ವಿಚ್ಛೇದನ ಪಡೆದು 10 ವರ್ಷಗಳ ನಂತರ 2ನೇ ಮದುವೆಗೆ ರೆಡಿಯಾದ ಸೀರಿಯಲ್‌ ನಟಿ!

Published : Jan 16, 2026, 12:18 PM IST

ಟಿವಿ ನಟಿ ರಶ್ಮಿ ದೇಸಾಯಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪೋಷಕರು ತನಗಾಗಿ ಸಂಗಾತಿಯನ್ನು ಹುಡುಕುತ್ತಿದ್ದು, ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ಸಿಗುತ್ತಾರೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. 

PREV
18

ಸೀರಿಯಲ್‌ ನಟಿ ರಶ್ಮಿ ದೇಸಾಯಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸಖತ್‌ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ತಮ್ಮ 2ನೇ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

28

ಟಿವಿ ಲೋಕದ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿ ದೇಸಾಯಿ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸೂಪರ್‌ಹಿಟ್‌ ಸೀರಿಯಲ್‌ಗಳಲ್ಲಿ ನಟಿಸಿರುವ ರಶ್ಮಿ ದೇಸಾಯಿ, 2006ರಲ್ಲಿ ರಾವಣ್‌ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ನಂತರ, ಅವರು 'ಪರಿ ಹೂ ಮೈ', 'ಉತ್ತರನ್' ನಂತಹ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.

38

ಇತ್ತೀಚೆಗೆ ಸಂದರ್ಶನವೊಂದರಲ್ಲಿ, ರಶ್ಮಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಮದುವೆಯ ಬಗ್ಗೆ ಮಾತನಾಡುತ್ತಾ, ಸರಿಯಾದ ವ್ಯಕ್ತಿ ಖಂಡಿತವಾಗಿಯೂ ಸರಿಯಾದ ಸಮಯದಲ್ಲಿ ತನ್ನ ಜೀವನದಲ್ಲಿ ಬರುತ್ತಾರೆ ಎಂದು ನಂಬುವುದಾಗಿ ಹೇಳಿದರು.

48

ಅದೇ ಸಮಯದಲ್ಲಿ, ತನ್ನ ಪೋಷಕರು ತನಗಾಗಿ ಸಂಗಾತಿಯನ್ನು ಹುಡುಕುತ್ತಿದ್ದಾರೆ ಎಂದೂ ಅವರು ಒಪ್ಪಿಕೊಂಡಿದ್ದಾರೆ. ರಶ್ಮಿ ದೇಸಾಯಿ ಅವರ ಹೆಸರು ಇಲ್ಲಿಯವರೆಗೆ ಅವರ ವೃತ್ತಿಜೀವನದ ವಿವಿಧ ತಾರೆಯರೊಂದಿಗೆ ಲಿಂಕ್‌ ಆಗಿದ್ದರ, ಈ ಬಗ್ಗೆ ಅವರು ಎಂದೂ ಪ್ರತಿಕ್ರಿಯೆ ನೀಡಿರಲಿಲ್ಲ.

58

ರಶ್ಮಿ 2011 ರಲ್ಲಿ ನಟ ನಂದೀಶ್ ಸಂಧು ಅವರನ್ನು ವಿವಾಹವಾವಾಗಿದ್ದರು. ಆದರೆ, ನಾಲ್ಕೇ ವರ್ಷದಲ್ಲಿ ಈ ವಿವಾಹ ವಿಚ್ಛೇದನದೊಂದಿಗೆ ಅಂತ್ಯ ಕಂಡಿತು. ಈಗ 39 ವರ್ಷದ ರಶ್ಮಿಗೆ ಆಕೆಯ ತಂದೆ-ತಾಯಿ ಇನ್ನೊಬ್ಬ ಸಂಗಾತಿಯನ್ನು ಹುಡುಕುತ್ತಿದ್ದಾರೆ. "ನನ್ನ ಪೋಷಕರು ನನಗೆ ಸಂಗಾತಿಯನ್ನು ಹುಡುಕಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸರಿಯಾದ ಸಮಯದಲ್ಲಿ ನನ್ನ ಜೀವನದಲ್ಲಿ ಸರಿಯಾದ ವ್ಯಕ್ತಿ ಬರುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದ್ದಾರೆ.

68

ರಶ್ಮಿ 'ಬಿಗ್ ಬಾಸ್ 15' ನಲ್ಲಿಯೂ ಭಾಗವಹಿಸಿದ್ದರು. ಆ ಸಮಯದಲ್ಲಿ, ಅವರ ಹೆಸರು ಸ್ಪರ್ಧಿ ಅರ್ಹಾನ್ ಜೊತೆ ಸಂಬಂಧ ಹೊಂದಿತ್ತು. ನಂತರ, ಅರ್ಹಾನ್ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಅವರಿಗೆ ತಿಳಿಯಿತು. ಆ ಬಳಿಕ ಅವರ ಸಂಬಂಧ ಕೊನೆಗೊಂಡಿತು.ಬಳಿಕ ರಶ್ಮಿಯ ಹೆಸರು ಬಿಗ್ ಬಾಸ್‌ನ ಮತ್ತೊಬ್ಬ ಸ್ಪರ್ಧಿ ಸಿದ್ಧಾರ್ಥ್ ಶುಕ್ಲಾ ಜೊತೆಯೂ ಕೇಳಿ ಬಂದಿತ್ತು. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ನಿರಾಕರಿಸಿದರು. ರಶ್ಮಿ ಮತ್ತು ಸಿದ್ಧಾರ್ಥ್ 'ದಿಲ್ ಸೆ ದಿಲ್ ತಕ್' ನಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರು.

78

ಧಾರಾವಾಹಿಗಳಲ್ಲಿ ಬಲವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ರಶ್ಮಿ, ನಿಜ ಜೀವದಲ್ಲಿ ಅದಕ್ಕಿಂತಲೂ ಸವಾಲಿನ ಸಮಯ ಎದುರಿಸಿದ್ದಾರೆ. ಭಾವನಾತ್ಮಕ ಒತ್ತಡ ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದೂ ಸಂದರ್ಶನವೊಂದರಲ್ಲಿ ಹೇಳಿದ್ದರು.

88

"ನಾನು ಎಂಟು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಸಮಯವಿತ್ತು. ಅದರಿಂದ ಹೊರಬರಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಏಕೆಂದರೆ ನಾನು ಬಹಳಷ್ಟು ಭಾವನಾತ್ಮಕ ಒತ್ತಡದಲ್ಲಿದ್ದೆ. ಎಲ್ಲವನ್ನೂ ಮತ್ತೆ ಹಳಿಗೆ ತರಲು ಮತ್ತು ಹೊಸದಾಗಿ ಪ್ರಾರಂಭಿಸಲು ನನಗೆ ಕೆಲವು ವರ್ಷಗಳು ಬೇಕಾಯಿತು. ಈಗ ನಾನು ನಿಧಾನವಾಗಿ ಹಳಿಗೆ ಮರಳುತ್ತಿದ್ದೇನೆ" ಎಂದು ಅವರು ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories