Rakshitha Shetty: ಬಿಗ್‌ಬಾಸ್ ಮನೆಯಿಂದ ಮಾಳು ನಿಪನಾಳ ಹೊರಬಂದಿದ್ದಕ್ಕೆ ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ತಮ್ಮ ಎಲಿಮಿನೇಷನ್ ಬಗ್ಗೆ ಮಾಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಳು ನಿಪನಾಳ ಮನೆಯಿಂದ ಹೊರಗೆ ಹೋಗಿದ್ದಕ್ಕೆ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕುತ್ತಿದ್ದಾರೆ. ಮಾಳು ಕಾರ್‌ನಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿಯೂ ಅವರು ವಾಪಸ್ ಬರ್ತಾರೆ ಎಂದು ನನ್ನ ಮನಸ್ಸು ಹೇಳುತ್ತಿತ್ತು. ಆದ್ರೆ ಎಲ್ಲವೂ ಉಲ್ಟಾ ಆಯ್ತು ಎಂದು ರಘು ಮುಂದೆ ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.
25
ಉತ್ತರ ಕೊಡುವವರು ಯಾರು?
ಮಾಳು ಕುರಿತು ಮಾತನಾಡುವ ಸಂದರ್ಭದಲ್ಲಿ ರಘು ಅವರಿಗೆ ರಕ್ಷಿತಾ ಶೆಟ್ಟಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಆದ್ರೆ ಈ ಪ್ರಶ್ನೆಗೆ ರಘು ಏನು ಉತ್ತರ ನೀಡಿದ್ರು ಎಂಬುದನ್ನು ತೋರಿಸಿಲ್ಲ. ಆದ್ರೆ ಈ ಪ್ರಶ್ನೆಗೆ ಬಿಗ್‌ಬಾಸ್ ಅಥವಾ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಉತ್ತರ ನೀಡ್ತಾರಾ ಎಂಬುದನ್ನು ನೋಡಬೇಕಿದೆ. ಹಾಗಾದ್ರೆ ರಕ್ಷಿತಾ ಕೇಳಿದ ಪ್ರಶ್ನೆ ಏನು ಗೊತ್ತಾ?
35
ರಕ್ಷಿತಾ ಕೇಳಿದ ಪ್ರಶ್ನೆ
ನಾಮಿನೇಟ್ ಹೇಗಾಯ್ತು ಅಂತ ಗೊತ್ತಾಗುತ್ತಿಲ್ಲ. ಇಲ್ಲಿಯವರೆಗೂ ಮಾಳು ಮನೆಯಿಂದ ಹೊರಗೆ ಹೋದ್ರು ಅಂತ ನಂಬೋದಕ್ಕೆ ಆಗ್ತಿಲ್ಲ ಎಂದು ರಘು ಮುಂದೆ ರಕ್ಷಿತಾ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ರಘು, ಇದೆಲ್ಲಾ ಆಟ, ಇಲ್ಲಿ ನಾವು ಏನು ಊಹೆ ಮಾಡ್ತೀವಿ ಅದೆಲ್ಲಾ ಆಗಲು ಸಾಧ್ಯವಿಲ್ಲ ಎಂದು ಹೇಳಿ ರಕ್ಷಿತಾ ಅವರನ್ನು ಸಮಾಧಾನ ಮಾಡುತ್ತಾರೆ.
ಮುಂದುವರಿದು ಮಾತನಾಡಿದ ರಕ್ಷಿತಾ ಶೆಟ್ಟಿ, ಈ ಮನೆಯಲ್ಲಿ ಮಾಳು ಅವರಂಥಹ ವ್ಯಕ್ತಿತ್ವ ಯಾರದ್ದೂ ಇಲ್ಲ. ಆದ್ರೂ ಸಹ ಮಾಳು ಅಣ್ಣ ಮನೆಯಿಂದ ಹೊರಗೆ ಹೋಗಲು ಹೇಗೆ ಸಾಧ್ಯ? ಬಿಗ್‌ಬಾಸ್ ಅನ್ನೋದು ವ್ಯಕ್ತಿತ್ವದ ಆಟ ಅಲ್ಲವಾ ಎಂದು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ. ರಕ್ಷಿತಾ ಅವರ ಈ ವ್ಯಕ್ತಿತ್ವದ ಆಟದ ಕುರಿತ ಪ್ರಶ್ನೆಗೆ ಉತ್ತರ ನೀಡೋರು ಯಾರು?
ಇತ್ತ ಮನೆಯಿಂದ ಹೊರಗೆ ಬಂದಿರುವ ಮಾಳು, ತಮ್ಮ ಎಲಿಮಿನೇಟ್‌ಗೆ ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ನಾನು ಅರ್ಹನಾಗಿದ್ದೆ. ಆದ್ರೂ ಹೊರಗೆ ಬಂದಿರೋದು ನನಗೆ ಆಶ್ವರ್ಯವನ್ನುಂಟು ಮಾಡಿದೆ. ಆಟ ಆಡದೇ ಇರೋರು ಉಳಿದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.