ಗಂಡ ಜಯಂತ್‌ನಿಂದ ತಪ್ಪಿಸಿಕೊಳ್ಳಲು ಹೋಗಿ ತನ್ನದೇ ಮನೆಗೆ ಮರಳಿರುವ ಜಾಹ್ನವಿ, ತನಗೇ ನಡೆಯುತ್ತಿರುವ ಶ್ರಾದ್ಧ ಕಾರ್ಯವನ್ನು ಮರೆಯಲ್ಲಿ ನಿಂತು ನೋಡುತ್ತಿದ್ದಾಳೆ. ಪತ್ನಿ ಸತ್ತಿಲ್ಲ ಎಂದು ನಂಬಿರುವ ಜಯಂತ್ ಅನಿವಾರ್ಯವಾಗಿ ಈ ಕಾರ್ಯ ಮಾಡುತ್ತಿದ್ದು, ಜಾಹ್ನವಿ ಅವನ ಕಣ್ಣಿಗೆ ಬೀಳುತ್ತಾಳಾ ಕುತೂಹಲ ಮೂಡಿದೆ.
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಒಂದೆಡೆ ಭಾವನಾ ಮತ್ತು ಸಿದ್ದೇಗೌಡ್ರ ಸ್ಟೋರಿ ನಡೆಯುತ್ತಿದ್ದರೆ, ಇತ್ತ ಗಂಡನ ಕೈಗೆ ಸಿಗದೇ ಬಚಾವಾಗಲು ಹೋಗಿ ಖುದ್ದು ತನ್ನದೇ ಮನೆ ಸೇರಿಕೊಂಡಿದ್ದಾಳೆ ಚಿನ್ನುಮರಿ ಜಾಹ್ನವಿ. ಗಂಡನಿಂದ ತಪ್ಪಿಸಿಕೊಳ್ಳಲು ಹೋಗಿ, ಅವನೇ ತರಿಸಿದ್ದ ಗಾಡಿಯೊಳಕ್ಕೆ ಕೂತಿದ್ದ ಜಾಹ್ನವಿ, ಬೇರೆ ವಿಧಿಯಿಲ್ಲದೇ ಮನೆಯೊಳಕ್ಕೆ ಹೋಗಿದ್ದಾಳೆ. ಇದಾಗಲೇ ಎಲ್ಲ ಸಮಸ್ಯೆಗಳಿಗೂ ಸಿಸಿಟಿವಿನೇ ಕಾರಣ ಎಂದುಕೊಂಡಿದ್ದ ಜಯಂತ್ ಎಲ್ಲವನ್ನೂ ಒಡೆದು ಹಾಕಿರೋದ್ರಿಂದ ಜಾಹ್ನವಿ ಬಂದಿರೋದು ಸದ್ಯ ಅಂತೂ ಗೊತ್ತಾಗಲಿಲ್ಲ.
26
ಜಾಹ್ನವಿ ಶ್ರಾದ್ಧ
ತನ್ನ ಹೆಂಡತಿ ಬದುಕಿದ್ದಾಳೆ ಎಂದು ಪ್ರತಿಕ್ಷಣವೂ ಅಂದುಕೊಂಡೇ ಇದ್ದಾನೆ ಜಯಂತ್. ಆದರೂ ಆಕೆಯ ಶ್ರಾದ್ಧ ಕಾರ್ಯ ಮಾಡುವಂತೆ ಒತ್ತಾಯ ಬಂದಿದ್ದರಿಂದ ಅದನ್ನು ಅನಿವಾರ್ಯವಾಗಿ ಮಾಡಹೊರಟಿದ್ದಾನೆ ಆತ. ಇದರ ಹೊರತಾಗಿಯೂ ತನ್ನ ಪತ್ನಿ ಸತ್ತಿಲ್ಲ ಎನ್ನುವುದು ಅವನ ಮನಸ್ಸಿಗೆ ಗೊತ್ತಿದೆ. ಒಲ್ಲದ ಮನಸ್ಸಿನಿಂದಲೇ ಶ್ರಾದ್ಧ ಕಾರ್ಯಕ್ಕೆ ಮುಂದಾಗಿದ್ದಾನೆ.
36
ಮರೆಯಲ್ಲಿ ನಿಂತು ನೋಡ್ತಿರೋ ಜಾಹ್ನವಿ
ಇದೆಲ್ಲವನ್ನೂ ಮರೆಯಲ್ಲಿಯೇ ನಿಂತು ನೋಡುತ್ತಿದ್ದಾಳೆ ಜಾಹ್ನವಿ. ತನ್ನ ದೊಡ್ಡದಾಗಿರುವ ಫೋಟೋಗೆ ಹಾರ ಹಾಕಿ ಶ್ರಾದ್ಧ ಮಾಡ್ತಿರೋದನ್ನು ನೋಡಿ ಆಕೆಯ ಸ್ಥಿತಿ ಹೇಗಾಗಿರಬೇಡ? ಆದರೂ ತಾನು ಸತ್ತಿದ್ದೇನೆ ಎಂದು ತಿಳಿದುಕೊಂಡರೆ ಒಳ್ಳೆಯದು, ಈ ಗಂಡನ ಹಿಂಸೆಗಿಂತಲೂ ಶ್ರಾದ್ಧ ಮಾಡಿಸಿಕೊಳ್ಳುವುದೇ ಒಳಿತು ಎಂದುಕೊಂಡು ಅದನ್ನು ಮರೆಯಲ್ಲಿಯೇ ನಿಂತು ನೋಡುತ್ತಿದ್ದಾಳೆ ಆಕೆ.
ಇತ್ತ ಶ್ರಾದ್ಧ ಕಾರ್ಯಕ್ಕೆ ಬಂದಿರುವ ಪುರೋಹಿತ, ಪತ್ನಿಯನ್ನು ಇಷ್ಟೊಂದು ಪ್ರೀತಿಸ್ತಿರೋ ಜಯಂತ್ನನ್ನು ಹಾಡಿ ಹೊಗಳುತ್ತಿದ್ದಾನೆ. ನಿನ್ನಂಥ ಗಂಡನನ್ನು ಪಡೆಯಲು ಆಕೆ ಪುಣ್ಯ ಮಾಡಿರಬೇಕು ಎನ್ನುತ್ತಿದ್ದಾನೆ. ಇದನ್ನು ಕೇಳಿ ಜಯಂತ್, ಪ್ಲೀಸ್ ಆಕೆ ಸತ್ತಿದ್ದಾಳೆ ಎಂದು ಹೇಳಬೇಡಿ ಎನ್ನುತ್ತಲೇ ಕಾರ್ಯಕ್ಕೆ ಮುಂದಾಗಿದ್ದಾನೆ.
56
ಸಿಕ್ಕಿಬೀಳ್ತಾಳಾ ಜಾನು?
ಅತ್ತ ಕೆಲಸದಾಕೆ ಶಾಂತ ಕೂಡ ಇದ್ದಾಳೆ. ಮರೆಯಲ್ಲಿ ನಿಂತು ನೋಡ್ತಿರೋ ಜಾಹ್ನವಿ ಸಿಕ್ಕಿಬೀಳ್ತಾಳಾ? ಶ್ರಾದ್ಧ ಕಾರ್ಯ ಮುಗಿಯುವ ಮುನ್ನವೇ ಆಕೆ ಜಯಂತ್ ಇಲ್ಲವೇ ಶಾಂತನ ಕಣ್ಣಿಗೆ ಕಾಣಿಸಿಕೊಳ್ತಾಳಾ ಎನ್ನುವುದು ಈಗಿರುವ ಕುತೂಹಲ. ಸದ್ಯ ಹಾಗೆ ಆಗುವ ಛಾನ್ಸ್ ಇಲ್ಲ. ಆದರೆ ಪತಿ ತನ್ನ ಮೇಲೆ ಇಟ್ಟಿರೋ ಪ್ರೀತಿಯನ್ನು ನೋಡಿ ಜಾಹ್ನವಿ ಕರಗಿ ಹೋಗ್ತಾಳಾ ಎನ್ನುವ ಪ್ರಶ್ನೆಯೂ ವೀಕ್ಷಕರಲ್ಲಿ ಇದೆ.
66
ಲವರ್ ಹುಡುಕಲು ತನು ಸಕ್ಸಸ್ ಆಗ್ತಾಳಾ?
ಅದೇ ಇನ್ನೊಂದೆಡೆ, ವಿಶ್ವನ ಹಳೆಯ ಲವರ್ ಯಾರು ಎಂದು ತನಿಖೆ ಶುರುವಿಟ್ಟುಕೊಂಡಿದ್ದಾಳೆ ತನು. ವಿಶ್ವನ ಕಾಲೇಜಿಗೂ ಹೋಗಿದ್ದಾಳೆ. ಆದರೆ ತನ್ನ ಮನೆಯಲ್ಲಿ ಚಂದನಾ ಹೆಸರಿನಲ್ಲಿ ಇರುವಾಕೆಯೇ ಜಾಹ್ನವಿ- ವಿಶ್ವನ ಹಳೆಯ ಲವ್ವರ್ ಎಂದು ತಿಳಿಯುತ್ತದಾ ಇಲ್ಲವೇ ಎನ್ನುವುದೂ ಇನ್ನೊಂದು ಕುತೂಹಲ.