಡ್ ಪ್ರಸಾರವಾಗಲಿದೆ. ಎಂದಿನಂತೆ ಸಲ್ಮಾನ್ ಖಾನ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಗಾಯಕ ಶಾನ್ ಅದ್ಬುತ ಪರ್ಫಾಮೆನ್ಸ್ ಕೂಡ ಇರಲಿದೆ. ಇದರ ಜೊತೆಗೆ ಇತರ ಕೆಲ ಅತಿಥಿಗಳು ಆಗಮಿಸುತ್ತಿದ್ದಾರೆ.

66
ಹಿಂದಿ ಬಿಗ್ ಬಾಸ್ ಮನೆಯಲ್ಲಿ ಕಾವು ಪಡೆದಿದೆ ಜಗಳ

ಹಿಂದಿ ಬಿಗ್ ಬಾಸ್ ಮನೆಯಲ್ಲಿ ಕಾವು ಪಡೆದಿದೆ ಜಗಳ

ಹಿಂದಿ ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಗಳ ಮನಸ್ತಾಪ, ಜಗಳ, ಮಾತುಕತೆಗಳು ಕಾವು ಪಡೆದಿದೆ. ಅಮಾನ್ ಮಲಿಕ್, ಫರ್ಹಾನ್ ಭಟ್ ಗುದ್ದಾಟ ಮನೆಯ ವಾತಾವರಣ ಕೆಡೆಸಿದೆ. ವಾರಾಂತ್ಯ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಸ್ಪರ್ಧೆ ತೀವ್ರಗೊಂಡಿದೆ. ಇದರ ಜೊತೆಗೆ ದೀಪಾವಳಿ ಸಂಭ್ರಮ ಸೇರಿಕೊಳ್ಳಲಿದೆ.

Read more Photos on
click me!

Recommended Stories