ಮುಗಿಯಿತು 'ರಾಣಿ' ಸೀರಿಯಲ್ ಪಯಣ: ಕಾವೇರಿಯಾಗಿ ಕೊನೆಯ ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಐಶ್ವರ್ಯ!

Published : Nov 27, 2026, 06:32 PM IST

Rani Serial: ಕಲರ್ಸ್ ಕನ್ನಡದ ಜನಪ್ರಿಯ 'ರಾಣಿ' ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಈ ನಡುವೆ ಕಾವೇರಿ ಪಾತ್ರದಲ್ಲಿ ನಟಿಸಿದ್ದ ಐಶ್ವರ್ಯ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಕಾವೇರಿಯಾಗಿ ತಮ್ಮ ಪಯಣಕ್ಕೆ ವಿದಾಯ ಹೇಳಿದ್ದಾರೆ.

PREV
17
ರಾಣಿ ಧಾರಾವಾಹಿ ಅಂತ್ಯ

ಕಲರ್ಸ್ ಕನ್ನಡದ ರಾಣಿ ಧಾರಾವಾಹಿ ಮುಕ್ತಾಯದ ಹಂತ ತಲುಪಿದ್ದು, ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಈಗಾಗಲೇ ಚಿತ್ರೀಕರಣ ಕೂಡ ಮುಗಿದಿದೆ. ಧಾರಾವಾಹಿಯಲ್ಲಿ ‘ರಾಣಿ’ ತಾಯಿ ಕಾವೇರಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಐಶ್ವರ್ಯ ಈ ಕುರಿತು ಭಾವುಕ ಪೋಸ್ಟ್ ಮಾಡಿದ್ದಾರೆ.

27
ಕಾವೇರಿ ಪಾತ್ರದ ಬಗ್ಗೆ ನಟಿ ಐಶ್ವರ್ಯ ಮನದ ಮಾತು

ಕಾವೇರಿ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿರುತ್ತಾಳೆ. ಕಾವೇರಿ ಪಾತ್ರದಲ್ಲಿ ನಟಿಸಿದ್ದು ನನ್ನ ಜೀವನದ ಪಯಣದ ಅತ್ಯಂತ ಸುಂದರ ಅನುಭವಗಳಲ್ಲಿ ಒಂದಾಗಿದೆ. ಈ ಪಾತ್ರವನ್ನು, ಅದರಲ್ಲಿನ ಭಾವನೆಗಳನ್ನು, ದೃಶ್ಯಗಳನ್ನು ಹಾಗೂ ಈ ಪಯಣದಲ್ಲಿ ನಾನು ಗಳಿಸಿದ ಎಲ್ಲಾ ಸಿಹಿ ನೆನಪುಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.

37
ಅತ್ಯಂತ ಮಹತ್ವದ ಸಮಯದಲ್ಲಿ ನನಗೆ ಸಿಕ್ಕ ಪಾತ್ರ

ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸುಂದರ ಪಾತ್ರವನ್ನು ನೀಡಿದ ಕಲರ್ಸ್ ಕನ್ನಡ, RRR Creations ಹಾಗೂ ಇಡೀ 'ರಾಣಿ' ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನನಗೆ ಕಾವೇರಿ ಪಾತ್ರದ ಅಗತ್ಯವಿದ್ದ ಅತ್ಯಂತ ಮಹತ್ವದ ಸಮಯದಲ್ಲಿ ಈ ಪಾತ್ರ ನನ್ನ ಜೀವನಕ್ಕೆ ಬಂದಿತು. ಅದಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ.

47
ಧನ್ಯವಾದಗಳು ಕಾವೇರಿ ಎಂದು ನಟಿ

ನನ್ನ ಜೀವನದ ಪಯಣದ ಸುಂದರ ಅಧ್ಯಾಯವಾಗಿದ್ದಕ್ಕಾಗಿ ಧನ್ಯವಾದಗಳು ಕಾವೇರಿ. ಕಾವೇರಿಯಾಗಿ ನನ್ನ ಪಯಣಕ್ಕೆ ಈಗ ವಿದಾಯ ಎಂದು ರಾಣಿ ಧಾರಾವಾಹಿಯ ಕಲಾವಿದರ ಹಾಗೂ ತಂತ್ರಜ್ಞರ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ನಟಿ.

57
ಪುಟಾಣಿ ರಾಣಿಯ ಕಥೆ

ಈ ಧಾರಾವಾಹಿಯ ಹೈಲೈಟ್ ಪುಟಾಣಿ ರಾಣಿ, ಮಾಡದ ತಪ್ಪಿಗೆ ಜೈಲು ಸೇರಿದ ಕಾವೇರಿಯ ಮುದ್ದಿನ ಮಗಳು ರಾಣಿ, ಜೈಲಲ್ಲಿದ್ದರೂ ಮಗಳನ್ನು ಅಪ್ಪಟ ಚಿನ್ನದಂತೆ ಬೆಳೆಸಿರುತ್ತಾಳೆ. ನಂತರ ತನ್ನ ಮಾವನ ಮನೆಯಲ್ಲಿ ಕಷ್ಟಪಡುವ ರಾಣಿಗೆ, ಅಪ್ಪನ ಪರಿಚಯ, ಬಳಿಕ ಅಮ್ಮನ ಬಿಡುಗಡೆ, ಜಗಳ ಗಲಾಟೆ, ಮೋಸಗಳ ಮಧ್ಯೆ ಕಥೆ ಅದ್ಭುತವಾಗಿ ಮೂಡಿ ಬಂದಿತ್ತು.

67
ತಾಯಿ ಮಗಳ ಭಾವನಾತ್ಮಕ ಸರಳ ಕಥೆ

ಈ ಧಾರಾವಾಹಿ ಸರಳ ಕಥೆಯನ್ನು ಹೊಂದಿದ್ದು, ಅಮ್ಮ ಮತ್ತು ಮಗಳ ಭಾವನಾತ್ಮಕ ಬೆಸುಗೆಯ ಕಥೆಯಾಗಿದೆ. ಧಾರಾವಾಹಿಯ ಕೊನೆಯಲ್ಲಿ ಕೊನೆಗೂ ರಾಣಿ ತನ್ನ ತಾಯಿ ಮತ್ತು ತಂದೆಯನ್ನು ಒಂದು ಮಾಡುವ ಮೂಲಕ ಮುಕ್ತಾಯವಾಗಬಹುದು. ಸದ್ಯ ಮದುವೆಯ ಕಥೆ ನಡೆಯುತ್ತಿದೆ. ಇವತ್ತೆ ಕೊನೆಯಾಗುತ್ತಾ ಕಾದು ನೋಡಬೇಕು.

77
ಧಾರಾವಾಹಿ ಕಲಾವಿದರು

ರಾಣಿ ಧಾರಾವಾಹಿಯ ಲೀಡ್ ಪಾತ್ರದಲ್ಲಿ ಪುಟಾಣಿ ಧನ್ವಿ ನಟಿಸುತ್ತಿದ್ದರು. ಅಲ್ಲದೇ ಐಶ್ವರ್ಯ ಎಚ್, ಆರವ್ ಸೂರ್ಯ, ಅಂಕಿತಾ ಮಧುಸೂಧನ, ಚಂದನ ಕೃಷ್ಣಮೂರ್ತಿ ಮೊದಲಾದ ಕಲಾವಿದರು ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories