ನಟಿ ನಿವೇದಿತಾ ಗೌಡ ಡಿವೋರ್ಸ್ ನಂತರ ಮತ್ತೆ ಮದುವೆ, ಚಂದನ್ ಶೆಟ್ಟಿಯೊಂದಿಗಿನ ಸಂಬಂಧವೂ ರಿವೀಲ್!

Published : Oct 15, 2025, 03:57 PM IST

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಚಂದನ್ ಶೆಟ್ಟಿ ಜೊತೆಗಿನ ವಿಚ್ಛೇದನದ ನಂತರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೌನ ಮುರಿದಿದ್ದಾರೆ. ಮತ್ತೆ ಮದುವೆಯಾಗಲು ಭಯವಿದೆ ಎಂದಿರುವ ಅವರು, ತಾವು ಮಾಡಿದ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದಿದ್ದಾರೆ. ಚಂದನ್ ಜೊತೆಗಿನ ಸಂಬಂಧದ ಬಗ್ಗೆ ತಿಳಿಸಿದ್ದಾರೆ.

PREV
19
ಡಿವೋರ್ಸ್ ನಂತರದ ವೈಯಕ್ತಿಕ ಜೀವನ ರಹಸ್ಯ ಬಿಚ್ಚಿಟ್ಟ ನಿವೇದಿತಾ

ಬಿಗ್ ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಮತ್ತು ಭವಿಷ್ಯದ ಯೋಜನೆಗಳ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ವಿಶೇಷ ಮಾತುಕತೆ ನಡೆಸಿದ್ದು, ತಮ್ಮ ಮದುವೆ ಮತ್ತು ವಿಚ್ಛೇದನದ ಕುರಿತು ಮೌನ ಮುರಿದಿದ್ದಾರೆ.

29
ಚಂದನ್ ಶೆಟ್ಟಿ ಜೊತೆಗೆ ಸಂವಂಧವೇ ಇಲ್ಲ:

ರ‍್ಯಾಪರ್ ಚಂದನ್ ಶೆಟ್ಟಿ ಅವರೊಂದಿಗಿನ ವಿಚ್ಛೇದನದ ನಂತರದ ತಮ್ಮ ಜೀವನದ ಬಗ್ಗೆ ಮಾತನಾಡಿದ ನಿವೇದಿತಾ, ತಾವು ಪ್ರಸ್ತುತ ಸಂತೋಷವಾಗಿದ್ದು, ತಮ್ಮ ವೃತ್ತಿಜೀವನದತ್ತ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ.

39
ಮತ್ತೆ ಮದುವೆಯ ಬಗ್ಗೆ ಭಯ:

ಮದುವೆಯ ಜೀವನದಲ್ಲಿ ಅನುಭವಿಸಿದ ನೋವು ಮತ್ತು ಕಹಿ ಘಟನೆಗಳ ಹಿನ್ನೆಲೆಯಲ್ಲಿ, ಮತ್ತೆ ಮದುವೆಯಾಗುವ ಬಗ್ಗೆ ಅವರಿಗೆ ಭಯವಿದೆ ಎಂದು ನಿವೇದಿತಾ ಗೌಡ ಒಪ್ಪಿಕೊಂಡಿದ್ದಾರೆ. 'ಮತ್ತೆ ಮದುವೆ ಅಂದರೆ ಭಯ ಆಗುತ್ತೆ. ಈಗ ನಾನು ತುಂಬಾ ಹ್ಯಾಪಿ ಆಗಿದ್ದೇನೆ.

49
ತಪ್ಪನ್ನು ಮತ್ತೆ ಮಾಡುವುದಿಲ್ಲ

ನಾನು ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ತಪ್ಪು ಮಾಡುವುದು ಮತ್ತು ಅದರಿಂದ ಪಾಠ ಕಲಿಯುವುದು ಮನುಷ್ಯನ ಸಹಜ ಪ್ರವೃತ್ತಿ. ಆದರೆ, ಅದೇ ತಪ್ಪನ್ನು ಪುನಃ ಮಾಡುವ ಯೋಚನೆ ಇಲ್ಲ' ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

59
ಚಂದನ್ ಶೆಟ್ಟಿ ಜೊತೆ ಸಂಪರ್ಕ ಇಲ್ಲ:

ವಿಚ್ಛೇದನವಾದ ನಂತರ ಮಾಜಿ ಪತಿ ಚಂದನ್ ಶೆಟ್ಟಿ ಅವರೊಂದಿಗೆ ಯಾವುದೇ ಸಂಪರ್ಕದಲ್ಲಿ ಇಲ್ಲ ಎಂಬುದನ್ನು ನಿವೇದಿತಾ ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಸಂಬಂಧಗಳು ಮುರಿದುಬಿದ್ದ ನಂತರ ವೃತ್ತಿಪರ ಜೀವನದ ಮೇಲೆ ಸಂಪೂರ್ಣ ಗಮನ ಹರಿಸಲು ನಿವೇದಿತಾ ನಿರ್ಧರಿಸಿದ್ದಾರೆ.

69
ಐಟಂ ಸಾಂಗ್‌ ಬಗ್ಗೆ ಸ್ಪಷ್ಟನೆ:

ಸ್ಯಾಂಡಲ್‌ವುಡ್‌ನಲ್ಲಿ ಐಟಂ ಸಾಂಗ್‌ಗಳಲ್ಲಿ ನಟಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ನನಗೆ ಅವಕಾಶ ಸಿಕ್ಕಿಲ್ಲ ಅಂತ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿಲ್ಲ. 'ಐ ಆಮ್ ಗಾಡ್' ಸಿನಿಮಾದಲ್ಲಿ ನಾನು ಮಾಡಿದ ಸ್ಪೆಷಲ್ ಹಾಡು ತುಂಬಾ ಚೆನ್ನಾಗಿತ್ತು.

79
ನಂಗೆ ಇಷ್ಟವಾದರೆ ಪಾತ್ರ ಎಂಥದ್ದೇ ಆದ್ರೂ ಮಾಡ್ತೀನಿ

ಒಂದು ಸಿನಿಮಾದಲ್ಲಿ ಒಳ್ಳೆಯ ಕಥೆ ಮತ್ತು ನನಗೆ ಇಷ್ಟವಾಗುವ ಪಾತ್ರವಿದ್ದರೆ, ಯಾವುದೇ ರೀತಿಯ ಹಾಡಾಗಲಿ ನಟಿಸಲು ನನಗೆ ಸಮಸ್ಯೆಯಿಲ್ಲ. ಆದರೆ, ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಐಟಂ ಹಾಡುಗಳನ್ನು ಒಪ್ಪಿಕೊಂಡಿಲ್ಲ' ಎಂದು ಸ್ಪಷ್ಟಪಡಿಸಿದರು.

89
ಐ ಆಮ್ ಗಾಡ್ ಸಿನಿಮಾ

ಸದ್ಯ ನಿವೇದಿತಾ ಗೌಡ ಅವರು 'ಐ ಆಮ್ ಗಾಡ್' ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ನಟಿಸಿದ್ದು, ಈ ಮೂಲಕ ಚಿತ್ರರಂಗದಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಧೈರ್ಯವಾಗಿ ಮಾತನಾಡಿರುವ ಅವರ ನಿರ್ಧಾರವು ಹಲವು ಯುವಜನರಿಗೆ ಪ್ರೇರಣೆಯಾಗಲಿದೆ.

99
ವಿದೇಶಗಳಿಗೆ ಹೆಚ್ಚು ಸುತ್ತಾಟ

ಇನ್ನು ನಟಿ ಡಿವೋರ್ಸ್ ನಂತರ ಸಿಂಗಲ್ಸ್ ಜೀವನವನ್ನು ಎಂಜಾಯ್ ಮಾಡುತ್ತಿದ್ದು, ಬಿಡುವು ಸಿಕ್ಕ ಸಮಯದಲ್ಲೆಲ್ಲಾ ಸ್ನೇಹಿತರೊಂದಿಗೆ ವಿದೇಶದಲ್ಲಿ ಸುತ್ತಾಡಲು ಹೋಗುತ್ತಾರೆ. ಇತ್ತೀಚೆಗೆ ವಿಯೆಟ್ನಾಂ ಮತ್ತು ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಸುತ್ತಾಡಿ ಬಂದು ಅದರ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ.

Read more Photos on
click me!

Recommended Stories