ಬಿಗ್‌ಬಾಸ್ ಮನೆಯಲ್ಲಿ ಗುಳ್ಳೆನರಿಯಾಗಿ ಚಾಣಕ್ಷತನದಿಂದ ಆಡಿದ ಯಶಸ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ತಮಗೆ ಸಿಕ್ಕ ಪವರ್ ಬಳಸಿ, ಎಲ್ಲಾ ವಾರ ನಾಮಿನೇಟ್ ಮಾಡಿದ್ದ ಕ್ಯಾಪ್ಟನ್ ಗಗನ್ ಜೊತೆ ಯಶಸ್ ತಮ್ಮ ನಾಮಿನೇಷನ್ ಅದಲು-ಬದಲು ಮಾಡಿಕೊಳ್ಳಲಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ 12ನೇ ವಾರದ ಪ್ರಮುಖ ಆಕರ್ಷಣೆಯಾಗಿದ್ದು ಸ್ಪರ್ಧಿ ಯಶಸ್ ಕೃಷ್ಣ. 12ನೇ ವಾರದ ಕ್ಯಾಪ್ಟನ್ ಗಗನ್ ಚಿನ್ನಪ್ಪ ಆಯ್ಕೆ ಪ್ರಕಾರ, ಯಶಸ್ ಮನೆಯಲ್ಲಿರುವ ಎಲ್ಲಾ ವಾರ ನೇರವಾಗಿ ನಾಮಿನೇಟ್ ಆಗಿದ್ರು. ಇದೀಗ ಯಶಸ್‌ಗೆ ಬಿಟ್ಟ ಬಾಣ ಗಗನ್‌ಗೆ ತಾಗಿದೆ. ಈ ವಿಷಯ ತಿಳಿದ ವೀಕ್ಷಕರು, ಕರ್ಮ್ ರಿಟರ್ನ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
25
ತಿರಗುಬಾಣ ಆಗಿದ್ದೇಗೆ?
12ನೇ ವಾರದಲ್ಲಿ ಬಿಗ್‌ಬಾಸ್ ಮನೆ ಜಂಗಲ್ ಆಗಿ ಬದಲಾಗಿತ್ತು. ಯಶಸ್ ಕೃಷ್ಣ ಅವರಿಗೆ ಗುಳ್ಳೆನರಿ ಪಾತ್ರ ಸಿಕ್ಕಿದ್ರೆ, ತಾಂಡವ್ ರಾಮ್ ಕಾಗೆಯಾಗಿದ್ದರು. ನಂತರ ಈ ಗುಳ್ಳೆನರಿ ಮತ್ತು ಕಾಗೆ ಹುಡುಕಲು ಸಿಂಹ ಪಾತ್ರವೊಂದನ್ನು ಪರಿಚಯಿಸಲಾಗಿತ್ತು. ಯಶಸ್ ಅವರೇ ಗುಳ್ಳೆನರಿ ಎಂದು ತಿಳಿಯದ ಸದಸ್ಯರು ಅವರನ್ನೇ ಸಿಂಹವನ್ನಾಗಿ ಆಯ್ಕೆ ಮಾಡಿ ಎಡವಿದ್ದರು.
35
ಕಿಚ್ಚನ ಚಪ್ಪಾಳೆ
ಗುಳ್ಳೆನರಿಯಾಗಿ ಚಾಣಕ್ಷತನದಿಂದ ಆಟವಾಡಿದ ಯಶಸ್ ಕೃಷ್ಣ, ಕಾಗೆಯಾಗಿರುವ ತಾಂಡವ್ ರಾಮ್ ಪತ್ತೆ ಮಾಡಿದ್ದರು. ಇದೀಗ ವೀಕೆಂಡ್ ಪ್ರೋಮೋದಲ್ಲಿ ಯಶಸ್ ಅವರೇ ಮನೆಯ ಗುಳ್ಳೆನರಿ ಎಂದು ಸುದೀಪ್ ರಿವೀಲ್ ಮಾಡಿದ್ದಾರೆ. ಹಾಗೆಯೇ ಅತ್ಯಂತ ಚೆನ್ನಾಗಿ ಆಟವಾಡಿದ ಯಶಸ್‌ಗೆ ಈ ವಾರದ ಕಿಚ್ಚನ ಚಪ್ಪಾಳೆ ಜೊತೆ ಅವರ ಶರ್ಟ್ ಸಹ ಸಿಕ್ಕಿದೆ. ಹಾಗೆಯೇ ಮಹತ್ವದ ಪವರ್ ಸಹ ಯಶಸ್‌ಗೆ ಸಿಕ್ಕಿದೆ.
ಮನೆಯಿಂದ ಹೊರಗೆ ಹೋಗಲು ಎಲ್ಲಾ ವಾರವೂ ನಾಮಿನೇಟ್ ಆಗಿರುವ ಯಶಸ್ ಅವರಿಗೆ ಇದನ್ನು ಬೇರೆ ಸ್ಪರ್ಧಿಯೊಂದಿಗೆ ಅದಲು ಬದಲು ಮಾಡಿಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ. ಈ ಪವರ್ ಬಳಕೆ ಮಾಡುವ ಮುನ್ನ ನಾಮಿನೇಷನ್ ಪ್ರಕ್ರಿಯೆ ಯಾರೊಂದಿಗೆ ಅದಲು-ಬದಲು ಮಾಡಿಕೊಳ್ಳುತ್ತೇನೆ ಎಂದು ಆ ಸ್ಪರ್ಧಿಗೂ ಗೊತ್ತಿದೆ ಎಂದು ಗಗನ್ ಮುಖವನ್ನು ಯಶಸ್ ನೋಡುತ್ತಾರೆ.
55
ಗಗನ್ ಚಿನ್ನಪ್ಪ ವರ್ಸಸ್ ಯಶಸ್
ವಾರದ ಮೊದಲ ದಿನ ತನ್ನನ್ನು ನಾಮಿನೇಟ್ ಮಾಡಿದ್ದಕ್ಕೆ ಗಗನ್ ಚಿನ್ನಪ್ಪ ವಿರುದ್ಧ ಯಶಸ್ ವಾಗ್ದಾಳಿ ನಡೆಸಿದ್ದರು. ಯಾಕೆ ಯಶಸ್ ಎಂಬುದಕ್ಕೆ ಗಗನ್ ತಮ್ಮದೇಯಾದ ಕೆಲವೊಂದು ಕಾರಣಗಳನ್ನು ನೀಡಿದ್ದರು. ಅದೇ ರೀತಿ ಗಗನ್ ಬಗ್ಗೆ ತಮಗಿರೋ ಅಭಿಪ್ರಾಯವನ್ನು ಯಶಸ್ ಬಹಿರಂಗಗೊಳಿಸಿದ್ದರು. ಅಂತಿಮವಾಗಿ ಯಶಸ್‌ಗೆ ಬಿಟ್ಟ ಬಾಣ ಗಗನ್ ಚಿನ್ನಪ್ಪಗೆ ತಲುಪಿದಂತೆ ಕಾಣಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.