Arpitha Gowda: ‘ನಂದಗೋಕುಲ’ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಅರ್ಪಿತಾ ಗೌಡ, ಧಾರಾವಾಹಿಗೆ ಎಂಟ್ರಿ ಕೊಟ್ಟು 1 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಪಾತ್ರದ ಕುರಿತು ಹಾಗೂ ಸೀರಿಯಲ್ ತಂಡದ ಕುರಿತು ಭಾವುಕ ಪೋಸ್ಟ್ ಮಾಡಿದ್ದಾರೆ. ನಟಿ ಏನು ಹೇಳಿದರು ನೋಡಿ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ನಂದಗೋಕುಲ’ ಧಾರಾವಾಹಿಯಲ್ಲಿ ನಂದನ ಹಿರಿಯ ಸೊಸೆ ಪ್ರಿಯಾ ಪಾತ್ರದಲ್ಲಿ ನಟಿಸಿರುವ ಅರ್ಪಿತಾ ಗೌಡ, ತಮ್ಮ ಪಾತ್ರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.
27
ನೆಗೆಟಿವ್ -ಪಾಸಿಟಿವ್ ಪಾತ್ರ
ಸುಳ್ಳು ಹೇಳಿ ನಂದನ ಮನೆ ಸೇರಿರುವ ಪ್ರಿಯಾ, ಆರಂಭದಲ್ಲಿ ಅಮ್ಮು ಮತ್ತು ಮೀನಾರಿಗೆ ಕೆಟ್ಟದಾಗಲು ಕುತಂತ್ರ ಮಾಡುತ್ತಿದ್ದಳು. ಆದರೆ, ಅವರಿಬ್ಬರು ಪ್ರೀತಿಗೆ ಕರಗಿ ಬದಲಾಗಿದ್ದಾಳೆ ಪ್ರಿಯಾ. ಆರಂಭದಲ್ಲಿ ಕೊಂಚ ನೆಗೆಟಿವ್ ಆಗಿ, ಸದ್ಯ ಪಾಸಿಟಿವ್ ಪಾತ್ರದಲ್ಲಿ, ಸುಳ್ಳನ್ನು ಮುಚ್ಚುವ ಸಲುವಾಗಿ ತಪ್ಪಿನ ಮೇಲೆ ತಪ್ಪುಗಳನ್ನು ಮಾಡುತ್ತಾ ಬಂದಿರುವ ಪ್ರಿಯಾ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಪ್ರಿಯಾ ನಟನೆಯೂ ಅದ್ಭುತವಾಗಿ ಮೂಡಿ ಬಂದಿದೆ. ಇದೀಗ ಸೀರಿಯಲ್ ಪಾತ್ರಕ್ಕೆ ಒಂದು ವರ್ಷ ತುಂಬಿರುವ ಬಗ್ಗೆ ನಟಿ ಏನು ಹೇಳಿದ್ದಾರೆ ನೋಡೋಣ.
37
ಪ್ರಿಯಾ ಆಗಿ ಒಂದು ವರ್ಷ!
ಪ್ರೀತಿ, ಕಲಿಕೆ, ಭಾವನೆಗಳು, ಸುಂದರ ನೆನಪುಗಳು ಮತ್ತು ಮರೆಯಲಾಗದ ಪಯಣದ 365 ದಿನಗಳು. ಒಂದು ವರ್ಷದ ಹಿಂದೆ ನಾನು ನಂದಗೋಕುಲದ ಪ್ರಿಯಾ ಆಗಿ ಈ ಲೋಕಕ್ಕೆ ಕಾಲಿಟ್ಟೆ. ಈ ಪಾತ್ರ ನನ್ನ ಜೀವನದ ಇಷ್ಟು ವಿಶೇಷವಾದ ಭಾಗವಾಗುತ್ತದೆ ಮತ್ತು ನಿಮ್ಮೆಲ್ಲರಿಂದ ಇಷ್ಟೊಂದು ಪ್ರೀತಿ ಹಾಗೂ ಆತ್ಮೀಯತೆ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ.
ನಮ್ಮ ನಿರ್ದೇಶಕರಾದ ಶ್ರವಂತ್ ರಾಧಿಕಾ, ಬಣ್ಣ ಟಾಕೀಸ್, ಮತ್ತು ಇಡೀ ನಂದಗೋಕುಲ ತಂಡ, ತಂತ್ರಜ್ಞರು, ಸಹ ಕಲಾವಿದರು ಹಾಗೂ ಈ ಸುಂದರ ಪಯಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಮೇಲೆ ನಂಬಿಕೆ ಇಟ್ಟು, ಮಾರ್ಗದರ್ಶನ ನೀಡಿ, ಪ್ರಿಯಾ ಪಾತ್ರವನ್ನು ಇಷ್ಟು ವಿಶೇಷವಾಗಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.
57
ಕನ್ನಡಿಗರಿಗೆ ಅರ್ಪಿತಾ ಗೌಡ ಹೇಳಿದ್ದೇನು?
ಕರ್ನಾಟಕದ ಅದ್ಭುತ ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು! ನೀವು ನನ್ನ ಮೇಲೆ ಮತ್ತು ನನ್ನ ಪ್ರಿಯಾ ಪಾತ್ರದ ಮೇಲೆ ತೋರಿದ ಪ್ರೀತಿ, ಪ್ರೋತ್ಸಾಹ ಹಾಗೂ ಸ್ವೀಕಾರವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
67
ನಿಮ್ಮ ಪ್ರೀತಿಯೇ ನನ್ನ ಸಾಧನೆ
ನೀವು ಕೇವಲ ಪ್ರಿಯಾಳನ್ನು ನೋಡಲಿಲ್ಲ; ಅವಳನ್ನು ನಿಮ್ಮವರಲ್ಲೊಬ್ಬಳಂತೆ ಪ್ರೀತಿಯಿಂದ ಸ್ವೀಕರಿಸಿದ್ದೀರಿ. ನಿಮ್ಮ ಈ ಪ್ರೀತಿಯೇ ನನ್ನ ಪಾಲಿನ ಅತಿದೊಡ್ಡ ಸಾಧನೆ ಮತ್ತು ನನ್ನ ಕೆಲಸದಲ್ಲಿ ಇನ್ನಷ್ಟು ಉತ್ತಮವಾಗಿ ತೊಡಗಿಸಿಕೊಳ್ಳಲು ಸಿಗುತ್ತಿರುವ ಅತ್ಯುತ್ತಮ ಪ್ರೇರಣೆ.
77
ಲೆಕ್ಕವಿಲ್ಲದಷ್ಟು ಸುಂದರ ನೆನಪುಗಳು
ಒಂದು ವರ್ಷ ಕಳೆದಿದೆ, ಸಂಭ್ರಮಿಸಲು ಲೆಕ್ಕವಿಲ್ಲದಷ್ಟು ಸುಂದರ ನೆನಪುಗಳಿವೆ ಮತ್ತು ಇನ್ನೂ ಅನೇಕ ನೆನಪುಗಳನ್ನು ಸೃಷ್ಟಿಸುವ ಪಯಣ ಮುಂದುವರಿಯಲಿದೆ! ಸದಾ ಕೃತಜ್ಞಳಾಗಿರುತ್ತೇನೆ. ಸದಾ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ಋಣಿಯಾಗಿರುತ್ತೇನೆ. ತುಂಬು ಪ್ರೀತಿಯಿಂದ, ನಿಮ್ಮ ಪ್ರಿಯಾ – ಅರ್ಪಿತಾ ಗೌಡ ಎಂದು ನಟಿ ಭಾವುಕವಾಗಿ ಬರೆದಿದ್ದಾರೆ. ವೀಕ್ಷಕರು ಅಭಿಮಾನಿಗಳು ಸಹ ಅರ್ಪಿತಾ ಗೌಡ ಅವರ ಪೋಸ್ಟ್ ಗೆ ಪ್ರೀತಿಯ ಸುರಿಮಳೆ ಸುರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.