ಆಗಸ್ಟ್ ತಿಂಗಳಲ್ಲಿ ಬಿಗ್ ಬಾಸ್ 19 ಆರಂಭ, ಈ ಬಾರಿ ಯೂಟ್ಯೂಬರ್‌ಗೂ ಸ್ಥಾನ

Published : Jul 01, 2025, 04:38 PM ISTUpdated : Jul 01, 2025, 04:41 PM IST

ಬಿಗ್ ಬಾಸ್ 19ನೇ ಆವೃತ್ತಿ ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. ಈಗಾಗಲೇ ತಯಾರಿ ಶುರುವಾಗಿದೆ. ಆಗಸ್ಟ್ ತಿಂಗಳಲ್ಲಿ ಬಿಗ್ ಬಾಸ್ 19 ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ಈ ಬಾರಿ ಖ್ಯಾತ ಯೂಟ್ಯೂಬರ್ ಕೂಡ ಬಿಗ್ ಬಾಸ್ ಮನೆ ಸೇರಿಕೊಳ್ಳುವ ಸೂಚನೆ ಸಿಕ್ಕಿದೆ. 

PREV
15

ಬಿಗ್ ಬಾಸ್ 19ನೇ ಆವೃತ್ತಿಗೆ ಎಲ್ಲಾ ತಯಾರಿ ನಡೆಯುತ್ತಿದೆ. ಆಗಸ್ಟ್ ತಿಂಗಳಲ್ಲಿ ಹಿಂದಿ ಬಿಗ್ ಬಾಸ್ ಆರಂಭಗೊಳ್ಳುತ್ತಿದೆ. ಈ ಬಾರಿಯೂ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಈಗಾಗಲೇ ಪ್ರೊಮೋ ಶೂಟ್ ಪೂರ್ಣಗೊಂಡಿದೆ. ಈ ಬಾರಿ ಬಿಗ್ ಬಾಸ್ ವಿಶೇಷ ಥೀಮ್ ಅಡಿಯಲ್ಲಿ ಆರಂಭಗೊಳ್ಳುತ್ತಿದೆ. ಇದೇ ವೇಳೆ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಇದರ ನಡುವೆ ಸಂಭಾವ್ಯ ಸ್ಪರ್ಧಿಗಳ ಹೆಸರು ಹರಿದಾಡುತ್ತಿದೆ.

25

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯೂಟ್ಯೂಬರ್‌ಗೂ ಸ್ಥಾನ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಸೆಲೆಬ್ರೆಟಿ ಯೂಟ್ಯೂಬರ್ ಈ ಬಾರಿ ಬಿಗ್ ಬಾಸ್ ಭಾಗವಾಗಲಿದ್ದಾರೆ. ಹಲವು ಸ್ಪರ್ಧಿಗಳ ಹೆಸರು ಹರಿದಾಡುತ್ತಿದೆ. ಈ ಪೈಕಿ ಯೂಟ್ಯೂಬರ್ ಪುರವ್ ಝಾ ಕೂಡ ಮುಂಚೂಣಿಯಲ್ಲಿದ್ದಾರೆ. ಈ ಮೂಲಕ ಬಿಗ್ ಬಾಸ್ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಡಲು ನಿರ್ಮಾಣ ಸಂಸ್ಥೆ ಮುಂದಾಗಿದೆ.

35

ಪುರವ್ ಝಾ ಹೆಸರಿನ ಜೊತೆಗೆ ವಿವಾದಗಳ ಸುಳಿಯಲ್ಲಿರುವ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕೂಡ ಬಿಗ್ ಬಾಸ್ ಮನೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಫೈಸಲ್ ಶೇಕ್, ರಾಮ್ ಕಪೂರ್, ತನುಶ್ರಿ ದತ್ತಾ, ಗೌರವ್ ತನೇಜಾ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ. ಸ್ಪರ್ಧಿಗಳ ಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿಲ್ಲ

45

ಈ ಬಾರಿಯ ಆವೃತ್ತಿಯಲ್ಲಿ ಮತ್ತೆ ಸೀಕ್ರೆಟ್ ರೂಮ್ ಕಾನ್ಸೆಪ್ಟ್ ಮರಳಿ ಬರುತ್ತಿದೆ. ಆದರೆ ಕೆಲ ಬದಲಾವಣೆ ಮಾಡಲಾಗಿದೆ. ಇದರ ಜೊತೆಗೆ ಮತ್ತೊಂದು ಟ್ವಿಸ್ಟ್ ನೀಡಲಾಗಿದೆ. ಈ ಬಾರಿ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವುದು ಪ್ರೇಕ್ಷಕರು. ಇಲ್ಲೀವರೆಗೆ ಸ್ಪರ್ಧಿಗಳು ನೀಡಿದ ಕಳಪೆ ಆಧಾರದಲ್ಲಿ ಮನೆಯಿಂದ ಹೊರಹೋಗಲು ನಾಮಿನೇಟ್ ಮಾಡಲಾಗುತ್ತಿತ್ತು. ಈ ಬಾರಿ ಪ್ರೇಕ್ಷಕರು ನಾಮಿನೇಟ್ ಮಾಡಿಲಿದ್ದಾರೆ. ಮನೆಯಲ್ಲಿ ಉಳಿಯಲು ಸ್ಪರ್ಧಿಗಳು ಹೋರಾಟ ಮಾಡಬೇಕಾಗುತ್ತದೆ.

55

ಜುಲೈ ಮೊದಲ ವಾರದಿಂದ ಬಿಗ್ ಬಾಸ್ 19ರ ಪ್ರೋಮೋ ಬಿಡುಗಡೆಯಾಗಲಿದೆ. ಆಗಸ್ಟ್ ತಿಂಗಳಿಂದ ಬಿಗ್ ಬಾಸ್ 19ನೇ ಆವೃತ್ತಿ ಆರಂಭಗೊಳ್ಳಲಿದೆ. ರಿವೈಂಡ್ ಥೀಮ್ ಅಡಿಯಲ್ಲಿ ಈ ಬಾರಿ ಹೊಸ ಹೊಸ ಸ್ಪರ್ಧೆ, ಹೊಸ ಸವಾಲುಗಳನ್ನು ನೀಡಲು ಬಿಗ್ ಬಾಸ್ ಮುಂದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories