Published : Jul 02, 2025, 01:10 PM ISTUpdated : Jul 02, 2025, 01:12 PM IST
ಅಣ್ಣಯ್ಯ ಸೀರಿಯಲ್‌ನಲ್ಲಿ ಗುಂಡಮ್ಮ ಮತ್ತು ಸೀನನ ನಡುವೆ ಮತ್ತೆ ಜಗಳ ಶುರುವಾಗಿದೆ. ರಾಣಿ ನಿಶ್ಚಿತಾರ್ಥ ಮುಗಿಸಿ ಮನೆಗೆ ಬಂದ ಗುಂಡಮ್ಮ, ಸೀನನ ಫೋನ್ ನೋಡಿ ಪೊರಕೆ ಹಿಡಿದಿದ್ದಾಳೆ. ಇದಕ್ಕೆ ಕಾರಣ ಪಿಂಕಿ.
ಅಣ್ಣಯ್ಯ ಸೀರಿಯಲ್‌ನಲ್ಲಿ ಜಿಮ್ ಸೀನ ಮತ್ತು ಗುಂಡಮ್ಮ ಅಂದ್ರೆ ಎಲ್ಲರಿಗೂ ಇಷ್ಟ. ಇವರಿಬ್ಬರ ಜಗಳ ನೋಡಲು ವೀಕ್ಷಕರು ಕಾಯುತ್ತಿರುತ್ತಾರೆ. ಇದೀಗ ಗುಂಡಮ್ಮ ಕೈಯಲ್ಲಿ ಪೊರಕೆ ಹಿಡಿದು ನಿಂತಿದ್ದಾಳೆ.
25
ಗುಂಡಮ್ಮ ಮತ್ತು ಸೀನನ ಸಂಸಾರದಲ್ಲಿ ಪಿಂಕಿ ಮಧ್ಯೆ ಬರುತ್ತಿರೋದು ಶಿವಣ್ಣನ ಗಮನಕ್ಕೆ ಬಂದಿತ್ತು. ಹಾಗಾಗಿ ಪಿಂಕಿಗೆ ನೇರವಾಗಿಯೇ ಶಿವಣ್ಣ ವಾರ್ನ್ ಮಾಡಿದ್ದಾನೆ. ಸೀನ ಮತ್ತು ಗುಂಡು ಚೆನ್ನಾಗಿರುವಂತೆ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ಪಿಂಕಿಗೆ ಶಿವಣ್ಣ ಹೇಳಿದ್ದಾನೆ.
35
ಇತ್ತ ರಾಣಿ ನಿಶ್ಚಿತಾರ್ಥ ಮುಗಿಯುತ್ತಿದ್ದಂತೆ ಗುಂಡಮ್ಮ ತನ್ನ ಕುಟುಂಬಸ್ಥರೊಂದಿಗೆ ಮನೆಗೆ ಹಿಂದಿರುಗಿದ್ದಾಳೆ. ಮನೆಯಲ್ಲಿ ಸೀನನ ಫೋನ್ ನೋಡುತ್ತಿದ್ದಂತೆ ಗುಂಡಮ್ಮ ಪೊರಕೆ ಹಿಡಿದು ನಿಂತಿದ್ದಾಳೆ. ಗುಂಡಮ್ಮಳ ಅವತಾರ ನೋಡಿದ ಮಾವ ಮಾದಪ್ಪ ಮತ್ತು ಅತ್ತೆ ಲೀಲಾ ಶಾಕ್ ಆಗಿದ್ದಾರೆ.
ಪಿಂಕಿ ಬಂದ ಕೂಡಲೇ ಸೀನನಲ್ಲಾದ ಬದಲಾವಣೆಯನ್ನು ಗಮನಿಸಿದ ಪಾರು, ಹೊರಗೆ ಕರೆದು ತಮ್ಮನಿಗೆ ಕಿವಿಮಾತು ಹೇಳಿದ್ದಾಳೆ. ಪಾರು ಮಾತು ಕೇಳಿದ ಸೀನ ಸಹ ಪಿಂಕಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ.
55
ಪಿಂಕಿ ಮತ್ತು ಜಿಮ್ ಸೀನ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಸೀನನ ತಾಯಿ ಲೀಲಾ ಸಹ ಒಪ್ಪಿಕೊಂಡಿದ್ದಳು. ಆದ್ರೆ ಗುಂಡಮ್ಮನ ಮದುವೆಯಲ್ಲಿ ಬದಲಾದ ಸನ್ನಿವೇಶಕ್ಕೆ ಸಿಲುಕಿದ ಸೀನ ತಂದೆ ಮಾದಪ್ಪ ಬಲವಂತಕ್ಕೆ ಗುಂಡಮ್ಮಳಿಗೆ ತಾಳಿ ಕಟ್ಟುತ್ತಾನೆ.