ನಟಿ ದುರಂತ ಅಂತ್ಯ ಪ್ರಕರಣ, ಡೆತ್ ನೋಟ್‌ನಲ್ಲಿ ಮದುವೆ ಸೇರಿ ಮಹತ್ವದ ವಿಚಾರ ಪ್ರಸ್ತಾಪ ಮಾಡಲಾಗಿದೆ. ಪೊಲೀಸರು ಕೈಸೇರಿರುವ ಡೆತ್ ನೋಟ್ ನಂದಿನ ಸಾವಿನ ಹಿಂದಿನ ಕಾರಣಗಳನ್ನು ಹೇಳುತ್ತಿದೆ. ನಟನೆ, ಬ್ಯೂಟಿ ಮೂಲಕ ಗಮನಸೆಳೆದ ನಟಿ ಸಾವಿನ ಹಿಂದಿನ ರಹಸ್ಯ.
ಜೀವ ಹೂವಾಗಿದೆ, ಸಂಘರ್ಷ, ಗೌರಿ ಸೇರಿದಂತೆ ಜನಪ್ರಿಯ ಧಾರವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟಿ ನಂದಿನಿ ಸಾವು ಕಿರುತೆರೆ ಕ್ಷೇತ್ರವನ್ನೇ ತಲ್ಲಣಿಸಿದೆ. ಕನ್ನಡ ಹಾಗೂ ತಮಿಳು ಧಾರವಾಹಿಗಳಲ್ಲಿ ಜನಪ್ರಿಯ ತಾರೆಯಾಗಿ ಮಂಚಿರು ನಂದಿನ ಬೆಂಗಳೂರಿನ ನಿವಾಸದಲ್ಲಿ ಬದುಕು ಅಂತ್ಯಗೊಳಿಸಿದ್ದಾರೆ.
26
ನಂದಿನಿ ಡೆತ್ ನೋಟ್‌ನಲ್ಲಿ ಏನಿದೆ?
ನಂದಿನಿ ಡೆತ್ ನೋಟ್ ಪೊಲೀಸರ ಕೈಸೇರಿದೆ. ಈ ಡೆತ್‌ನಲ್ಲಿ ಹಲವು ವಿಚಾರಗಳ ಕುರಿತು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಮುಖವಾಗಿ ಮದುವೆ ವಿಚಾರವಾಗಿ ಒತ್ತಡ ತೀವ್ರಗೊಂಡಿತ್ತು. ಈ ಮದುವೆ ವಿಚಾರದಲ್ಲಿ ತಮ್ಮ ಇಷ್ಟಗಳನ್ನು ಪರಿಗಣಿಸುತ್ತಿಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳಲು ಕುಟುಂಬಸ್ಥರ ಅಡ್ಡಿ ಸೇರಿದಂತೆ ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ.
36
ಮಾನಸಿಕವಾಗಿ ಕುಗ್ಗಿ ಹೋಗಿದ್ದ ನಂದಿನಿ
ನಂದಿನಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ಕುರಿತು ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ. ತಂದೆ ಸಾವಿನ ಬಳಿಕ ನಂದಿನಿ ಮಾನಸಿಕವಾಗಿ ಕುಗ್ಗಿದ್ದರು. ಇದೇ ವೇಳೆ ಕುಟುಂಬಸ್ಥರ ಒತ್ತಾಯ, ಕುಟುಂಬ ನೋಡಿಕೊಳ್ಳುವ ಸಲುವಾಗಿ ಉದ್ಯೋಗ ಸೇರಿದಂತೆ ಹಲವು ಕಾರಣಗಳಿಂದ ನಂದಿನ ಕಳೆದ ಕೆಲ ದಿನಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ನಂದಿನಿ ತಂದೆ ಶಾಲಾ ಶಿಕ್ಷಕರಾಗಿದ್ದರು. ಆದರೆ ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದರು. ತಮ್ಮ ನಟನಾ ಕನಸಿಗೆ ಜೀವ ತುಂಬಿದ್ದ ತಂದೆಯನ್ನು ಕಳೆದುಕೊಂಡ ಬಳಿಕ ನಂದಿನಿ ಮಾನಸಿಕವಾಗಿ ಸೊರಗಿದ್ದರು. ಇತ್ತ ಅನುಕಂಪದ ಆಧಾರದಲ್ಲಿ ನಂದಿನಿಗೆ ಟೀಚರ್ ಉದ್ಯೋಗದ ಅವಕಾಶವಿದೆ. ನಟನೆ ಬಿಟ್ಟು ಉದ್ಯೋಗ ಆಯ್ಕೆ ಮಾಡಿಕೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರು ಎನ್ನಾಲಾಗಿದೆ.
56
ಹಿರಿಯ ಮಗಳ ಜವಾಬ್ದಾರಿ
ನಂದನಿ ಹಿರಿಯವಳಾಗಿದ್ದರೆ, ನಂದಿಗೆ ಸಹೋದರಿಯೊಬ್ಬಳು ಇದ್ದಾಳೆ. ಹೀಗಾಗಿ ಕುಟುಂಬದ ಜವಾಬ್ದಾರಿಯೂ ನಂದಿನಿ ಹೆಗಲಮೇಲಿದೆ. ಈ ಹಲವು ಅಡೆ ತಡೆಗಳ ನಡುವೆ ತನ್ನ ನಟನಾ ಕರಿಯರ್ ಕುರಿತು ಆತಂಕಗೊಂಡಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ,ಸಾವಿನ ಹಿಂದೆ ಷಡ್ಯಂತ್ರ, ಪ್ರಚೋದನೆ ಇತ್ತಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.
ಹಿರಿಯ ಮಗಳ ಜವಾಬ್ದಾರಿ
66
ದುಡುಕಿನ ನಿರ್ಧಾರ ಪರಿಹಾರವಲ್ಲ
ಜೀವನದಲ್ಲಿ ಸಂಕಷ್ಟದ ಸಂದರ್ಭಗಳು ಪ್ರತಿ ದಿನ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ದುಡುಕಿನ ನಿರ್ಧಾರಗಳು ಪರಿಹಾರವಲ್ಲ. ಬದುಕು ಅಂತ್ಯಗೊಳಿಸುವ ನಿರ್ಧಾರ ಅಕ್ಷ್ಯಮ್ಯ ಅಪರಾಧ. ಮಾನಸಿಕವಾಗಿ ಕುಗಿದ್ದರೆ, ಸಮಸ್ಯೆಗಳಿಂದ ಸೊರಗಿದ್ದರೆ, ದುಡುಕಿನ ನಿರ್ಧಾಕಕ್ಕೂ ಮೊದಲು iCALL ಸೇರಿ ಇತರ ಸಹಾಯವಾಣಿಗೆ ಕರೆ ಮಾಡಿ.
ದುಡುಕಿನ ನಿರ್ಧಾರ ಪರಿಹಾರವಲ್ಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.