BBK 12: ಗೆಲ್ತಾರಾ ಗಿಲ್ಲಿ ನಟ..? ಈ ಮಂಡ್ಯದ ಹೈದ ನಟರಾಜ್‌ನ ಪ್ಲಸ್ & ಮೈನಸ್ ಏನು? ಸೀಕ್ರೆಟ್ ರಿವೀಲ್..!

Published : Jan 16, 2026, 12:39 PM IST

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತಕ್ಕೆ ಬಂದಿದ್ದು, ಗೆಲ್ಲುವ ಫೆವರೆಟ್ ಸ್ಪರ್ಧಿಯಾಗಿ ಗಿಲ್ಲಿ ನಟ ನಟರಾಜ್ ಹೊರಹೊಮ್ಮಿದ್ದಾರೆ ಎನ್ನಬಹುದು. ಆದರೆ, ಕೊನೆ ಹಂತದಲ್ಲಿ ಗಿಲ್ಲಿ ಸ್ವಲ್ಪ ಡಲ್ ಆಗಿದ್ದು ಕೂಡ ಸತ್ಯ. ಇದೀಗ ಗಿಲ್ಲಿ ನಟನ ಪ್ಲಸ್ ಹಾಗೂ ಮೈನಸ್ ಪಾಯಿಂಟ್‌ಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

PREV
18

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟ ನಟರಾಜ್ ಅವರೇ ಟ್ರೋಫಿ ಗೆಲ್ಲಬಹುದು ಎಂದು ಹಲವರು ನಂಬಿದ್ದಾರೆ. ಈ ಸೀಸನ್‌ 12ರ ನೆಚ್ಚಿನ ಸ್ಪರ್ಧಿ ಗಿಲ್ಲಿಯೇ ಎಂಬುದು ಹಲವರ ಅಭಿಮತ.

28

ಬಿಗ್ ಬಾಸ್ ಸೀಸನ್ 12ರ ಶುರುವಿನಿಂದಲೂ ಗಿಲ್ಲಿ ನಟ ಸಾಕಷ್ಟು ಹವಾ ಕ್ರಿಯೇಟ್ ಮಾಡುತ್ತಲೇ ಬಂದಿದ್ದಾರೆ. ತಮ್ಮ ಮಾತಿನ ಟೈಮಿಂಗ್ಸ್‌, ಫನ್ ಎಲಿಮೆಂಟ್ ಹಾಗೂ ಗೇಮ್‌ ಗಳಲ್ಲಿ ಗೆಲ್ಲುವ ಮೂಲಕ ಗಿಲ್ಲಿ ನಟ ಗೆಲುವಿನ ಸನಿಹಕ್ಕೆ ಬಂದಿದ್ದಾರೆ. 

38

ಆದರೆ, ಗಿಲ್ಲಿ ಮಾತ್ರವಲ್ಲ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಕೂಡ ತಾವೇನೂ ಕಡಿಮೆ ಇಲ್ಲ ಎಂಬಂತೆ ಗೆಲುವಿನ ರೇಸ್‌ನಲ್ಲಿ ನಿಂತಿದ್ದಾರೆ. ಇವರಲ್ಲದೇ ಕಾವ್ಯಾ ಶೈವ ಕೂಡ ಈ ದಾರಿಯಲ್ಲಿ ಇದ್ದಾರೆ. ಆದರೆ, ಕೊನೆಯಲ್ಲಿ ಗಿಲ್ಲಿ ನಟ ಸ್ವಲ್ಪ ಎಡವಿದ್ದು ಎಲ್ಲರ ಗಮನಕ್ಕೆ ಬಂದಿದೆ. 

