ಆ್ಯಂಕರ್ ಜಾಹ್ನವಿ ಮುಂದೆ ಶ್ರೀದೇವಿ ಮಗಳು ಜಾನ್ವಿಯೇ ಡಲ್, ಹೊಗಳಿ ಅಟ್ಟಕ್ಕೇರಿಸಿದ ನೆಟ್ಟಿಗರು

Published : Oct 15, 2025, 04:39 PM IST

Anchor Jhanvi: ಸದ್ಯ 'ಬಿಗ್‌ ಬಾಸ್‌' ಮನೆಗೆ ಗ್ಲಾಮರ್‌ ಟಚ್‌ ಕೊಟ್ಟಿರುವ ಜಾಹ್ನವಿ ಬಗ್ಗೆ ಅಭಿಮಾನಿಗಳು ಕೆಲವು ವಿಡಿಯೋ, ಶಾರ್ಟ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದು, ಜಾಹ್ನವಿ ಮುಂದೆ ದಿವಂಗತ ನಟಿ ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್ ಕೂಡ ಏನು ಅಲ್ಲ ಅಂದಿದ್ದಾರೆ. 

PREV
16
ಅಭಿಮಾನಿ ಬಳಗ ಹೊಂದಿರುವ ಜಾಹ್ನವಿ

ನಿರೂಪಕಿ ಜಾಹ್ನವಿ ಈಗ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼರ ಸ್ಪರ್ಧಿಯಾಗಿದ್ದಾರೆ. ಐದನೇ ಕಂಟೆಸ್ಟೆಂಟ್‌ ಆಗಿ ದೊಡ್ಮನೆಗೆ ಸ್ಟೈಲೀಶ್‌ ಆಗಿ ಎಂಟ್ರಿ ಕೊಟ್ಟ ಜಾಹ್ನವಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಅದೇನೇ ಇರಲಿ, ಜಾಹ್ನವಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. 

26
ಗ್ಲಾಮರ್‌ ಟಚ್‌ ಕೊಟ್ಟಿರುವ ಜಾಹ್ನವಿ

ಸದ್ಯ 'ಬಿಗ್‌ ಬಾಸ್‌' ಮನೆಗೆ ಗ್ಲಾಮರ್‌ ಟಚ್‌ ಕೊಟ್ಟಿರುವ ಜಾಹ್ನವಿ ಬಗ್ಗೆ ಅಭಿಮಾನಿಗಳು ಕೆಲವು ವಿಡಿಯೋ, ಶಾರ್ಟ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದು, ಜಾಹ್ನವಿ ಮುಂದೆ ದಿವಂಗತ ನಟಿ ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್ ಕೂಡ ಏನು ಅಲ್ಲ ಅಂದಿದ್ದಾರೆ.

36
ಯಾವ ಬಾಲಿವುಡ್​​​ ನಟಿಯರಿಗಿಂತಲೂ ಕಮ್ಮಿ ಇಲ್ಲ

ಜಾಹ್ನವಿ ಬಗ್ಗೆ ಹಾಗೆನ್ನಲೂ ಕಾರಣವೂ ಇದೆ. ಗ್ಲಾಮರ್‌ನಲ್ಲಿ ಯಾವ ಬಾಲಿವುಡ್​​​ ನಟಿಯರಿಗಿಂತಲೂ ಕಮ್ಮಿ ಇಲ್ಲ ಜಾಹ್ನವಿ. ಬಹುಶಃ ಅವರ ಇನ್‌ಸ್ಟಾಗ್ರಾಂ ಪೇಜ್‌ ಅನ್ನ ಸ್ಕ್ರೋಲ್ ಮಾಡಿದರೆ ನಿಮಗೂ ಹಾಗೆನಿಸದರೆ ಆಶ್ಚರ್ಯವೇನಿಲ್ಲ ಬಿಡಿ.

46
ನಿರೂಪಕಿಯಾಗಿ ವೃತ್ತಿಜೀವನ ಆರಂಭ

ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ವೃತ್ತಿಜೀವನವನ್ನು ಆರಂಭಿಸಿ, ʻಗಿಚ್ಚಿ ಗಿಲಿಗಿಲಿʼ ಮತ್ತು ʻನನ್ನಮ್ಮ ಸೂಪರ್‌ ಸ್ಟಾರ್‌ʼನಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು ಜಾಹ್ನವಿ. ʻಬಿಗ್‌ ಬಾಸ್‌ʼ ಖ್ಯಾತಿಯ ರೂಪೇಶ್‌ ಶೆಟ್ಟಿ ನಟನೆಯ ʻಅಧಿಪತ್ರʼ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೂ ಜಾಹ್ನವಿ ಗಮನ ಸೆಳೆದರು. ಆ್ಯಡ್‌ ಶೂಟ್‌ಗಳಲ್ಲಿ ಬ್ಯುಸಿಯಾಗಿರುವ ಜಾಹ್ನವಿ, ಇತ್ತೀಚೆಗೆ ದೊಡ್ಮನೆ ಸೇರಿದರು.

56
ಡಿವೋರ್ಸ್‌ ವಿಚಾರ ರಿವೀಲ್‌

ಈ ಹಿಂದೆ ಜಾಹ್ನವಿ ತಮ್ಮ ಮಾಜಿ ಪತಿ ಕಾರ್ತಿಕ್‌ ಅವರಿಂದ ಡಿವೋರ್ಸ್‌ ಪಡೆದಿದ್ದರ ಬಗ್ಗೆ ಹೇಳಿಕೊಂಡಿದ್ದರು. ಅವರ ಮಾಜಿ ಪತಿ ಮತ್ತೊಂದು ಮದುವೆಯಾಗಿ ಮಗುವೊಂದು ಇದೆ. ಇದರ ವಿಚಾರವನ್ನು ಜಾಹ್ನವಿ ರಿವೀಲ್‌ ಮಾಡಿದ್ದರು.

66
ಎರಡನೇ ಮದುವೆ ಬಗ್ಗೆಯೂ ಮಾತನಾಡಿದ್ದ ಜಾಹ್ನವಿ

ಇದೇ ಸಂದರ್ಭದಲ್ಲಿ ಎರಡನೇ ಮದುವೆ ಬಗ್ಗೆಯೂ ಮಾತನಾಡಿದ್ದರು ಜಾಹ್ನವಿ. “ಖಂಡಿತವಾಗಿಯೂ ಎರಡನೇ ಮದುವೆಯಾಗುವ ಆಲೋಚನೆ ಇಲ್ಲ. ನನಗೆ ಮೊದಲ ಮದುವೆಯಿಂದ ಒಳ್ಳೆಯ ಅನುಭವ ಆಗಿದೆ. ಹಾಗಾಗಿ ನನ್ನ ಜೀವನದಲ್ಲಿ ಮತ್ತೆ ಮದುವೆ ಇಲ್ಲವೇ ಇಲ್ಲ. ಒಂಟಿಯಾಗೇ ತುಂಬಾ ಖುಷಿಯಾಗಿದ್ದೇನೆ, ಮಗನ ಭವಿಷ್ಯ ರೂಪಿಸಬೇಕು. ಅವನಿಗೆ ಜಾಸ್ತಿ ಪ್ರೀತಿ ಮತ್ತು ಟೈಮ್‌ ಕೊಡಬೇಕು ಅನ್ನೋದು ಬಿಟ್ರೆ ಎರಡನೇ ಮದುವೆ ಬಗ್ಗೆ ಯೋಚನೆಯೇ ಇಲ್ಲ” ಎಂದು ಹೇಳಿಕೊಂಡಿದ್ದರು.

Read more Photos on
click me!

Recommended Stories