ಬಿಗ್ ಬಾಸ್ ಕನ್ನಡ ಶೋನಲ್ಲಿ ಭಾಗವಹಿಸಬೇಕು ಅಂತ ಅನೇಕರು ಬಯಸುತ್ತಾರೆ. ಆದರೆ ಈ ಸೆಲೆಬ್ರಿಟಿಗಳು ಬಿಗ್ ಬಾಸ್ ಶೋ ಆಫರ್ ರಿಜೆಕ್ಟ್ ಮಾಡಿದ್ದರು.
27
ಶ್ವೇತಾ ಆರ್ ಪ್ರಸಾದ್
'ಶ್ರೀರಸ್ತು ಶುಭಮಸ್ತು' ಹಾಗೂ 'ರಾಧಾ ರಮಣ' ಧಾರಾವಾಹಿಯಲ್ಲಿ ನಟಿಸಿದ್ದ ಶ್ವೇತಾ ಆರ್ ಪ್ರಸಾದ್ ಅವರಿಗೆ ಸಾಕಷ್ಟು ಬಾರಿ ಬಿಗ್ ಬಾಸ್ ಕನ್ನಡ ಶೋನಿಂದ ಆಫರ್ ಹೋಗಿದೆ. ಆದರೆ ಅವರು ಎಂದೂ ಕೂಡ ಈ ಆಫರ್ ಒಪ್ಪಿಕೊಂಡಿಲ್ಲ. ಸದ್ಯ ಸಿನಿಮಾ ನಿರ್ಮಾಪಕಿಯಾಗಿ ಅವರು ಬ್ಯುಸಿ ಇದ್ದಾರೆ.
37
ಜ್ಯೋತಿ ರೈ
ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ, ಈಗ ತೆಲುಗಿನಲ್ಲಿ ಸೆಟಲ್ ಆಗಿರುವ ಜ್ಯೋತಿ ರೈಗೂ ಕೂಡ ಬಿಗ್ ಬಾಸ್ ಶೋ ಆಫರ್ ಬಂದಿತ್ತು.
47
ಅಶ್ವಿನಿ
ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸೋಕೆ ಕರೆ ಹೋಗಿತ್ತು ಎನ್ನಲಾಗಿದೆ. ಆದರೆ ಅವರು ಆಸಕ್ತಿ ತೋರಿಸಿಲ್ಲ. ಈಗ ಅವರು ನಟನೆಯಿಂದ ದೂರ ಇದ್ದು, ಸ್ವಂತ ಉದ್ಯಮದ ಕಡೆ ಮುಖ ಮಾಡಿದ್ದಾರೆ.
57
ಕಾವ್ಯಾ ಗೌಡ
ʼರಾಧಾ ರಮಣʼ ಧಾರಾವಾಹಿ ನಟಿ ಕಾವ್ಯಾ ಗೌಡ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆಮೇಲೆ ಅವರು ಶೋನಲ್ಲಿ ಭಾಗವಹಿಸೋದಿಲ್ಲ ಎಂದು ಹೇಳಿದ್ದರು.
67
ಅನಿರುದ್ಧ ಜತ್ಕರ್
ʼಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ಅನಿರುದ್ಧ ಜತ್ಕರ್ ಕೂಡ ಬಿಗ್ ಬಾಸ್ ಶೋನಲ್ಲಿ ಭಾಗವಹಿಸ್ತಾರೆ ಎನ್ನಲಾಗಿತ್ತು. ಆದರೆ ಇವರು ಭಾಗವಹಿಸೋದಿಲ್ಲ ಎಂದು ಹೇಳಿದ್ದರು.
77
ಶ್ರೀ ಮಹದೇವ್
'ಶ್ರೀರಸ್ತು ಶುಭಮಸ್ತು' ಹಾಗೂ 'ಚಿಟ್ಟೆ ಹೆಜ್ಜೆ' ಧಾರಾವಾಹಿ ನಟ ಶ್ರೀ ಮಹದೇವ್ ಅವರು 'ಶ್ರೀ ಗಜಾನನ & ಗ್ಯಾಂಗ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಸಿನಿಮಾದಲ್ಲಿ ಮಿಂಚುವ ಆಸೆ ಹೊಂದಿರುವ ಶ್ರೀ ಮಹದೇವ್ ಅವರಿಗೂ ಬಿಗ್ ಬಾಸ್ ಆಫರ್ ಬಂದಿತ್ತು. ಆದರೆ ಅವರು ಕಡ್ಡಿ ಮುರಿದಂತೆ ಆಗೋದಿಲ್ಲ ಎಂದು ಹೇಳಿದ್ದರು.