48

ಹಾಗಿದ್ದರೆ ಬಿಗ್ ಬಾಸ್ ಕನ್ನಡ 12 ರ ಫಲಿತಾಂಶ ಏನಾಗಬಹುದು? ಗೆಲ್ಲಬಹುದಾ ಗಿಲ್ಲಿ? ಗಿಲ್ಲಿ ಅವರ ಪ್ಲಸ್ ಹಾಗೂ ಮೈನಸ್ ಪಾಯಿಂಟ್ಸ್‌ ಏನು? ಈ ಸ್ಟೋರಿ ನೋಡಿ..

58

ಗಿಲ್ಲಿ ನಟ ನಟರಾಜ ಅವರಿಗೆ ಕ್ಯಾಮೆರಾ ಏನೂ ಹೊಸದಲ್ಲ.. ಅವರು ಈಗಾಗಲೇ 3 ರಿಯಾಲಿಟಿ ಶೋಗಳಲ್ಲಿ ಮಿಂಚಿರುವವರೊ. ಜೊತೆಗೆ, ಗಿಲ್ಲಿ, ದರ್ಶನ್ ನಟನೆಯ ‘ದಿ ಡೆವಿಲ್’ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡವರು. ಅವರಿಗೆ ಕ್ಯಾಮೆರಾ ಸೆನ್ಸ್ ಇದೆ.

68

ಜೊತೆಗೆ, ಗಿಲ್ಲಿ ನಟನಿಗೆ ಕಾಮಿಡಿ ಟೈಮಿಂಗ್ಸ್ ಚೆನ್ನಾಗಿ ಸಿದ್ಧಿಸಿದೆ. ಅವರು ಆಡುವ ಪ್ರತಿಯೊಂದು ಮಾತೂ ಕೂಡ ವೀಕ್ಷಕರ ಎದೆಗೇ ನಾಡುವಂತೆ ಇರುತ್ತವೆ. ವೀಕ್ಷಕರು ಹಾಗೂ ಪ್ರೇಕ್ಷಕರನ್ನು ಸೆಳೆಯುವ ತಂತ್ರ ಗಿಲ್ಲಿ ನಟ ನಟರಾಜ್‌ ಅವರಿಗೆ ಸಿದ್ಧಿಸಿದೆ. 

78

ಬಿಗ್ ಬಾಸ್ ಕನ್ನಡ ಸೀಸನ್‌ 12ರಲ್ಲಿ ಗೇಮ್ ಆಡುವಾಗ ಕೂಡ ಗಿಲ್ಲಿ ಸಖತ್ ಸ್ಟ್ರಾಂಗ್‌ ಆಗಿಯೇ ಆಡಿದ್ದಾರೆ. ಎಲ್ಲವನ್ನೂ ಗಿಲ್ಲಿಯೇ ಗೆದ್ದಿದ್ದಾರೆ ಅಂತಲ್ಲ.. ಆದರೆ, ಗಿಲ್ಲಿ ಗೇಮ್‌ ಆಡೋದ್ರಲ್ಲಿ ಕೂಡ ಹೆಚ್ಚೇನೂ ಎಡವಿಲ್ಲ. 

88

ಜೊತೆಗೆ, ಅಂತಿಮವಾಗಿ ವೀಕ್ಷಕರಿಗೆ ಶೋದಲ್ಲಿ ಮನರಂಜನೆ ಸಿಗಬೇಕು ಎಂಬುದೇ ಗುರಿ. ಆ ಸಂಗತಿಯಲ್ಲಿ ಕೂಡ ಗಿಲ್ಲಿ ನಟ ಹಿಂದೆ ಬಿದ್ದಿಲ್ಲ. ಬಿಗ್ ಬಾಸ್ ವೀಕ್ಷಕರು ಹೆಚ್ಚಾಗಿ ಗಿಲ್ಲಿ ನಟನ ತಮಾಷೆಯ ಮಾತುಕತೆಯನ್ನು ಇಷ್ಟಪಟ್ಟಿದ್ದಾರೆ. ಜೊತೆಗೆ, ಅವರನ್ನು ತಮ್ಮ ಮನೆಮಗ ಎಂಬಂತೆ ಆರಾಧಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories